ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಂತರರಾಷ್ಟ್ರೀಯ

ಬೆಳ್ತಂಗಡಿ: ವಿಶ್ವ ಮಹಿಳಾ ದಿನಾಚರಣೆ ಆಚರಣೆ , ಮಕ್ಕಳಿಗೆ ಜೀವನ ಶಿಕ್ಷಣ ನೀಡಿ – ಸಂಸ್ಕಾರ ಕಲಿಸುವಲ್ಲಿ ಮಹಿಳೆಯ ಪಾತ್ರವೂ ಪುರುಷರಷ್ಟೇ ಪ್ರಧಾನ ; ಪ್ರೊಫೆಸರ್ ಶ್ರೀಮತಿ ತ್ರಿಶಲಾ ಜೈನ್ ಕೆ.ಎಸ್

Published

on

ಬೆಳ್ತಂಗಡಿ: ಮಕ್ಕಳಿಗೆ ಜೀವನ ಶಿಕ್ಷಣ ನೀಡಿ – ಸಂಸ್ಕಾರ ಕಲಿಸುವಲ್ಲಿ ಮಹಿಳೆಯ ಪಾತ್ರವೂ ಪುರುಷರಷ್ಟೇ ಪ್ರಧಾನವಾಗಿದೆ. ಮಹಿಳೆ ತನ್ನ ಬದುಕಿನಲ್ಲಿ ಸರ್ವಸ್ವವನ್ನು ತನ್ನ ಕುಟುಂಬ ಹಾಗೂ ಸಮಾಜದ ಏಳಿಗೆಗಾಗಿ ಸಮರ್ಪಿಸಿ ಕೊಂಡಿರುತ್ತಾಳೆ. ಅಂತಹ ಮಹಾನ್ ಚೇತನ ಈ ಸಮಾಜದ ಮಹಿಳೆ ಎನ್ನುವುದು ನಾವೆಲ್ಲ ಅರಿತುಕೊಳ್ಳಬೇಕಾಗಿದೆ. ಆ ದಿನವನ್ನು ಅರಿತುಕೊಂಡು ಇಡೀ ವಿಶ್ವದಲ್ಲಿ ಈ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ನಮ್ಮ ಮಹಿಳಾ ಸಮಾಜಕ್ಕೆ ಮಹಾನ್ ಶಕ್ತಿ ಬಂದಂತೆ ಆಗಿದೆ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರೊಫೆಸರ್ ಶ್ರೀಮತಿ ತ್ರಿಶಲಾ ಜೈನ್ ಕೆ.ಎಸ್ ರವರು ಮಾತನಾಡಿದರು.

ಅವರು ಮಹಿಳಾ ದಿನಾಚರಣೆಯ ಉದ್ದೇಶ ಹಾಗೂ ಮಹಿಳೆಯರ ಸ್ಥಾನಮಾನದ ಬಗ್ಗೆ ತಿಳಿ ಹೇಳಿದರು. ಜೈನ ವೀರ ಮಹಿಳೆಯರಾದ ವೀರರಾಣಿ ಅಬ್ಬಕ್ಕ, ರಾಣಿ ಚೆನ್ನಬೈರಾ ದೇವಿ, ನಾಟ್ಯರಾಣಿ ಶಾಂತಲೆ ಮುಂತಾದವರ ಬಗ್ಗೆ ತಿಳಿಸುತ್ತಾ ಅವರು ಮಾಡಿರುವ ಸಾಧನೆಗಳನ್ನು ಮಾತ್ರವಲ್ಲದೆ ಸಾಹಿತ್ಯ ಕ್ಷೇತ್ರದಲ್ಲೂ ಮಾಡಿರುವ ಹಲವಾರು ಮಹಿಳೆಯರ ಕೊಡುಗೆಗಳನ್ನು ನೆನಪಿಸಿಕೊಂಡು , ಇದು ಇಂದು ನಮಗೆಲ್ಲರಿಗೂ ಪ್ರೇರಣಾದಾಯಕವಾದ ವಿಚಾರವಾಗಿದೆ ಎಂದು ಹೇಳಿದರು.






ಆಧುನಿಕ ಸಮಾಜಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಮಾತೃಶ್ರೀ ರತ್ನಮ್ಮನವರ ಹಾಗೂ ಶ್ರೀಮತಿ ಡಾ. ಹೇಮಾವತಿ ವೀರೇಂದ್ರ ಹೆಗ್ಗಡೆಯವರು ಮಹಿಳಾ ಸಬಲೀಕರಣಕ್ಕೆ ನೀಡಿರುವ ಕೊಡುಗೆಗಳನ್ನು ಸ್ಮರಿಸಿಕೊಂಡರು.
ಅವರು ಬೆಳ್ತಂಗಡಿ ಶಾಂತಿಶ್ರೀ ಜೈನ ಮಹಿಳಾ ಸಮಾಜದ ಅಧ್ಯಕ್ಷರಾಗಿದ್ದುಕೊಂಡು ಕಾರ್ಯವನ್ನು ಮುನ್ನಡೆಸುತ್ತಿದ್ದಾರೆ.
ಇತ್ತೀಚೆಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದ ಪಿನಾಕಿ ಹಾಲ್ನಲ್ಲಿ ಬೆಳ್ತಂಗಡಿಯ ಶಾಂತಿಶ್ರೀ ವತಿಯಿಂದ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

ಈ ದಿನ ಸಂಘದ ಸರ್ವ ಸದಸ್ಯರಿಗೆ ಮನೋರಂಜನ ಆಟಗಳನ್ನು ಏರ್ಪಡಿಸಿ ಕ್ರಿಯಾಶೀಲರನ್ನಾಗಿ ಮಾಡುವಲ್ಲಿ ಹೊಸ ಹೆಜ್ಜೆಯನ್ನು ಇಟ್ಟರು.ಕಾರ್ಯಕ್ರಮ ಭಗವಂತನ ಚಿಂತನೆಯೊಂದಿಗೆ ಆರಂಭಗೊಂಡರೆ, ಮಾರ್ಚ್ ತಿಂಗಳಲ್ಲಿ ಹುಟ್ಟುಹಬ್ಬ ಆಚರಿಸುವ ಸದಸ್ಯರನ್ನು ಅಭಿನಂದಿಸುವುದರೊಂದಿಗೆ ಮುಂದುವರಿದರೆ, ಸ್ಪರ್ಧಾ ವಿಜೇತರಿಗೆ ಸಂಘದ ಕಾರ್ಯದರ್ಶಿ ಶ್ರೀಮತಿ ರಾಜಶ್ರೀ ಎಸ್.ಹೆಗ್ಡೆ ಬಹುಮಾನ ವಿತರಿಸಿ, ಶ್ರೀಮತಿ ದವಳರವರ ಕಾರ್ಯಕ್ರಮ ನಿರ್ವಹಣೆಯೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version