ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಾನೂನು ಕ್ರೈಮ್ ನ್ಯೂಸ್ ಚರ್ಚೆಗಳು ಪ್ರಕಟಣೆ ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ಸಾಮಾನ್ಯ ಸ್ಥಳೀಯ
ನಗರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನಸಮಸ್ಯೆ ಜಲಸಿರಿ ಅಧಿಕಾರಿಗಳ ಸಭೆ ಕರೆದ ಶಾಸಕರು ಸಮಸ್ಯೆಗಳಿಗೆ ಸ್ಪಂದಿಸದಂತೆ ಅಧಿಕಾರಿಗಳ ತಡೆ: ಸಾರ್ವತ್ರಿಕ ಆಕ್ರೋಶ, ನೀತಿ ಸಂಹಿತೆ: ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವಲ್ಲಿ ಅಧಿಕಾರಿಗಳ ಅಡ್ಡಿ- ಎರಡು ದಿನದಲ್ಲಿ ಕುಡಿಯುವ ನೀರು ಸಮಸ್ಯೆ ಪರಿಹಾರ ಮಾಡದಿದ್ದಲ್ಲಿ ಕಚೇರಿಯಲ್ಲಿ ಧರಣಿ ಕೂರುವೆ: ಶಾಸಕ ಅಶೋಕ್ ರೈಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಅಂಬಿಕಾ ಕ್ಯಾಂಪಸ್ ತೆರಳುವ ಅಗಲೀಕರಣಗೊಂಡ ರಸ್ತೆ ಉದ್ಘಾಟನೆ ನಗರ ಬೆಳೆಯಬೇಕಾದರೆ ರಸ್ತೆಗಳು ಸಮರ್ಪಕವಾಗಿರಬೇಕು:ಅಶೋಕ್ ಕುಮಾರ್ ರೈಅಭಿಪ್ರಾಯ ಅಭಿವೃದ್ಧಿ ಕಾರ್ಯಗಳು ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ಸಂಘ-ಸಂಸ್ಥೆಗಳು ಸಾಮಾನ್ಯ ಸ್ಥಳೀಯ
ಶಾಂತಿಮೊಗರು ಕಿಂಡಿ ಅಣೆಕಟ್ಟಿನಲ್ಲಿ ನೀರು ಸೋರಿಕೆ ತಡೆಯುವಂತೆ ಅಗ್ರಹಿಸಿ ಪ್ರತಿಭಟನೆ: ಒಂದು ವಾರದ ಸಮಯವಕಾಶ ಕೊಡಿ ಎಂದ ತಹಸೀಲ್ದಾರ್Published
1 year agoon
By
Akkare Newsಇನ್ನೇನು ಹೊಸವರ್ಷವನ್ನು ಸ್ವಾಗತಿಸಲು ಎಲ್ಲರೂ ಸಜ್ಜಾಗಿದ್ದಾರೆ. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ BBMP ಮತ್ತು ಪೊಲೀಸ್ ಇಲಾಖೆಯಿಂದ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ. ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪೊಲೀಸರು ಸಭೆ ನಡೆಸಿ ಈ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ.
ಹೊಸ ವರ್ಷಕ್ಕೆ ಮಾರ್ಗಸೂಚಿ ಈ ರೀತಿ ಇದೆ:
ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಮಹಿಳಾ ಪೊಲೀಸರ ನಿಯೋಜನೆ ರಾತ್ರಿ 8 ಗಂಟೆ ಬಳಿಕ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿವಾಹನ ಸಂಚಾರ ಬಂದ್ ರಾತ್ರಿ 1 ಗಂಟೆಯೊಳಗೆ ಹೊಸ ವರ್ಷಾಚರಣೆ ಮುಗಿಯಬೇಕು. ಬಾರ್ ಮತ್ತು ಪಬ್ಗಳು ರಾತ್ರಿ 1 ಗಂಟೆ ಬಳಿಕ ಬಂದ್ ಹೊಸ ವರ್ಷಾಚರಣೆಗೆ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರದಲ್ಲಿ ಅನುಮತಿ ಲೌಡ್ ಸ್ಪೀಕರ್, ಪಟಾಕಿ ಸಿಡಿಸಲು ನಿರ್ಬಂಧ ವಿವಿಧ ಭಾಗಗಳಲ್ಲಿ ಹೊಸ ವರ್ಷಾಚರಣೆಗೆ ಪೊಲೀಸ್ ಅನುಮತಿ ಕಡ್ಡಾಯ ಸಂಭ್ರಮಾಚರಣೆಗೆ ಬರುವವರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ರಾತ್ರಿ 10 ಗಂಟೆ ಬಳಿಕ ಪ್ರಮುಖ ಮೇಲ್ಸ್ತುವೆಗಳು ಬಂದ್ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ 200ಕ್ಕೂ ಹೆಚ್ಚು ಸಿಸಿ ಕ್ಯಾಮೆರಾ ಅಳವಡಿಕೆ.
ರಾತ್ರಿ ಇಡೀ ವಿದ್ಯುತ್ ಸಂಪರ್ಕ ಸ್ಥಗಿತವಾಗದಂತೆ ಕ್ರಮ ವಹಿಸಲು ಬೆಸ್ಕಾಂಗೆ ಸೂಚಿಸಲಾಗಿದೆ. ಬಾರ್, ರೆಸ್ಟೋರೆಂಟ್ಗಳಿಗೆ ಕಠಿಣ ಮಾರ್ಗಸೂಚಿ ರೂಪಿಸಲಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ವರ್ಷಾಂತ್ಯಕ್ಕೆ ಇರಲಿದೆ. ಹೆಚ್ಚು ಜನಸಂದಣಿ ಇರುವ ಸ್ಥಳಗಳು, ವಾಣಿಜ್ಯ ಪ್ರದೇಶಗಳು, ಪ್ರಮುಖ ರಸ್ತೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಸೂಚನೆ ನೀಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರು ಹೇಳಿದ್ದಾರೆ.
ಡಿ.31 ರಂದು ಒಂದು ಗಂಟೆಯೊಳಗೆ ಹೊಸ ವರ್ಷಾಚರಣೆ ಮುಗಿಸಬೇಕು. ರಾತ್ರಿ 10 ಗಂಟೆಯ ನಂತರ ಎಲ್ಲಾ ಮೇಲ್ಸ್ತುವೆಗಳಲ್ಲಿ ವಾಹನ ಸಂಚಾರ ನಿರ್ಬಂಧ, ಎಂ ಜಿ ರಸ್ತೆ ಬ್ರಿಗೇಡ್ ರಸ್ತೆಯಲ್ಲಿ 200 ಕ್ಕೂ ಹೆಚ್ಚು ಸಿಸಿ ಕ್ಯಾಮೆರಾ ಅಳವಡಿಕೆ. ರಾತ್ರಿ ಎಂಟು ಗಂಟೆಯ ನಂತರ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಸಂಚಾರ ಬಂದ್ ಎಂದು ತಿಳಿಸಿದ್ದಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬಿಎಂಟಿಸಿ ಬಸ್ಗಳ ಸಂಚಾರ ಇರಲಿದೆ. ಮೆಟ್ರೋ ರೈಲು ಸಂಚಾರ ರಾತ್ರಿ ಒಂದು ಗಂಟೆಯವರೆಗೆ ಇರಲಿದೆ. ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಮಹಳಾ ಪೊಲೀಸ್ ಸಿಬ್ಬಂದಿ ನಿಯೋಜನೆ, ಬಾರ್, ಪಬ್ ಒಂದು ಗಂಟೆಗೆ ಮುಚ್ಚುವಂತೆ ಸೂಚನೆ ನೀಡಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ.