ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಮನೋರಂಜನೆ

ಶ್ರೀ ಸೀತಾ ರಾಘವ ಮತ್ತು ಪ್ರೌಢಶಾಲಾ ವಿಭಾಗದ ಸಾಂಸ್ಕೃತಿಕ ಉತ್ಸವ-2023 ಗಾಳಿ ನಮಗೆಷ್ಟು ಮುಖ್ಯವೋ ಗಾಳಿಮಾತು ಅಷ್ಟೇ ಅಪಾಯಕಾರಿ – ಕುಮಾರ್ ಪೆರ್ನಾಜೆ

Published

on

ಪೆರ್ನಾಜೆ: ದ 17, ಪೆಟ್ಟು ತಿಂದ ಕಲ್ಲು ಸುಂದರ ವಿಗ್ರಹವಾಗುತ್ತದೆ ಹಾಗೆ ವಿದ್ಯಾರ್ಥಿಗಳನ್ನು ತಿದ್ದಿ ತಿಡಿ ರೂಪ ನೀಡುವ ಶಿಕ್ಷಕರು ಆದರ್ಶ ಗುರು. ಗಾಳಿ ನಮಗೆಷ್ಟು ಮುಖ್ಯವೋ ಗಾಳಿಮಾತು ಅಷ್ಟೇ ಅಪಾಯಕಾರಿ ನಂಬಿಕೆ ಅನ್ನೋದು ಬೆಲೆಕಟ್ಟಲಾಗದ ಅಮೂಲ್ಯ ರತ್ನ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆ ಜೇನು ಕೃಷಿಯನ್ನು ಮಾಡುವುದರಿಂದ ಕಲಿಕೆಯ ಜೊತೆ ಗಳಿಕೆಯನ್ನು ಮಾಡಬಹುದೆಂದು.

ಶ್ರೀ ಸೀತಾರಾಘವ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ವಿಭಾಗದಲ್ಲಿ ನಡೆದ ಡಿಸೆಂಬರ್ 15ರಂದು ಸಾಂಸ್ಕೃತಿಕ ಉತ್ಸವದಂದು ಮುಖ್ಯ ಅತಿಥಿಗಳಾಗಿ ಗಳಾಗಿ ಆಗಮಿಸಿದ ಪ್ರಗತಿಪರ ಕೃಷಿಕರು ಹವ್ಯಾಸಿ, ಬರಹಗಾರರು ಮತ್ತು ಸಂಸ್ಥೆಯ ಹಿರಿಯ ವಿದ್ಯಾರ್ಥಿ ಕುಮಾರ್ ಪೆರ್ನಾಜೆ ಯವರು ಸಂದರ್ಭೋಚಿತವಾಗಿ ಹಿತನುಡಿದರು. ಸ್ಪರ್ಧೆ ಹಾಗೂ ಅದರ ಮಹತ್ವ ಸೋಲು ಗೆಲುವು ಸಾಮಾನ್ಯ ಮತ್ತು ಸಮನಾಗಿ ಸ್ವೀಕರಿಸಬೇಕೆಂದು ಪ್ರೋತ್ಸಾಹದ ನುಡಿಯನ್ನು ಹಳೆಯ ವಿದ್ಯಾರ್ಥಿಗಳಾದ ದೇವಣ್ಣರೈ ಯವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.



ಎಲ್ಲಾ ಚಟುವಟಿಕೆಯಲ್ಲೂ ಕಾರ್ಯಕ್ರಮವನ್ನು ಅಳವಡಿಸಿಕೊಂಡು ತಮ್ಮನ್ನು ಸಾಬೀತುಪಡಿಸಿ ಪ್ರತಿಭೆಯನ್ನು ಹೊರ ಹಾಕಬೇಕೆಂದು ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ನೀಡುವ ಮೂಲಕ ಆಡಳಿತ ಮಂಡಳಿಯ ಆಡಳಿತ ಕಾರ್ಯದರ್ಶಿಗಳಾದ ಕೊಚ್ಚಿ ಕೃಷ್ಣ ಪ್ರಸಾದ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಕ್ಕಳಿಗೆ ಶುಭ ಹಾರೈಸಿದರು. ನಿರ್ದೇಶಕರು ಮತ್ತು ಸಂಸ್ಥೆಯ ಹಿರಿಯ ವಿದ್ಯಾರ್ಥಿಯಾದ ಆಶ್ಲೇಷರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯರಾದ ಮಂಟ್ಯಯ್ಯ ರವರು ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಸುಜಾತಾ ರವರು ವಂದನಾರ್ಪಣೆ ಮಾಡಿದರು. ಶಿಕ್ಷಕಿಯಾದ ಕುಮಾರಿ ಚರೀಷ್ಮಾ ಕಾರ್ಯಕ್ರಮವನ್ನು ನಿರೂಪಿಸಿದರು ಕಾರ್ಯಕ್ರಮದಲ್ಲಿ ಸಂಸ್ಥೆಯ ಬೋಧಕವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version