Published
1 month agoon
By
Akkare Newsಗುಂಡ್ಯದಿಂದ ಸಕಲೇಶಪುರಕ್ಕೆ ಸುರಂಗ ಮಾರ್ಗ ನಿರ್ಮಾಣ ಅಗತ್ಯ ಅನುದಾನಕ್ಕೆ ಕೇಂದ್ರ ಸಚಿವ ಗಡ್ಕರಿಗೆ ಮನವಿಗೆ ತಿರ್ಮಾನ
ರಾ. ಹೆದ್ದಾರಿ ಪ್ರಾಧಿಕಾರದ ಅಧೀನದಲ್ಲಿ ಇದೀಗ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಗುಂಡ್ಯದಿಂದ ಸಕಲೇಶಪುರದ ತನಕ ರಸ್ತೆಗಳು ಎತ್ತರತಗ್ಗಿನಿಂದ ಕೂಡಿದ್ದು ಮಾತ್ರವಲ್ಲದೆ ಘಾಟ್ ಕೂಡಾ ಇರುವದರಿಂದ ಈ ಭಾಗದಲ್ಲಿ ಸುಮಾರು 23 ರಿಂದ 25 ಕಿ ಮೀ ತನಕ ಸುರಂಗ ಮಾರ್ಗ ನಿರ್ಮಾಣದ ಅಗತ್ಯತೆ ಇದೆ. ದ ಕ ಮತ್ತು ಹಾಸನ ಈ ಎರಡು ಜಿಲ್ಲಾ ವ್ಯಾಪ್ತಿಯಲ್ಲಿ ಹೆದ್ದಾರಿ ಸಾಗುತ್ತಿದ್ದು , ಇಲ್ಲಿ ಸುರಂಗ ಮಾರ್ಗ ನಿರ್ಮಾಣವಾಗಬೇಕೆಂಬುದು ಹಲವು ವರ್ಷಗಳ ಬೇಡಿಕೆಯೂ ಆಗಿದೆ.
ಮಂಗಳೂರಿನಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿ ಇದ್ದಾಗಿದ್ದು ನಿತ್ಯ ಸಾವಿರಾರು ವಾಹನಗಳ ಸಂಚಾರ ಇರುತ್ತದೆ. ರಸ್ತೆ ತಿರುವು ಮುರುವಿನಿಂದ ಕೂಡಿದ ಕಾರಣ ಈ ಭಾಗದಲ್ಲಿ ಹೆಚ್ಚಿನ ಅಪಘಾತಗಳು ಉಂಟಾಗುತ್ತಿದೆ. ಈ ಕಾರಣಕ್ಕೆ ಸುರಂಗ ಮಾರ್ಗದ ನಿರ್ಮಾಣದ ಅಗತ್ಯತೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಸುರಂಗ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೇಂದ್ರ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿಯವರಿಗೆ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ವಿಧಾನಸಭಾ ಅಧ್ಯಕ್ಷರಾದ ಯು ಟಿ ಖಾದರ್. ಮುಖ್ಯಮಂತ್ರಿಗಳ ಆರ್ಥಿಕ ಕಾರ್ಯದರ್ಶಿ ಬಸವರಾಜರೆಡ್ಡಿ, ಮಾಜಿ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ, ಕಲ್ಯಾಣ ಕರ್ನಾಟಕ ನಿಗಮದ ಚಯರ್‌ಮೆನ್ ಅಜಯ್‌ಧರ್ಮ ಸಿಂಗ್ ಉಪಸ್ಥಿತರಿದ್ದರು.
ಮಂಗಳೂರು -ಬೆಂಗಳೂರು ರಾಜ್ಯ ಹೆದ್ದಾರಿಯ ಗುಂಡ್ಯದಿಂದ ಸಕಲೇಶಪುರದ ತನಕ ಸುಮಾರು 24 ಕಿ ಮೀ ರಸ್ತೆಯನ್ನು ಸುರಂಗ ಮಾರ್ಗವಾಗಿ ಪರಿವರ್ತಿಸಬೇಕಾದ ಅಗತ್ಯತೆಯ ಬಗ್ಗೆ ಸೋಮವಾರ ವಿಧಾನಸೌಧ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಸಭೆಯಲ್ಲಿ ಸುರಂಗ ಮಾರ್ಗ ನಿರ್ಮಾಣ ಮಾಡುವ ಬಗ್ಗೆ ರಾಜ್ಯ ಸರಕಾರದ ವತಿಯಿಂದ ಕೇಂದ್ರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಮತ್ತು ಕೇಂದ್ರ ಸಚಿವ ನಿತಿನ್‌ಗಡ್ಕರಿಯವರ ಬಳಿಯೂ ಚರ್ಚೆ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಸುರಂಗ ಮಾರ್ಗ ನಿರ್ಮಾಣ ಅತ್ಯಂತ ಪ್ರಮುಖ ಬೇಡಿಕೆಯಾಗಿದ್ದು ಈ ಬೇಡಿಕೆಯು ರಾಜ್ಯ ಮತ್ತು ಕೇಂದ್ರ ಸರಕಾರದ ಜಂಠಿ ಪಾಲ್ಗೊಳ್ಳುವಿಕೆಯಿಂದ ಕಾರ್ಯರೂಪಕ್ಕೆ ಬರಲಿದೆ.
ಅಶೋಕ್ ರೈ, ಶಾಸಕರು, ಪುತ್ತೂರು