Published
8 months agoon
By
Akkare News
ಕರ್ನಾಟಕ ವಿಧಾನಸಭೆಯ ಗೌರವಾನ್ವಿತ ಸ್ಪೀಕರ್ ಶ್ರೀ ಯು. ಟಿ. ಖಾದರ್ ಅವರು, ಹಿಮಾಚಲ ಪ್ರದೇಶದ ಧರ್ಮಶಾಲಾ ತಪೋವನದಲ್ಲಿ ನಡೆದ ಕಾಮನ್ ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ (CPA), ಭಾರತ ಪ್ರದೇಶ-ವಲಯ II ವಾರ್ಷಿಕ ಸಮ್ಮೇಳನದಲ್ಲಿ ವಿಶೇಷ ಅತಿಥಿಯಾಗಿ ಕರ್ನಾಟಕವನ್ನು ಪ್ರತಿನಿಧಿಸಿದರು. 

ಈ ಸಮ್ಮೇಳನದ ವಿಶೇಷತೆಯೆಂದರೆ, ಹಿಮಾಚಲ ಪ್ರದೇಶದ ಮುಖ್ಯಮಂತ್ರಿಗೆ ಮಾತ್ರ ಇಲ್ಲಿಯವರೆಗೆ ಮೀಸಲಾಗಿದ್ದ ಆಸನದಲ್ಲಿ ಶ್ರೀ ಖಾದರ್ ಅವರಿಗೆ ಕುಳಿತುಕೊಂಡು ಭಾಷಣ ಮಾಡುವ ಅಪರೂಪದ ಗೌರವ, ಅವಕಾಶ ದೊರಕಿತ್ತು. ಇದು ಅವರಿಗೆ ದೊರೆತ ಕೇವಲ ವೈಯಕ್ತಿಕ ಗೌರವವಲ್ಲ, ಇದೊಂದು ಮಂಗಳೂರು ವಿಧಾನಸಭಾ ಕ್ಷೇತ್ರ ಮತ್ತು ಇಡೀ ಕರ್ನಾಟಕ ರಾಜ್ಯದ ಜನತೆ ಅತ್ಯಂತ ಹೆಮ್ಮೆಪಡುವ ಕ್ಷಣವಾಗಿದೆ. ಇಲ್ಲಿವರೆಗೆ ವಿಧಾನಸಭಾ ಕಾರ್ಯಕಲಾಪಗಳು ಮಾತ್ರ ನಡೆದಿದ್ದ ಈ ಸಭಾಂಗಣದಲ್ಲಿ ಇದೇ ಮೊದಲ ಬಾರಿಗೆ ಈ ಸಮ್ಮೇಳನವನ್ನು ಆಯೋಜಿಸಲಾಗಿತ್ತು.

ಸಾಮಾಜಿಕ ಸಾಮರಸ್ಯ ಮತ್ತು ಮಾನವೀಯ ಮೌಲ್ಯಗಳ ಆಧಾರದ ಮೇಲೆ ಸಮಾಜ ನಿರ್ಮಾಣ ಮಾಡಲು ಸದಾ ಪ್ರಾಮಾಣಿಕ ಪ್ರಯತ್ನ ನಡೆಸುವ, ಸರಳ ಮತ್ತು ಸೌಮ್ಯ ವ್ಯಕ್ತಿತ್ವದ ಶ್ರೇಷ್ಠ ನಾಯಕನಿಗೆ ಈ ಗೌರವ ದೊರೆತಿರುವುದು ಸತ್ಯ, ನ್ಯಾಯ ಮತ್ತು ಪ್ರಾಮಾಣಿಕತೆಗೆ ದೇವರು ನೀಡಿರುವ ಪ್ರತಿಫಲವಾಗಿದೆ, ಜೊತೆಗೆ ಮಂಗಳೂರು ಕ್ಷೇತ್ರ ಮತ್ತು ಕರ್ನಾಟಕ ಜನರ ಆಶೀರ್ವಾದದಿಂದ ದೊರೆತಿರುವ ಗೌರವವಾಗಿದೆ. 



ಅವರು ಅವಕಾಶಗಳನ್ನು ಹುಡುಕಿಕೊಂಡು ಹೋದವರಲ್ಲ, ಆದರೆ ಅವರನ್ನು ಹುಡುಕಿಕೊಂಡು ಬರುವ ಅವಕಾಶಗಳಿಗೇನೂ ಕಡಿಮೆ ಇಲ್ಲ. ಅವರು ಎಲ್ಲಿಗೆ ಹೋದರೂ, ಅವರು ಉತ್ತಮ ಗೌರವ ಮತ್ತು ಆದರಕ್ಕೆ ಪಾತ್ರರಾಗುತ್ತಾರೆ. ಈ ಐತಿಹಾಸಿಕ ಕ್ಷಣವು ಇನ್ನೂ ಅನೇಕ ಸಾರ್ವಜನಿಕ ಪ್ರತಿನಿಧಿಗಳಿಗೆ, ನಿಜವಾದ ಜನಸೇವೆಯ ಹಾದಿಯಲ್ಲಿ ನಡೆಯಲು ಸ್ಫೂರ್ತಿ ನೀಡಲಿ.


