Published
4 weeks agoon
By
Akkare News
ಬೆಂಗಳೂರು, ಮಾರ್ಚ್ 26: ಏಳು ವರ್ಷಗಳ ಸುದೀರ್ಘ ಅಂತರದ ನಂತರ ಭಾರತವು ಇರಾನ್‌ನಿಂದ ಎಲ್ಪಿಜಿ ಅನಿಲವನ್ನು ಖರೀದಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಭಾರತ 2019ರಲ್ಲಿ ಕೊನೆಯ ಬಾರಿಗೆ ಇರಾನ್‌ನಿಂದ ಅನಿಲ ಖರೀದಿಸಿತ್ತು. ಇದೀಗ ಅಮೆರಿಕದ ನಿರ್ಬಂಧಗಳ ತಾತ್ಕಾಲಿಕ ತೆರವು ಹಿನ್ನೆಲೆಯಲ್ಲಿ ಎಲ್ಪಿಜಿ ಖರೀದಿ ನಿರ್ಧಾರಕ್ಕೆ ಬಂದಿದೆ. ದೇಶದಲ್ಲಿ ಎದುರಾಗಿರುವ LPG ಗ್ಯಾಸ್ ಸಮಸ್ಯೆ ಮತ್ತು ಕಚ್ಚಾ ತೈಲ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಭಾರತವು ಹಗಲಿರುಳು ಪ್ರಯತ್ನಗಳನ್ನು ನಡೆಸುತ್ತಿದೆ. ಇದರ ಭಾಗವಾಗಿ, ಇರಾನ್‌ನ ವಿದೇಶಾಂಗ ಇಲಾಖೆ ಮತ್ತು ಅಲ್ಲಿನ ಮುಖ್ಯಸ್ಥರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.


ಭಾರತ ಸರ್ಕಾರವು ಇರಾನ್ ಸರ್ಕಾರದೊಂದಿಗೆ ಈ ಕುರಿತು ನಿರಂತರ ಮಾತುಕತೆ ನಡೆಸುತ್ತಿದ್ದು, ಏಳು ವರ್ಷಗಳ ನಂತರ ಇರಾನ್‌ನಿಂದ LPG ಗ್ಯಾಸ್ ಖರೀದಿ ಮಾಡಿಕೊಳ್ಳಲು ಸಿದ್ಧತೆಗಳು ನಡೆಯುತ್ತಿವೆ. ಮತ್ತೊಂದು ಮೂಲಗಳ ಪ್ರಕಾರ, ಇರಾನ್‌ನಿಂದ ಎಲ್ಪಿಜಿ ತುಂಬಿಕೊಂಡ ಹಡಗು ಈಗಾಗಲೇ ಹೊರಟಿದ್ದು, ಶೀಘ್ರದಲ್ಲೇ ಮಂಗಳೂರು ಬಂದರು ತಲುಪಲಿದೆ ಎಂಬ ಮಾಹಿತಿ ಲಭ್ಯವಾಗಿದೆ.







