Connect with us

ಧಾರ್ಮಿಕ

ಪುತ್ತೂರು ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಇಂದಿನಿಂದ ಧನುರ್ಮಾಸ ಪೂಜೆ ಆರಂಭ

Published

on

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧನುರ್ಮಾಸದ ವಿಶೇಷ ಪೂಜಾ ಕೈಂಕರ್ಯಗಳು ಇಂದಿನಿಂದ (ಡಿ.16) ಆರಂಭಗೊಂಡಿವೆ..

ಧನುಸಂಕ್ರಮಣದ ಮರುದಿನದಿಂದ ಪ್ರಾರಂಭವಾಗಿ, ಮುಂದಿನ ಉತ್ತರಾಯಣ ಪುಣ್ಯಕಾಲವಾದ ಮಕರ ಸಂಕ್ರಮಣದವರೆಗೆ ಈ ಪೂಜೆ ನಡೆಯಲಿದೆ

ಇದರ ಅಂಗವಾಗಿ ಇಂದು ಪ್ರಾತಃಕಾಲ 5:30ರ ಸುಮಾರಿಗೆ ದೇವರಿಗೆ ಧನುರ್ಮಾಸದ ಪ್ರಥಮ ಪೂಜೆಯನ್ನು ವಿಧಿವತ್ತಾಗಿ ನೆರವೇರಿಸಲಾಯಿತು.

ಕೊರೆಯುವ ಚಳಿಯ ನಡುವೆಯೂ ಈ ಸಂದರ್ಭದಲ್ಲಿ ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.

Continue Reading
Click to comment

Leave a Reply

Your email address will not be published. Required fields are marked *

Advertisement