ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಬಳಕೆದಾರರಿಗೆ ಗುಡ್ ನ್ಯೂಸ್; ಜಿಯೋ, BSNL, ಏರ್ಟೆಲ್, ವಿಐಗೆ ಕೇಂದ್ರದ ಖಡಕ್ ಸೂಚನೆ

Published

on

ಜಿಯೋ, BSNL, ಏರ್ಟೆಲ್, ವಿಐ ಟೆಲಿಕಾಂ ಸೇವೆ ಬಳಕೆದಾರರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಇನ್ಮುಂದೆ ಬಳಕೆದಾರರನ್ನು ಯಾಮಾರಿಸಲು ಸಾಧ್ಯವಿಲ್ಲ. ಇದಕ್ಕೆ ಟ್ರಾಯ್ ಹೊಸ ಆದೇಶ ನೀಡಿದೆ. ಏನಿದು ಹೊಸ ಆರ್ಡರ್?

ಭಾರತದಲ್ಲಿ ಟೆಲಿಕಾಂ ಕಂಪನಿಗಳು ಪೈಪೋಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಇತ್ತ ಟೆಲಿಕಾಂ ಕಂಪನಿಗಳು ಕೂಡ ಹಲವು ಆಫರ್ ಮೂಲಕ ಬಳಕೆದಾರರ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಇದರ ಬೆನ್ನಲ್ಲೇ ಟ್ರಾಯ್ ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿಗೊಳಿಸುತ್ತಿದೆ. ಇದು ಟೆಲಿಕಾಂ ಕಂಪನಿಗಳಿಗೆ ಸವಾಲಾಗಿ ಪರಿಣಿಸುತ್ತಿದೆ. ಇದೀಗ ಟ್ರಾಯ್ ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿದೆ.


ಇನ್ಮುಂದೆ ಟೆಲಿಕಾಂ ಕಂಪನಿಗಳು ಬಳಕೆದಾರರನ್ನು ಯಾಮಾರಿಸಲು ಸಾಧ್ಯವಿಲ್ಲ. ಜಾಹೀರಾತು ಅಥವಾ ಇನ್ಯಾವುದೇ ರೂಪದಲ್ಲಿ ನಾವು 5ಜಿಯಲ್ಲಿ ನಂಬರ್ 1, ದೇಶಾದ್ಯಂತ 4ಜಿ ಹೀಗೆ ಜಾಹೀರಾತು ಪ್ರಕಟಿಸಿ ಬಳಕೆದಾರರನ್ನು ಸೆಳೆಯಲು ಸಾಧ್ಯವಿಲ್ಲ. ಕಾರಣ ಟ್ರಾಯ್ ಇದೀಗ ಈ ಕುರಿತು ಸ್ಪಷ್ಟ ಸೂಚನೆ ನೀಡಿದೆ. ಜಿಯೋ, BSNL, ಏರ್ಟೆಲ್, ವಿಐಗೆ ಈ ಕುರಿತು ಸೂಚನೆ ನೀಡಿದೆ.

 

ಜಿಯೋ, BSNL, ಏರ್ಟೆಲ್, ವಿಐ ಟೆಲಿಕಾಂ ಕಂಪನಿಗಳು ನೆಟ್‌ವರ್ಕ್ ಮ್ಯಾಪ್ ಕಡ್ಡಾಯವಾಗಿ ಪ್ರಕಟಿಸಬೇಕು ಎಂದು ಸೂಚಿಸಿದೆ. 2ಜಿ, 3ಜಿ, 4ಜಿ, 5ಜಿ ಸೇರಿದಂತೆ ಯಾವ ಸೇವೆ ಯಾವ ಭಾಗದಲ್ಲಿ ಲಭ್ಯವಿದೆ. ಎಲ್ಲೆಲ್ಲಿ ಕವರೇಜ್ ಇದೆ ಅನ್ನೋ ಮ್ಯಾಪ್ ಸ್ಪಷ್ಟವಾಗಿ ಪ್ರಕಟಿಸಬೇಕು ಎಂದು ಟ್ರಾಯ್ ಸೂಚನೆ ನೀಡಿದೆ. ಯಾವ ವಲಯ, ಯಾವ ಪ್ರದೇಶದಲ್ಲಿ ನೆಟ್‌ವರ್ಕ್ ಇದೇ ಅನ್ನೋದನ್ನು ಪ್ರತಿ ಟೆಲಿಕಾಂ ಕಂಪನಿಗಳು ಪ್ರಕಟಿಸಬೇಕು.

ಇದರಿಂದ ಬಳಕೆದಾರ ತನ್ನ ಪ್ರದೇಶ, ಅಥವಾ ತಾನಿರುವ ಪ್ರದೇಶದಲ್ಲಿ ಯಾವ ಟೆಲಿಕಾಂ ಕಂಪನಿಯ ಸೇವೆ ಲಭ್ಯವಿದೆ. ಯಾವ ನೆಟ್‌ವರ್ಕ್ ಸ್ಪೀಡ್ ಲಭ್ಯವಿದೆ ಅನ್ನೋ ಮಾಹಿತಿ ಸ್ಪಷ್ಟವಾಗಿ ತಿಳಿಯಬೇಕು. ಈ ಮಾಹಿತಿ ಬಳಕೆದಾರ ಪೋರ್ಟ್ ಆಗುವ ಸಂದರ್ಭ ಅಥವಾ ಹೊಸ ಸಿಮ್ ಖರೀದಿಸುವಾಗ ಯಾವ ನೆಟ್‌ವರ್ಕ್ ತನ್ನ ಅವಶ್ಯಕತೆ ಪೂರೈಸಲಿದೆ ಅನ್ನೋ ಮಾಹಿತಿ ಸ್ಪಷ್ಟವಾಗಲಿದೆ ಎಂದು ಟ್ರಾಯ್ ಹೇಳಿದೆ.

ಟೆಲಿಕಾಂ ಸಂಸ್ಥೆಗಳು ಮ್ಯಾಪ್‌ನಲ್ಲಿ ಸ್ಪಷ್ಟ ಮಾಹಿತಿ ಪ್ರಕಟಿಸಬೇಕು. ಬಳಕೆದಾರ ಸಿಮ್ ಪಡೆದುಕೊಂಡ ಬಳಿಕ ಈ ಸೇವೆ ಲಭ್ಯವಾಗದಿದ್ದರೆ ಟೆಲಿಕಾಂ ಕಂಪನಿಗಳು ಹೊಣೆಯಾಗಲಿದೆ. ಹೀಗಾಗಿ ಇದೀಗ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ನೆಟ್‌ವರ್ಕ್ ಎಲ್ಲೆಲ್ಲಿ ಸಿಗಲಿದೆ, ಯಾವ ನೆಟ್‌ವರ್ಕ್ ಅಂದರೆ 4ಜಿ, 5ಜಿ ಸೇರಿದಂತೆ ನೆಟ್‌ವರ್ಕ್ ಸ್ಪೀಡ್ ಕುರಿತು ಮಾಹಿತಿ ನೀಡಬೇಕು ಎಂದಿದೆ.

 

ಬಳಕೆದಾರರಿಗೆ ಗುಣಮಟ್ಟದ ಸೇವೆ ಒದಗಿಸಲು ಟ್ರಾಯ್ ಈ ನಿರ್ಧಾರ ತೆಗೆದುಕೊಂಡಿದೆ. ದುಡ್ಡು ಕೊಟ್ಟು ಸೇವೆ ಪಡೆದುಕೊಳ್ಳುವ ಬಳಕೆದಾರನಿಗೆ ಯಾವುದೇ ರೀತಿ ಮೋಸ ಆಗಬಾರದು. ಖರೀದಿಸುವ ಮುನ್ನ ಆತನಿಗೆ ಸ್ಪಷ್ಟ ಮಾಹಿತಿ ಇರಬೇಕು ಎಂದು ಟ್ರಾಯ್ ಹೇಳಿದೆ. ಇದೀಗ ಹೊಸ ಆದೇಶ ಬಳಕೆದಾರರಲ್ಲಿ ಸಂತಸ ತಂದಿದೆ.ಆದರೆ ಟೆಲಿಕಾಂ ಕಂಪನಿಗಳಿಗೆ ಮತ್ತೊಂದು ಸವಾಲು ಎದುರಾಗಿದೆ.

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version