Published
2 hours agoon
By
Akkare News
ಪುತ್ತೂರು: ದ.ಕ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ಪುತ್ತೂರು ಬಿಲ್ಲವ ಸಂಘದ ಮಾಜಿ ಉಪಾಧ್ಯಕ್ಷರಾಗಿರುವ ನರಿಮೊಗರು ಸುವರ್ಣ ಎಸ್ಟೇಟ್ ಮಾಲಕ ವೇದನಾಥ ಸುವರ್ಣರವರ ಸಹೋದರ ಗಂಗಾಧರ ಸುವರ್ಣ(66ವ. )ರವರು ಹೃದಯಾಘಾತದಿಂದ ಏ.24 ರಂದು ರಾತ್ರಿ ನಿಧನ ಹೊಂದಿದ್ದಾರೆ.

ದಿ.ಕಮಲಾಕ್ಷಿ ಹಾಗೂ ಮಾಯಿಲಪ್ಪ ಸುವರ್ಣರವರ ಪುತ್ರ, ಕೃಷಿಕರೂ, ಶಿವಗಂಗಾ ಕನ್ಸ್ಟ್ರಕ್ಷನ್ ಇದರ ಉದ್ಯಮಿ ಆಗಿರುವ ಗಂಗಾಧರ ಸುವರ್ಣರವರಿಗೆ ರಾತ್ರಿ ವೇಳೆ ಎದೆ ನೋವು ಕಾಣಿಸಿಕೊಂಡಿದ್ದು ಕೂಡಲೇ ಅವರನ್ನು ದರ್ಬೆ ಹಿತ ಆಸ್ಪತ್ರೆಗೆ ಕರೆ ತರಲಾಗಿತ್ತಾದರೂ ಆವಾಗಲೇ ಅವರು ಮೃತಪಟ್ಟಿದ್ದರು. ಮೃತರು ಪತ್ನಿ ಶರ್ಮಿಳಾ, ಪುತ್ರ ಕೌಶಿಕ್, ಪುತ್ರಿ ಕೀರ್ತನಾ, ಸಹೋದರ ವೇದನಾಥ ಸುವರ್ಣ, ಸಹೋದರಿಯರಾದ ತಿಲೋತ್ತಮ ಬಪ್ಪಳಿಗೆ, ವೀಣಾ ಬಪ್ಪಳಿಗೆ, ವಿನಯ ಸುಳ್ಯರವರನ್ನು ಅಗಲಿದ್ದಾರೆ.


‘





