ಅಂತರರಾಷ್ಟ್ರೀಯ ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಕ್ರೀಡೆ ಚರ್ಚೆಗಳು ಚುನಾವಣೆ ಜೀವನಶೈಲಿ ತಂತ್ರಜ್ಞಾನ ಧಾರ್ಮಿಕ ಪ್ರಕಟಣೆ ಮಂಗಳೂರು ಮನೋರಂಜನೆ ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ವಾಣಿಜ್ಯ ಶುಭಾರಂಭ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಉಪ್ಪಿನಂಗಡಿ ; 30 31 ರಂದು ಶಾಸಕ ಅಶೋಕ್ ಕುಮಾರ್ ರೈ ಸಾರಥ್ಯದಲ್ಲಿ ವಿಜಯ - ವಿಕ್ರಮ ಕಂಬಳ ಆಹಾರ ಮೇಳ .ಕೃಷಿ ಮೇಳ.ವಿವಿಧ ಖಾದ್ಯಗಳು. ಸಾಂಸ್ಕೃತಿಕ ಕಾರ್ಯಕ್ರಮಅಂತರರಾಷ್ಟ್ರೀಯ ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ಪ್ರತಿಭಾ ಪುರಸ್ಕಾರ ಮಂಗಳೂರು ಮನೋರಂಜನೆ ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ವಿಶೇಷ ವರದಿ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಬೆಳ್ತಂಗಡಿ: ವಿಶ್ವ ಮಹಿಳಾ ದಿನಾಚರಣೆ ಆಚರಣೆ , ಮಕ್ಕಳಿಗೆ ಜೀವನ ಶಿಕ್ಷಣ ನೀಡಿ - ಸಂಸ್ಕಾರ ಕಲಿಸುವಲ್ಲಿ ಮಹಿಳೆಯ ಪಾತ್ರವೂ ಪುರುಷರಷ್ಟೇ ಪ್ರಧಾನ ; ಪ್ರೊಫೆಸರ್ ಶ್ರೀಮತಿ ತ್ರಿಶಲಾ ಜೈನ್ ಕೆ.ಎಸ್ಅಂತರರಾಷ್ಟ್ರೀಯ ಇತರ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾನೂನು ಕ್ರೈಮ್ ನ್ಯೂಸ್ ಚರ್ಚೆಗಳು ಜೀವನಶೈಲಿ ತಂತ್ರಜ್ಞಾನ ಪ್ರಕಟಣೆ ಬ್ರೇಕಿಂಗ್ ನ್ಯೂಸ್ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ಸಂಘ-ಸಂಸ್ಥೆಗಳು ಸ್ಥಳೀಯ
ವಿಟ್ಲ ಪೊಲೀಸ್ ಠಾಣೆ ಅಡ್ಯನಡ್ಕ ಕರ್ನಾಟಕ ಬ್ಯಾಂಕ್ ಕಳವು ಪ್ರಕರಣ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ರಿಂದ ಮೂವರು ಅಂತರಾಜ್ಯ ಕಳ್ಳರ ಬಂಧನಅಂತರರಾಷ್ಟ್ರೀಯ ಅಭಿಪ್ರಾಯ ಅಭಿವೃದ್ಧಿ ಕಾರ್ಯಗಳು ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ತಂತ್ರಜ್ಞಾನ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ವಾಣಿಜ್ಯ ಶುಭಾರಂಭ ಸಂಘ-ಸಂಸ್ಥೆಗಳು ಸಭೆ - ಸಮಾರಂಭ
ಗ್ರಾಮೀಣ ಆರ್ಥಿಕತೆಯನ್ನು ಬೆಂಬಲಿಸಲು ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಶಾಖೆಗಳನ್ನು ತೆರೆಯುವಂತೆ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸೋಮವಾರ ಬ್ಯಾಂಕುಗಳಿಗೆ ಕರೆPublished
8 months agoon
By
Akkare Newsಕಠ್ಮಂಡು: ನೇಪಾಳ ಜೆನ್ ಝಿ(Z) ಅಥವಾ ಯುವಜನರ ಕಿಚ್ಚಿಗೆ ಅಕ್ಷರಶ: ನಲುಗಿ ಹೋಗಿದೆ. ಪ್ರತಿಭಟನಾಕಾರರು ಮಂಗಳವಾರ ಸಂಸತ್ತು, ಪ್ರಧಾನಿ, ಮಾಜಿ ಪ್ರಧಾನಿ, ಮಂತ್ರಿಗಳು ಹಾಗು ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೇ, ಮಾಜಿ ಪ್ರಧಾನಿ ಜಲನಾಥ್ ಖನಾಲ್ ಅವರ ಪತ್ನಿ ರಾಜ್ಯಲಕ್ಷ್ಮಿ ಚಿತ್ರಾಕರ್ ಸಜೀವ ದಹನವಾಗಿದ್ದಾರೆ. ಪ್ರತಿಭಟನಾಕಾರರು ಬೆಂಕಿ ಹಚ್ಚಿದ ವೇಳೆ ಮನೆಯಲ್ಲಿದ್ದ ಚಿತ್ರಾಕರ್ ಅವರು ಗಂಭೀರ ಸುಟ್ಟುಗಾಯಗಳಿಗೆ ಒಳಗಾಗಿ ಸಾವನ್ನಪ್ಪಿದರು ಎಂದು ವರದಿಯಾಗಿದೆ.
ಉದ್ರಿಕ್ತರ ಗುಂಪು ಮಾಜಿ ಪ್ರಧಾನಿಯ ನಿವಾಸಕ್ಕೆ ಆಗಮಿಸಿದಾಗ ರಾಜ್ಯಲಕ್ಷ್ಮಿ ಅವರು ಮನೆಯೊಳಗೆ ಇದ್ದರೂ ಲೆಕ್ಕಿಸದೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಗಂಭೀರ ಗಾಯಗೊಂಡ ಅವರನ್ನು ಕಿರ್ತಿಪುರ್ ಬರ್ನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಸಾಮಾಜಿಕ ಜಾಲತಾಣಗಳ ಮೇಲೆ ನಿಷೇಧ ಮತ್ತು ಭ್ರಷ್ಟಾಚಾರದ ವಿರುದ್ಧ ಬೀದಿಗಿಳಿದು ಜೆನ್ ಜೆಡ್‌ಗಳು ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಇದರ ಪರಿಣಾಮ ಪ್ರಧಾನಿ ಕೆ.ಪಿ.ಓಲಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರತಿಭಟನಾಕಾರರ ಗುಂಪು ಸಂಸತ್ ಭವನ, ಕಠ್ಮಂಡುವಿನಲ್ಲಿದ್ದ ಅಧ್ಯಕ್ಷರ ಕಚೇರಿ ಸೇರಿದಂತೆ ಹಲವು ಸರ್ಕಾರಿ ಕಟ್ಟಡಗಳಿಗೆ ಬೆಂಕಿ ಇಟ್ಟಿದೆ.
ಈ ನಡುವೆ ಮಾತುಕತೆಯ ಮೂಲಕ ಪ್ರತಿಭಟನೆಯನ್ನು ಕೈಬಿಟ್ಟು ಶಾಂತಿಯುತ ನಿರ್ಣಯಕ್ಕೆ ಬರೋಣ ಎಂದು ನೇಪಾಳ ಅಧ್ಯಕ್ಷ ರಾಮ್ ಚಂದ್ರ ಪೌಡೆಲ್ ಪ್ರತಿಭಟನಕಾರರಿಗೆ ಕರೆ ನೀಡಿದ್ದಾರೆ.
ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರ ರಾಜೀನಾಮೆಯನ್ನು ಸ್ವೀಕರಿಸಿದ್ದು, ಹಾನಿ ಮತ್ತು ರಕ್ತಪಾತದ ಹೊರತಾಗಿ ಈ ಬಿಕ್ಕಟ್ಟನ್ನು ಪರಿಹರಿಸಲು ಗಮನ ಹರಿಸೋಣ. ಎಲ್ಲರೂ ಶಾಂತಿಯುತವಾಗಿರಬೇಕು ಎಂದು ಮನವಿ ಮಾಡುತ್ತೇನೆ. ದೇಶ ಮತ್ತಷ್ಟು ಹಾನಿಗೊಳಗಾಗದಂತೆ ಮಾತುಕತೆಯಲ್ಲಿ ಈ ವಿಚಾರಗಳನ್ನು ಬಗೆಹರಿಸೋಣ. ಪ್ರಜಾಪ್ರಭುತ್ವದಲ್ಲಿ ನಾಗರಿಕರ ಬೇಡಿಕೆಗಳನ್ನು ಸಂವಾದ ಮತ್ತು ಮಾತುಕತೆಯ ಮೂಲಕ ಪರಿಹರಿಸಬಹುದು ಎಂದು ಅವರು ತಿಳಿಸಿದ್ದಾರೆ.
ನೇಪಾಳ ಸೇನೆ ಕೂಡ ನಾಗರಿಕರಿಗೆ ವಿಶೇಷವಾಗಿ ಯುವಜನತೆಗೆ ದೇಶದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆ ರಕ್ಷಣೆಗಾಗಿ ಸಂಯಮ ಕಾಪಾಡಿಕೊಳ್ಳುವಂತೆ ಕರೆ ನೀಡಿದೆ.