Published
4 months agoon
By
Akkare News
ಪುತ್ತೂರು: ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕರ್ನಾಟಕ ಸರಕಾರದ ವತಿಯಿಂದ ಮೈಸೂರಿನ ವಿಶ್ವವಿದ್ಯಾನಿಲಯ ಈಜು ಕೊಳದಲ್ಲಿ ದಿನಾಂಕ 8 ಮತ್ತು 9 ರಂದು ನಡೆದ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ವಿವೇಕಾನಂದ ಶಿಕ್ಷಣ ಸಂಸ್ಥೇಗಳಲ್ಲೊಂದಾದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದಲ್ಲಿ 9 ನೇ ತರಗತಿಯ ವಿದ್ಯಾರ್ಥಿ ಲಿಖಿತ್ ರಾಮಚಂದ್ರ ರವರು 4ಬೆಳ್ಳಿ ಮತ್ತು 1 ಕಂಚಿನ ಪದಕ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮತ್ತು 17 ವರ್ಷ ವಯೋಮಿತಿಯೊಳಗಿನ ಬಾಲಕರ ಈಜು ಸ್ಪರ್ಧೆಯಲ್ಲಿ ವೈಯುಕ್ತಿಕ 800ಮೀ ಫ್ರೀ ಸ್ಟೈಲ್, 200ಮೀ ಮೆಡ್ಲೆ ರಿಲೇ ಯಲ್ಲಿ ಬೆಳ್ಳಿ ಪದಕ 100ಮೀ ಬ್ರೆಸ್ಟ್ರೋಕ್ ನಲ್ಲಿ ಕಂಚು ಹಾಗೂ ಗುಂಪು ಸ್ಪರ್ಧೆಗಳಾದ 100ಮೀ ಫ್ರೀ ಸ್ಟೈಲ್ ರಿಲೇ ಮತ್ತು 100 ಮೀ ಮೆಡ್ಲೆ ರಿಲೇ ಯಲ್ಲಿ ಬೆಳ್ಳಿ ಪದಕಗಳನ್ನು ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.


ಇವರು ಮುಂಬರುವ ದಿನಾಂಕ 29 ರಿಂದ ಡಿಸೆಂಬರ್ 5ನೇ ತಾರೀಕಿನ ವರೆಗೆ ನವ ದೆಹಲಿಯ ತ್ಯಾಗರಾಜ್ ಈಜು ಕ್ರೀಡಾಂಗಣದಲ್ಲಿ ನಡೆಯಲಿರುವ 69ನೇ ರಾಷ್ಟ್ರೀಯ ಸ್ಕೂಲ್ ಗೇಮ್ಸ್ ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಭಾಗವಹಿಸಲಿದ್ದಾರೆ. ಇವರು ಪುತ್ತೂರು ಮೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರು ಆದ ರಾಮಚಂದ್ರ ಎ ಹಾಗೂ ದೀಪಾರಾಣಿ ಯವರ ಪುತ್ರ.
ಇವರು ಡಾ|| ಶಿವರಾಮ ಕಾರಂತ ಬಾಲವನ ಪುತ್ತೂರು ಇಲ್ಲಿನ ಪುತ್ತೂರು ಅಕ್ವಾಟಿಕ್ ಕ್ಲಬ್ ನ ಈಜು ನಿರ್ದೇಶಕರಾದ ಶ್ರೀಯುತ ಪಾರ್ಥ ವಾರಣಾಸಿ ಹಾಗೂ ತರಬೇತುದಾರರಾದ ಶ್ರೀಯುತ ನಿರೂಪ್, ಶ್ರೀಯುತ ರೋಹಿತ್, ಶ್ರೀಯುತ ದೀಕ್ಷಿತ್ ರಾವ್, ಹಾಗೂ ಶ್ರೀಯುತ ಪಕಾ ಕ್ರಾಂತಿ ತೇಜ ರವರಿಂದ ಈಜು ತರಬೇತಿ ಪಡೆಯುತ್ತಿದ್ದಾರೆ.








