ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿವೃದ್ಧಿ ಕಾರ್ಯಗಳು

ಜ್ಞಾನ ಜಾಗರಣೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಕನ್ನಡ ಭಕ್ತಿಗೀತೆ ಬಿಡುಗಡೆ.

Published

on

ಪುತ್ತೂರು: ಹತ್ತೂರ ಒಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ರಥೋತ್ಸವದ ದಿನ ದಿನಾಂಕ 17-04-2024 ರಂದು ಜಿಲ್ಲೆಯ ಉದಯೋನ್ಮುಖ ಯುವ ಗಾಯಕರಾದ ನಿತೇಶ್ ಅನಂತಾಡಿ ಮತ್ತು ವಾಣಿ ಮಧ್ವರವರ ಸುಮಧುರ ಕಂಠದಲ್ಲಿ ಮೂಡಿಬರಲಿರುವ ‘ಜ್ಙಾನ ಜಾಗರಣೆ’ ಈ ಭಕ್ತಿಗೀತೆಯ ರಚನೆಯನ್ನು ಕನ್ನಡ-ತುಳು ಭಕ್ತಿಯ ಸಾಹಿತ್ಯ ಲೋಕದಲ್ಲಿ ಹಲವಾರು ಗೀತಾ ರಚನೆಯನ್ನು ಮಾಡುತ್ತಾ ಮಿಂಚುತ್ತಿರುವ ಯುವ ಸಾಹಿತಿ ಶೆಟ್ಟಿ ಅಜಯ್ ರಾಜ್ ರವರು ಮಾಡಿರುತ್ತಾರೆ.

ಯುವ ಉದ್ಯಮಿ ಯೋಗೀಶ್.ಯಸ್.ಸಾಮಾನಿ ಸಂಪಿಗೆದಡಿ-ಮಠಂತಬೆಟ್ಟು,ಕೋಡಿಂಬಾಡಿ ಮತ್ತು ಅಲ್ ಹಿಲಾಲ್ ಹಾಸ್ಪಿಟಲ್ ಮನಾಮ ಬೆಹೈರಿನ್ ನ ಉದ್ಯೋಗಿ ಪ್ರೇಮಾ ಹರೀಶ್ ಕೆ.ರವರು ನಿರ್ಮಾಪಕರಾಗಿದ್ದು ಸುವಾನಿ ಕ್ರಿಯೇಷನ್ ಅರ್ಪಿಸುತ್ತಿದೆ.






ವಿಡಿಯೋಗ್ರಾಫಿ ಮತ್ತು ಎಡಿಟಿಂಗ್ ರಕ್ಷಿತ್ ಆರ್.ಕೆ,ನೃತ್ಯ ವಿದುಷಿ ಅನುಶ್ರೀ ಸಾಮೆತಡ್ಕ ಹಾಗೂ ನವೀನ್ ರೈ ಬನ್ನೂರು,ರೂಪೇಶ್ ಪುತ್ತೂರು ರವರ ಸಹಕಾರವಿರಲಿದೆ.

ಸುವಾನಿ ಕ್ರಿಯೇಷನ್ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿರುವ ಈ ಭಕ್ತಿಗೀತೆಗೆ ತಮ್ಮೆಲ್ಲರ ಆಶೀರ್ವಾದ, ಪ್ರೋತ್ಸಾಹ ಮತ್ತು ಸಹಕಾರವಿರಲಿಯೆಂದು ನಿರ್ಮಾಪಕರು ಪ್ರಕಣೆಯಲ್ಲಿ ತಿಳಿಸಿರುತ್ತಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version