Published
7 months agoon
By
Akkare Newsಬಂಟ್ವಾಳ: ಇಂದಿರಾ ಕ್ಯಾಂಟಿನ್ ಸಿಬ್ಬಂದಿಗಳಿಗೆ ಸೂಕ್ತ ಭದ್ರತೆ ನೀಡುವಂತೆ ಕರ್ನಾಟಕ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಬಂಟ್ವಾಳ ತಾಲೂಕು, ಬಂಟ್ವಾಳ ಟಿ.ಎಂ.ಸಿ. ಮಿನಿ ವಿಧಾನಸೌಧ ಬಳಿಯ ಇಂದಿರಾ ಕ್ಯಾಂಟೀನ್ ನೌಕರರು ರಾಜ್ಯದ ಇಂದಿರಾ ಕ್ಯಾಂಟೀನ್ ನೌಕರರ ಪರವಾಗಿ ಮನವಿ ಮನವಿ ಸಲ್ಲಿಸಿದರು.
ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರು ಬಿ.ಸಿ.ರೋಡ್ ನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಮನವಿ ನೀಡಿದ ಅವರು ನಮಗೆ ಯಾವುದೇ ರೀತಿಯ ಭದ್ರತೆಗಳು ಇರುವುದಿಲ್ಲ. ನಮ್ಮನ್ನು ಯಾವಾಗ ಬೇಕಾದರೂ ಕೆಲಸದಿಂದ ತೆಗೆಯಬಹುದು. ಸಾಂಕ್ರಾಮಿಕ ರೋಗ ಕೊರೊನಾ ಸಂದರ್ಭದಲ್ಲಿ ಇಡೀ ರಾಜ್ಯದ ಇಂದಿರಾ ಕ್ಯಾಂಟೀನ್ ನೌಕರರು ರಜೆ ಪಡೆಯದೆ ಬಡ ಜನರ ಸೇವೆ ಮಾಡಿರುತ್ತೇವೆ. ಆದರೆ ನಮ್ಮನ್ನು ಎಲ್ಲಿಯೂ ಗುರುತಿಸಿಲ್ಲ. ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಮಾಡಿರುವ ಈ ಇಂದಿರಾ ಕ್ಯಾಂಟೀನ್ ಅದೆಷ್ಟೋ ಬಡವರಿಗೆ ಹಸಿವು ನೀಗಿಸುವ ಉತ್ತಮ ಯೋಜನೆಯಾಗಿದೆ. ನಾವು ಬಡವರಾಗಿರುವುದರಿಂದ ನಮಗೂ ಕೂಡಾ ಭದ್ರತೆ ನೀಡಬೇಕಾಗಿದೆ. ಇದರಿಂದ ರಾಜ್ಯದ ಇಂದಿರಾ ಕ್ಯಾಂಟಿನ್ ನೌಕರರು ಕಷ್ಟದಿಂದ ಪಾರಾದಂತಾಗುತ್ತದೆ. ಈ ಬಗ್ಗೆ ತಾವುಗಳು ನಮಗೆ ಸಹಕಾರ ನೀಡಬೇಕು ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಟಿಎಂಸಿ ಮಿನಿ ವಿಧಾನಸೌಧ ಬಳಿಯ ಇಂದಿರಾ ಕ್ಯಾಂಟೀನ್ ನೌಕರರಾದ ಜಯ ಪೂಜಾರಿ, ಆನಂದ ಪೂಜಾರಿ, ಅಬ್ದುಲ್ ರಝಾಕ್, ಚಂದ್ರಾವತಿ ಉಪಸ್ಥಿತರಿದ್ದರು.