ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಜೀವನಶೈಲಿ

ಕುಮಾರ ಪರ್ವತ ಚಾರಣಿಗರಿಗೆ ಗಿರಿಗದ್ದೆ ಭಟ್ಟರು ಎಂದೇ ಪರಿಚಿತರಾಗಿದ್ದ ಮಹಾಲಿಂಗ ಭಟ್ ಇನ್ನಿಲ್ಲ

Published

on

ಸುಬ್ರಹ್ಮಣ್ಯ : ಕುಮಾರ ಪರ್ವತ ಚಾರಣಿಗರಿಗೆ ಗಿರಿಗದ್ದೆ ಭಟ್ಟರು ಎಂದೇ ಪರಿಚಿತರಾಗಿದ್ದರ ಸುಬ್ರಹ್ಮಣ್ಯ ಸಮೀಪದ ಕುಮಾರಪರ್ವತ ಗಿರಿಗದ್ದೆ ನಿವಾಸಿ ಮಹಾಲಿಂಗ ಭಟ್ (67) ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.ಕುಮಾರಪರ್ವತ ದಾರಿಯ ಗಿರಿಗದ್ದೆಯಲ್ಲಿ ಮನೆ ಹೊಂದಿದ್ದ ಮಹಾಲಿಂಗ ಭಟ್ ಅವರು ಗಿರಿಗದ್ದೆ ಭಟ್ಟರು ಎಂದೇ ಖ್ಯಾತರಾಗಿದ್ದರು. ಇವರು ಕುಮಾರಪರ್ವತ ಚಾರಣಿಗರಿಗೆ ಉಪಚಾರ, ಮಾರ್ಗದರ್ಶನ, ಆಹಾರ ತಯಾರಿಸಿ ನೀಡುವ, ಆಶ್ರಯ ನೀಡುವ ಮೂಲಕ ಚಿರಪರಿಚಿತರಾಗಿದ್ದು, ಚಾರಣಿಗರ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದರು.ಕುಮಾರಪರ್ವತ ಚಾರಣಕ್ಕೆ ತೆರಳುವ ಹೆಚ್ಚಿನವರು ಇವರನ್ನು ಸಂಪರ್ಕಿಸಿಯೇ ಆಗಮಿಸುತ್ತಿದ್ದರು. ಮಹಾಲಿಂಗ ಭಟ್ ಅವರ ಮನೆಗೆ ಆಹಾರ ಸಾಮಾಗ್ರಿಗಳನ್ನು ಹಾಗೂ ಮತ್ತಿತರ ಸಾಮಾಗ್ರಿಗಳನ್ನು ಹೊತ್ತುಕೊಂಡೇ ಸಾಗಬೇಕಾಗಿತ್ತು. ಮಹಾಲಿಂಗ ಭಟ್ ಅವರು ಗಿರಿಗದ್ದೆಯಲ್ಲಿ ಕೃಷಿ ಕೆಲಸ ನಿರ್ವಹಿಸಿತ್ತಿದ್ದರು.

ಸುಮಾರು 13 ಕಿಲೊಮೀಟರ್ ನಷ್ಟು ಎತ್ತರದ ದಕ್ಷಿಣ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಲ್ಲಿ ಇರುವ ಸುಬ್ರಹ್ಮಣ್ಯ ಸಮೀಪದ ಕುಮಾರಪರ್ವತವನ್ನುಏರುವುದೆಂದರೆ ದೊಡ್ಡ ಸಾಹಸ. ಇಲ್ಲಿಗೆಂದೇ ಸೀಸನ್ ನಲ್ಲಿ (ಅಂದರೆ, ನವೆಂಬರ್, ಡಿಸೆಂಬರ್, ಜನವರಿ) ನೂರಾರು ಮಂದಿ ಬರುತ್ತಾರೆ. ಹಾಗೆ ಬಂದವರು ಬೆಟ್ಟವೇರುವಾಗಲೋ, ಇಳಿಯುವಾಗಲೋ ಮಧ್ಯದಲ್ಲಿರುವ ಗಿರಿಗದ್ದೆ ಭಟ್ರ ಮನೆಗೆ ಹೋಗಿಯೇ ಹೋಗುತ್ತಾರೆ. ಪರಮೇಶ್ವರ ಜೋಯಿಸರ (ಸ್ಥಳೀಯವಾಗಿ ಅವರನ್ನು ಭಟ್ರು ಎಂದೇ ಕರೆಯತೊಡಗಿದರು) ಮಕ್ಕಳು ಗಿರಿಗದ್ದೆ ಭಟ್ ಸಹೋದರರು. ಇವರ ಪೈಕಿ ವೆಂಕಟರಮಣ ಭಟ್ ಪಾಕಪ್ರವೀಣ. ಹೀಗಾಗಿ ಅವರು ಬೆಟ್ಟದ ಕೆಳಗೆ ನೆಲೆಸಿದರು. ಮಹಾಲಿಂಗ ಭಟ್, ನಾರಾಯಣ ಭಟ್ಟರು ಬೆಟ್ಟದಲ್ಲಿ ಉಳಿದರು. ಇತ್ತೀಚೆಗೆ( ಮೇ.17ರಂದು ) ವೆಂಕಟರಮಣ ಭಟ್ ಅವರು ನಿಧನ ಹೊಂದಿದ್ದಾರೆ.

ಕುಕ್ಕೆಯಿಂದ 13 ಕಿ.ಮೀ.ನಷ್ಟು ಏರುಹಾದಿಯಲ್ಲಿ ಚಾರಣಕ್ಕೆಂದು ನಡೆಯಬೇಕು. ಈ ಹಂತದಲ್ಲಿ ಚಾರಣಿಗರಿಗೆ ಆಶ್ರಯ ನೀಡುವವರು ಗಿರಿಗದ್ದೆಯ ಭಟ್ಟರ ಮನೆಯವರು. ಇಲ್ಲಿ ಮಹಾಲಿಂಗ ಭಟ್ ಮತ್ತು ನಾರಾಯಣ ಭಟ್ ಇದರ ನಿರ್ವಹಣೆ ಹೊತ್ತಿದ್ದಾರೆ. ವೆಂಕಟ್ರಮಣ ಭಟ್ಟರು ಪಾಕಶಾಲೆ ಸಹಾಯಕ್ಕೆಂದು ಹಿಂದೆ ಬರುತ್ತಿದ್ದರು. ಬಳಿಕ ವಯಸ್ಸಾದ ಬಳಿಕ ಬೆಟ್ಟದ ಕೆಳಗೆ ವಾಸಿಸುತ್ತಿದ್ದರು.ಕುಮಾರ ಪರ್ವತ ಚಾರಣದ ಬಹುತೇಕ ಅರ್ಧ ದಾರಿ ಸುಮಾರು 5 ಕಿ.ಮೀ. ದೂರ ಸಾಗುವಾಗ ಭಟ್ಟರ ಮನೆ ಸಿಗುತ್ತದೆ. ಹಿಂದಿನ ದಿನ ರಾತ್ರಿ ಅವರ ಮನೆಯಲ್ಲಿ ಉಳಿದುಕೊಂಡು ಬೆಳಗ್ಗೆ ಬೇಗನೆ ಎದ್ದು ಚಾರಣ ಮುಂದುವರಿಸುವವರೂ ಇದ್ದಾರೆ. ಆ ದಿನ ಬೆಟ್ಟದ ತುದಿಗೆ ನೇರವಾಗಿ ಹೋಗಿ, ರಾತ್ರಿ ಅಲ್ಲಿ ಉಳಿದುಕೊಂಡು, ಮರುದಿನ ಕುಕ್ಕೆಗೆ ಹೋಗುವವರು ಇದ್ದಾರೆ. ರಾತ್ರಿವಾಸ್ತವ್ಯಕ್ಕೆ ಟೆಂಟ್ ವ್ಯವಸ್ಥೆ, ಸರಳ ಶೌಚಾಲಯವೂ ಇದೆ. ಶುಚಿರುಚಿಯಾದ ಊಟದ ವ್ಯವಸ್ಥೆಯನ್ನೂ ಭಟ್ಟರು ಮಾಡುತ್ತಾರೆ.



ಕಲ್ಲುಮಣ್ಣಿನ ಹಾದಿಯಲ್ಲಿ ಕುಕ್ಕೆಸುಬ್ರಹ್ಮಣ್ಯ ಪೇಟೆಯಿಂದ ಗಿರಿಗದ್ದೆಗೆ ತಲುಪಲು ಸುಮಾರು ಎರಡೂವರೆ ತಾಸು ಬೇಕು. ಮರದ ಬೇರುಗಳು, ಚರಳುಕಲ್ಲು, ಜಾರುವ ಬಂಡೆಗಳು, ನಡಿಗೆಯ ವೇಗವನ್ನು ಕುಗ್ಗಿಸುತ್ತದೆ. ಭಟ್ಟರ ಮನೆಯವರು ಇದನ್ನು ಒಂದೂವರೆ ಗಂಟೆಯಲ್ಲೇ ಕ್ರಮಿಸುತ್ತಾರೆ. ಅಂಗಡಿಗೆ ಭಟ್ಟರ ಮನೆಯವರು ಬರಬೇಕಾದರೆ, ಇಂಥದ್ದೇ ಹಾದಿಯಲ್ಲಿ ಬರಬೇಕು.ಚಾರಣಿಗರು ಕುಮಾರ ಪರ್ವತವೇರಲು ವರ್ಷದಲ್ಲಿ ಒಂದೆರಡು ಬಾರಿ ಮಾತ್ರ ಬರುತ್ತಾರೆ. ಆದರೆ ಭಟ್ಟರ ಮನೆಯವರು ಸುಮಾರು 10 ಕಿ.ಮೀನಷ್ಟು ನಡೆಯಲೇಬೇಕು. ಅಕ್ಕಿ, ಬೇಳೆ ಇತ್ಯಾದಿಗಳನ್ನು ಹೊತ್ತುಕೊಂಡು ಹೋಗಬೇಕು.ಶ್ರೀ ಪರಮೇಶ್ವರ ಭಟ್ಟ ಹಾಗೂ ಶ್ರೀಮತಿ ಸರಸ್ವತಿ ದಂಪತಿಗಳಿಗೆ 5 ಗಂಡು ಹಾಗೂ 2 ಹೆಣ್ಣು ಮಕ್ಕಳು. ಪರಿಸರ ಪ್ರೇಮಿ ಯಾದ ಶ್ರೀ ಯುತರು ಇಲ್ಲಿ ಗದ್ದೆ ಬೇಸಾಯ ಮಾಡಿ ಕೊಳ್ಳುದರ ಜೊತೆಗೆ ದನಸಾಕಾಣೆಯಲ್ಲಿ ತೊಡಗಿದ್ದರು. ಈ ದಂಪತಿಗಳ 2 ನೆಯ ಮಗನಾದ ಶ್ರೀ ಮಹಾಲಿಂಗೇಶ್ವರ ಭಟ್ ವಿದ್ಯಾಭ್ಯಾಸ ದ ನಂತರ ಕೃಷಿಕರಾಗಿ, ಪತ್ನಿ ಶ್ರೀಮತಿ ಧನಲಕ್ಷ್ಮಿ ಹಾಗೂ ಏಕೈಕ ಮಗ ಶ್ರೀ ಪ್ರಸಾದ ರು ಮಂಗಳೂರಲ್ಲಿ ನೌಕರಿ ಹೊಂದಿದ್ದು, 3 ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟಿದ್ದು,ನಂತರ ದಿನಗಳಲ್ಲಿ ಶ್ರೀಮತಿ ಧನಲಕ್ಷ್ಮಿ ಯವರು ದಿವಂಗತರಾಗಿರುತ್ತಾರೆ. 65 ನೇ ವಯಸ್ಸಿನ ಮಹಾಲಿಂಗೇಶ್ವರ ಭಟ್ ರ ಜೊತೆಯಲ್ಲಿ ತಮ್ಮನಾದ ಶ್ರೀ ನಾರಾಯಣ ಭಟ್ ಇಲ್ಲಿನ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡು, ಸುಮಾರು 35 ಕ್ಕೂಮಿಕ್ಕಿ ದೇಸೀ ತಳಿಗಳ ದನ ಸಾಕಾಣೆಯಲ್ಲಿ ತೊಡಗಿದ್ದಾರೆ. ಇಲ್ಲಿ ಸುಮಾರು 5-6 ಜನ ಕೂಲಿ ಕಾರ್ಮಿಕರು ಹೆಚ್ಚಿನ ದಿನಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಶ್ರೀ ಭಟ್ಟರ ತೋಟಗಾರಿಕಾ ಬೆಳೆಯಾದ ಅಡಿಕೆ, ತೆಂಗು, ಬಾಳೆ ಮುಂತಾದ ಕೃಷಿ ಕಾರ್ಯಗಳಿಗೆ ಸಹಕರಿಸುತ್ತಾರೆ.ಮಹಾಲಿಂಗೇಶ್ವರ ಭಟ್ ರ ಜೊತೆಯಲ್ಲಿ ತಮ್ಮನಾದ ಶ್ರೀ ನಾರಾಯಣ ಭಟ್ ಇಲ್ಲಿನ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡು, ಸುಮಾರು 35 ಕ್ಕೂಮಿಕ್ಕಿ ದೇಸೀ ತಳಿಗಳ ದನ ಸಾಕಾಣೆಯಲ್ಲಿ ತೊಡಗಿಕೊಂಡಿದರು .ಬಳಿಕ ಅವರ ಮಕ್ಕಳಾದ ಮಹಾಲಿಂಗ ಭಟ್ ಮತ್ತು ನಾರಾಯಣ ಭಟ್ ಇಲ್ಲಿನ ಉಸ್ತುವಾರಿ ನೋಡಿಕೊಳ್ಳಲಾರಂಭಿಸಿದರು.

ಅಡಕೆ ತೋಟ ಮತ್ತು ಅರಣ್ಯದ ನಡುವಿನ ಕಣಿವೆಯಂಥ ಭಾಗದಲ್ಲಿ ಇವರ ಮನೆಯಿದೆ. ಹೆಂಚು, ಶೀಟಿನ ಛಾವಣಿಯ ಮನೆ. ಪಕ್ಕದಲ್ಲಿ ಚಾರಣಿಗರಿಗೋಸ್ಕರ ತಾತ್ಕಾಲಿಕ ಶೌಚಾಲಯ ನಿರ್ಮಿಸಲಾಗಿದೆ. ರಾತ್ರಿ ಉಳಿದುಕೊಳ್ಳಲು ಟೆಂಟುಗಳನ್ನು ಪ್ರವಾಸಿಗರು ಹಾಕಿಕೊಳ್ಳುತ್ತಾರೆ. ಪ್ರತಿದಿನ ನೂರಾರು ಮಂದಿ ಇಲ್ಲಿಗೆ ಬರುವ ಕಾರಣ, ಇಲ್ಲಿನ ಪಾಕಶಾಲೆಯಲ್ಲಿ ಅನ್ನ ಬೇಯುತ್ತಲೇ ಇರುತ್ತದೆ. ಚಾರಣಿಗರನ್ನು ಸ್ವಾಗತಿಸಲು ಪ್ರತಿದಿನವೂ ಭಟ್ಟರ ಮನೆ ತೆರೆದಿರುತ್ತದೆ.ಗಿರಿ ಗದ್ದೆ ಯಲ್ಲಿ ವರ್ಷ ಗಳಲ್ಲಿ ನವರಾತ್ರಿ, ದೀಪಾವಳಿ, ಚೌತಿ ಮುಂತಾದ ಹಬ್ಬಗಳ ಆಚರಣೆಯ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ. ಅಲ್ಲದೆ ಇಲ್ಲಿಗೆ ದೆಹಲಿ, ಬೊಂಬಾಯಿ, ಕಲ್ಕತ್ತಾ, ಬೆಂಗಳೂರು, ಮೈಸೂರು, ಅಮೆರಿಕಾ, ಕೆನಡಾ,ಜಪಾನ್,ಇಟೆಲಿ ಮುಂತಾದ ಕಡೆಗಳಿಂದ ಅದ್ಯಯನ ಕ್ಕಾಗಿ ವಿದ್ಯಾರ್ಥಿಗಳಲ್ಲದೆ ಚಾರಣಿಗರು ಬರುತ್ತಿರುತ್ತಾರೆ. ಇಲ್ಲಿ ಶ್ರೀ ಭಟ್ಟರ ರುಚಿಕರವಾದ ಊಟ-ತಿಂಡಿಗಳ ವ್ಯವಸ್ಥೆಯಿದ್ದು, ಉಳಕೊಳ್ಳಲು ಟೆಂಟಿನ ಸೌಲಭ್ಯ ಗಳೂ ಇವೆ. ಗಿರಿಗದ್ದೆಯ ಶ್ರೀ ಮಹಾಲಿಂಗೇಶ್ವರ ಭಟ್ಟರು ಉತ್ತಮ ವಾಗ್ಮಿ, ಸಹೃದಯಿ ಯಾಗಿದ್ದು, ಬರುವ ಚಾರಣಿ ಗರನ್ನು ನಗು ಮುಖ ದಿಂದಲೇಸ್ವಾಗತಿಸುತ್ತಾ, ಬೇಕಾದವರಿಗೆ ಬೇಕಾದ ಹಾಗೆ ಊಟೋಪಚಾರದಲ್ಲಿ ತೊಡಗಿರುದಲ್ಲದೆ, ಇವರಿಗೆ 2017 ನೇ ಇಸವಿಯಲ್ಲಿ ಎಜುಕೇಶನ್ ಟ್ರಸ್ಟ್ (ರಿ) ಸುಬ್ರಹ್ಮಣ್ಯ ದ ವತಿಯಿಂದ ” ಬೆಟ್ಟದ ಜೀವ ” ಬಿರುದನ್ನಿತ್ತು ಗೌರವಿಸುದರೊಂದಿಗೆ, ಸುಳ್ಯ, ಪುತ್ತೂರು, ಮುಂತಾದ ಕಡೆಗಳಲ್ಲಿ ಗೌರವಿಸಿ, ಸನ್ಮಾನಿಸಿರುತ್ತಾರೆ.ಗಿರಿಗದ್ದೆ ಯ ಪ್ರದೇಶವು ಕರ್ನಾಟಕ ಅರಣ್ಯ ಇಲಾಖೆ ಗಳೊಪಟ್ಟಿದ್ದು, ಇಲ್ಲಿ ಬೇಂಗ, ಮರುವ, ಕಿರಾಲು ಬೋಗಿ, ಬೀಟಿ ಮುಂತಾದ ಮರಗಳಿಂದ ಕೂಡಿದ್ದು, ಹುಲಿ, ಚಿರತೆ, ಕಾಡುಕೋಣ ಕಾಡುನಾಯಿ ಮುಂತಾದ ಪ್ರಾಣಿಗಳ ವಾಸ ತಾಣವಾಗಿದ್ದು, ದ.ಕ ಮತ್ತು ಕೊಡಗು ಜೊತೆ ಯಾಗಿದೆ. ನಿಸರ್ಗ ರಮಣೀಯ ಪರಿಸರವಾದ ಗಿರಿ ಯ ಮಡಿಲಲ್ಲಿರುವ ಗಿರಿ ಗದ್ದೆಯು ” ಅನ್ನ ದೇಗುಲವಿದು ಕೈ ಮುಗಿದು ಒಳಗೆ ಬಾ “ಎಂದು ಸದಾ ಕರೆಯುತ್ತಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version