Published
7 months agoon
By
Akkare News
ಪುತ್ತೂರು: ಕೆದಿಲ ಕಾಂತಕೋಡಿ ತೋಡಿನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಇದೇ ವೇಳೆ ಆಕೆಯ ಪತಿಯ ಅಣ್ಣ ನಾಪತ್ತೆಯಾಗಿದ್ದು ಕೊಲೆಯ ಅನುಮಾನ ಮೂಡಿದೆ.
ಕಾಂತಕೋಡಿಯ ರಾಮಣ್ಣ ಗೌಡ ಅವರ ಪತ್ನಿ ಮಮತಾ (35) ಮೃತಪಟ್ಟವರು. ಅವರು ಬುಧವಾರ ಬೆಳಗ್ಗೆ ಬಟ್ಟೆ ಒಗೆಯಲೆಂದು ತೋಡಿಗೆ ತೆರಳಿದ್ದರು. ಬಳಿಕ ಅವರ ಭಾವ (ಪತಿಯ ಸಹೋದರ) ಸುಂದರ ಕೆಲಸಕ್ಕೆಂದು ಅದೇ ದಾರಿಯಲ್ಲಿ ಹೋದವರು ಸಂಬಂಧಿಕರಿಗೆ ಕರೆ ಮಾಡಿ ಮಮತಾ ತೋಡಿನಲ್ಲಿ ಬಿದ್ದಿರುವುದಾಗಿ ತಿಳಿಸಿದ್ದರು. ಮನೆ ಮಂದಿ ಸ್ಥಳಕ್ಕೆ ಬಂದಾಗ ಸುಂದರ ಅಲ್ಲಿರಲಿಲ್ಲ. ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ಮಮತಾ ಶವ ತೋಡಿನಲ್ಲಿತ್ತು. ರಾತ್ರಿಯಾದರೂ ಸುಂದರನ ಪತ್ತೆ ಆಗದ ಕಾರಣ ಸಾವಿನ ಬಗ್ಗೆ ಅನುಮಾನ ಮೂಡಿದೆ.


ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕೀರ್ತನಾ ಜೋಶಿ ಅವರ ಮೃತದೇಹವನ್ನು ಪುತ್ತೂರಿನ ಮನೆಗೆ ತಂದು ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಪಶು ವೈದ್ಯಕೀಯದಲ್ಲಿ ಎಂ.ಡಿ. ಶಿಕ್ಷಣ ಪೂರೈಸಿದ್ದ ಡಾ. ಕೀರ್ತನಾ ಜೋಶಿ ಅವರು ಪುತ್ತೂರು, ಕೊಯಿಲ ಹಾಗೂ ಮಂಗಳೂರಿನಲ್ಲಿ ಖಾಸಗಿಯಾಗಿ ವೈದ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸೋಮವಾರ ತಡರಾತ್ರಿ ಮಂಗಳೂರಿನ ತನ್ನ ಮನೆಯಲ್ಲಿ ನೇಣಿಗೆ ಕೊರಳೊಡ್ಡಿದ್ದಾರೆ ಎಂದು ತಿಳಿದುಬಂದಿದೆ.



ರಾಮಣ್ಣ ಗೌಡರ ಮನೆಯಲ್ಲೇ ವಾಸಿಸುತ್ತಿದ್ದ ಸುಂದರ ಅವರಿಗೆ ವಿವಾಹವಾಗಿ ವಿಚ್ಛೇದನ ಆಗಿತ್ತು ಎನ್ನುವ ಮಾಹಿತಿ ಇದ್ದು ಸಹೋದರ ಪತ್ನಿ ಜತೆಗೆ ಸಣ್ಣ ಪುಟ್ಟ ಸಂಘರ್ಷವೂ ನಡೆಯುತ್ತಿತ್ತು ಎನ್ನಲಾಗಿದೆ.
ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಮಂಗಳೂರಿನ ಆಸ್ಪತ್ರೆಗೆ ಕೊಂಡೊ ಯ್ಯಲು ನಿರ್ಧರಿಸಲಾಗಿದೆ.











