ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ರೋಟರಿ ಕ್ಲಬ್ ಪುತ್ತೂರು ಯುವದಿಂದ ಮಾನಸಿಕ ಅಸ್ವಸ್ಥ ಮಹಿಳೆಯ ರಕ್ಷಣೆ ಪುನರ್ವಸತಿ ಕೇಂದ್ರಕ್ಕೆ ಸೇರ್ಪಡೆ .

Published

on

ಪುತ್ತೂರು, ಕಳೆದ ಅನೇಕ ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಇಡ್ಕಿದು ಗ್ರಾಮದ ಸೂರ್ಯ ಎಂಬಲ್ಲಿನ ಬಸ್ಸು ತಂಗುದಾಣದಲ್ಲಿ ವಾಸ್ತವ್ಯವನ್ನು ಹೂಡಿಕೊಂಡಿದ್ದ ಸುಮಾರು 50 ವರ್ಷ ಪ್ರಾಯದ ಕಮಲ ಎಂಬ ಮಹಿಳೆಯನ್ನು ಪ್ರಾಧ್ಯಾಪಕಿ ಶ್ರೀಮತಿ ಗೀತಾ ಕೊಂಕೋಡಿ ಅವರ ವಿನಂತಿಯ ಮೇರೆಗೆ ಪುತ್ತೂರು ರೋಟರಿ ಕ್ಲಬ್ ಇದರ ಮಾಜಿ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಅವರು ಗ್ರಾಮಸ್ಥರ ಸಹಕಾರದಿಂದ ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದಾರೆ.

 

ಈ ಮಾನಸಿಕ ಅಸ್ವಸ್ಥ ಮಹಿಳೆಯು ಬಸ್ಸು ತಂಗುದಾಣದಲ್ಲಿ ವಾಸ್ತವ ಹೂಡಿರುವ ಕಾರಣ, ಹಾಗೂ ಕೆಲವೊಮ್ಮೆ ಈಕೆ ಮಾಡುವ ಹಾವಭಾವಗಳಿಂದ ಶಾಲೆಗೆ ಹೋಗುವ ಮಕ್ಕಳಿಗೆ ಈ ತಂಗುದಾಣದಲ್ಲಿ ನಿಲ್ಲಲು ಭಯವಾಗುತ್ತಿದ್ದು ಗ್ರಾಮ ಪಂಚಾಯಿತ್ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಸಾರ್ವಜನಿಕರು ದೂರನ್ನು ನೀಡಿದ್ದರು.

ಈ ಮಹಿಳೆಯನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸುವಲ್ಲಿ ಗ್ರಾಮ ಪಂಚಾಯತ್ ಪಿ.ಡಿ.ಓ ಶ್ರೀ ಗೋಕುಲದಾಸ್ ಭಕ್ತ, ಗ್ರಾ. ಪ ಉಪಾಧ್ಯಕ್ಷರಾದ ಶ್ರೀ ಪದ್ಮನಾಭ ಸಾಪಲ್ಯ, ಗ್ರಾ.ಪ ಸದಸ್ಯೆ ಶ್ರೀಮತಿ ಭಾಗೀರಥಿ ಹಾಗೂ
ಶ್ರೀಮತಿ ಪುಷ್ಪಾವತಿ, ಶ್ರೀ ಪುರುಷೋತ್ತಮ, ಮಹಿಳಾ ಮತ್ತು ಮಕ್ಕಳ ಇಲಾಖೆಯ ವಿಟ್ಲ ಘಟಕದ ಮೇಲ್ವಿಚಾರಕಿ ಶ್ರೀಮತಿ ಸೋಮಕ್ಕ,ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಕುಸುಮ, ಕೃಷಿಕರಾದ ಶ್ರೀ ಸುಬ್ರಾಯ ಭಟ್ ಕೊಂಕೋಡಿ, ಮಾನಸಿಕ ಅಸ್ವಸ್ಥತೆಯ ಅಕ್ಕನ ಮಗ ಸತೀಶ ಹಾಗೂ ಗ್ರಾಮಸ್ಥರು ಸಹಕರಿಸಿದರು. ಮಹಿಳೆಯನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸುವಲ್ಲಿ ಪುತ್ತಿಲ ಪರಿವಾರದ ಆಂಬುಲೆನ್ಸ್ ಸೇವೆಯನ್ನು ಶ್ರೀ ಸುಜಿತ್ ಅವರು ನೀಡಿದರು.

ಈ ಮಹಿಳೆಯು ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ಹೋಗುವ ಮುನ್ನ ತನ್ನ ಮುದ್ದಿನ ನಾಯಿಗೆ ಬಿಸ್ಕಟನ್ನು ಹಾಕಿದಳು.

ಈ ಮಾನಸಿಕ ಅಸ್ವಸ್ಥೆ ಕಮಲ ಎಂಬ ಅವರ ತಾಯಿ ಮಚ್ಚುಳು ಎಂಬಾಕೆ ನಮ್ಮ ಮನೆಯಲ್ಲಿ ಅನೇಕ ವರ್ಷಗಳಿಂದ ಮನೆಯ ಕೆಲಸಗಳನ್ನು ಮಾಡುತ್ತಾ ಬಂದಿದ್ದು, ಆಕೆ ಆರು ತಿಂಗಳ ಹಿಂದೆ ಮೃತಪಟ್ಟಿದ್ದು, ಸಾಯುವ ಸಮಯದಲ್ಲಿ ತನ್ನ ಮಾನಸಿಕ ಅಸ್ವಸ್ಥ ಮಗಳು ದಾರಿಯಲ್ಲಿ ಬೆಳೆದಂತೆ ನೋಡಿಕೊಂಡು ಒಂದು ಸೂಕ್ತ ವ್ಯವಸ್ಥೆಯನ್ನು ಮಾಡಬೇಕಾಗಿ ಕೇಳಿಕೊಂಡ ಮೇರೆಗೆ ಸಮಾಜ ಸೇವಕರಾದ ಪುತ್ತೂರು ಉಮೇಶ್ ನಾಯಕ್ ಅವರ ಸಹಕಾರದಲ್ಲಿ ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದೇನೆ. ಆಕೆಯ ತಾಯಿಗೆ ನೀಡಿದ ಮಾತನ್ನು ನೆರವೇರಿಸಿದ ಸಾರ್ಥಕ್ಯವಿದೆ.

 

ಶ್ರೀಮತಿ ಗೀತಾ ಕೊಂಕೋಡಿ
ಮಾನಸಿಕ ಅಸ್ವಸ್ಥೆಯನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸುವಲ್ಲಿ ಮುತುವರ್ಜಿ ತೆಗೆದುಕೊಂಡವರು

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version