ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಾನೂನು ಕ್ರೈಮ್ ನ್ಯೂಸ್ ಚರ್ಚೆಗಳು ಪ್ರಕಟಣೆ ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ಸಾಮಾನ್ಯ ಸ್ಥಳೀಯ
ನಗರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನಸಮಸ್ಯೆ ಜಲಸಿರಿ ಅಧಿಕಾರಿಗಳ ಸಭೆ ಕರೆದ ಶಾಸಕರು ಸಮಸ್ಯೆಗಳಿಗೆ ಸ್ಪಂದಿಸದಂತೆ ಅಧಿಕಾರಿಗಳ ತಡೆ: ಸಾರ್ವತ್ರಿಕ ಆಕ್ರೋಶ, ನೀತಿ ಸಂಹಿತೆ: ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವಲ್ಲಿ ಅಧಿಕಾರಿಗಳ ಅಡ್ಡಿ- ಎರಡು ದಿನದಲ್ಲಿ ಕುಡಿಯುವ ನೀರು ಸಮಸ್ಯೆ ಪರಿಹಾರ ಮಾಡದಿದ್ದಲ್ಲಿ ಕಚೇರಿಯಲ್ಲಿ ಧರಣಿ ಕೂರುವೆ: ಶಾಸಕ ಅಶೋಕ್ ರೈPublished
2 years agoon
By
Akkare News
ಬೆಂಗಳೂರು : ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಸಂಬಂಧಿಸಿದಂತೆ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಮಹಿಳೆ ವಿರುದ್ಧ ದೇವರಾಜೇಗೌಡ ಹೆಬ್ಬಾಳ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಪ್ರಕರಣ ಉಲ್ಟಾ ಹೊಡೆದಿದ್ದು ಹಿರಿಯೂರು ಠಾಣೆ ಪೊಲೀಸರು ಬಿಜೆಪಿ ಮುಖಂಡ ದೇವರಾಜೇಗೌಡರವರನ್ನು ಬಂಧಿಸಿದ್ದಾರೆ.
ಹೊಳೆನರಸೀಪುರದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಬಿಜೆಪಿ ಮುಖಂಡ ದೇವರಾಜೇಗೌಡ ಮೇಲೆ ಕೇಸ್ ಒಂದು ದಾಖಲಾಗಿತ್ತು. ಅದೇ ಮಹಿಳೆ ವಿರುದ್ಧ ಹೆಬ್ಬಾಳದಲ್ಲಿ ದೇವರಾಜೇಗೌಡ ಕೂಡ ದೂರು ದಾಖಲಿಸಿದ್ದರು. ತಮ್ಮ ನಿವೇಶನವೊಂದರ ಮಾರಾಟ ವಿಚಾರವಾಗಿ ವಕೀಲ ದೇವರಾಜೇಗೌಡ ಸಂಪರ್ಕ ಮಾಡಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದು ವಕೀಲ ದೇವರಾಜೇಗೌಡ ವಾಟ್ಸಪ್ ಕಾಲ್ ಮುಖಂತರ ಕಿರುಕುಲನೀಡುತಿದ್ದರೆಂದು ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ.
ಹೆದರಿಸಿ ಬೆದರಿಸಿ ತನ್ನ ಮೇಲೆ ದೌರ್ಜನ್ಯ ನಡೆಸಲಾಗಿದೆ. ವಿಡಿಯೋ ಕಾಲ್ ಮಾಡಿ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ. ವಿಡಿಯೋ ಕಾಲ್ ಮಾಡಿ ತನ್ನ ಖಾಸಗಿ ಅಂಗಾಂಗ ತೋರಿಸಿ ಪ್ರಚೋದನೆಗೆ ಯತ್ನಿಸಿದ್ದಾರೆ. ಹೀಗಾಗಿ ಮಹಿಳೆ ದೂರು ಆಧರಿಸಿ ಹೊಳೆನರಸೀಪುರ ನಗರ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.