Connect with us

ಇತರ

BIG NEWS : ಪೋಷಕರಿಗೆ ಶಾಕಿಂಗ್ ನ್ಯೂಸ್ : ಪಠ್ಯಪುಸ್ತಕ ದರ ಶೇ. 10 ರಷ್ಟು ಹೆಚ್ಚಳ.!

Published

on

ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವ ಪೋಷಕರಿಗೆ ಮತ್ತೊಂದು ಶಾಕ್, ಖಾಸಗಿ ಬಸ್ ದರ ಏರಿಕೆ ಬೆನ್ನಲ್ಲೇ ರಾಜ್ಯ ಸರ್ಕಾರ ಸರಬರಾಜು ಮಾಡುವ ಪಠ್ಯಪುಸ್ತಕದ ಬೆಲೆ ಕೂಡ ಶೇಕಡ 10ರಷ್ಟು ಹೆಚ್ಚಳವಾಗಿದೆ.

 

ಕರ್ನಾಟಕ ಪಠ್ಯಪುಸ್ತಕ ಸಂಘವು ಶಾಲೆಗಳ ಬೇಡಿಕೆಗೆ ಅನುಗುಣವಾಗಿ ರಾಜ್ಯ ಪಠ್ಯಕ್ರಮದ ಪಠ್ಯಪುಸ್ತಕಗಳನ್ನು ಮುದ್ರಿಸಿ ಶಾಲೆಗಳಿಗೆ ವಿತರಿಸುತ್ತದೆ.
ಸರ್ಕಾರಿ ಶಾಲೆಗಳಿಗೆ ಉಚಿತವಾಗಿ, ಖಾಸಗಿ ಶಾಲೆಗಳಿಗೆ ನಿಗದಿತ ದರ ಪಡೆದು ಪುಸ್ತಕಗಳನ್ನು ನೀಡಲಿದೆ. ಕಳೆದ ವರ್ಷ 34 ರೂ. ಇದ್ದ ಪುಸ್ತಕದ ದರ ಈ ವರ್ಷ 36 ರೂಪಾಯಿಗೆ ಏರಿಕೆಯಾಗಿದೆ. ಕೆಲವು ಪುಸ್ತಕಗಳ ದರ ಶೇಕಡ 100ರಷ್ಟು ಏರಿಕೆಯಾಗಿದೆ. ಆಂಗ್ಲ ಭಾಷೆಯ ಪುಸ್ತಕ ಕಳೆದ ವರ್ಷ 25 ರೂ ಇದ್ದು, ಈ ವರ್ಷ 51 ರೂಪಾಯಿಗೆ ಏರಿಕೆಯಾಗಿದೆ.

 

14 ಶೀರ್ಷಿಕೆಗಳು 1ರಿಂದ 17 ರೂ, 86 ಶೀರ್ಷಿಕೆಗಳು 1 ರಿಂದ 27 ರೂ. ವರೆಗೆ ಹೆಚ್ಚಳ ಮಾಡಲಾಗಿದೆ. ಪಠ್ಯ ಪುಸ್ತಕಗಳ ಒಟ್ಟಾರೆ ಏರಿಕೆಯ ಪ್ರಮಾಣ ನೋಡಿದಾಗ ಶೇಕಡ 10ರಷ್ಟು ಹೆಚ್ಚಳ ಆಗಿದೆ. ಇದರಿಂದ ವಿದ್ಯಾರ್ಥಿಗಳ ಪ್ರವೇಶ ಶುಲ್ಕದ ಮೇಲೆಯೂ ಪರಿಣಾಮ ಬೀರಲಿದ್ದು, ಪೋಷಕರಿಗೆ ಆರ್ಥಿಕ ಹೊರೆ ಹೆಚ್ಚಾಗಲಿದೆ.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version