ತೂಗುಸೇತುವೆಗಳ ಸರದಾರ, ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ ರು ಇಂದು ಮುಂಜಾನೆ ಸುಳ್ಯದ ಕೆ.ವಿ.ಜಿ. ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಸುಮಾರು 76 ವರ್ಷ ವಯಸ್ಸಾಗಿತ್ತು.ಗಿರೀಶ್ ಭಾರದ್ವಾಜರು ಕೆಲ ದಿನಗಳ ಹಿಂದೆ ಉತ್ತರ ಕಾಂಡದಲ್ಲಿ ದೇವಸ್ಥಾನದಲ್ಲಿ ಗಳಿಗೆ ಹೋಗಿ ಬಂದಿದ್ದರು.
ಹೃದಯ ಸಂಬಂಧಿ ಸಮಸ್ಯೆಯಿಂದ ಅವರು ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇಂದು ಮುಂಜಾನೆ ತೀವ್ರ ಅಸ್ವಸ್ಥ್ಒಂಡ ಅವರು ಕೊನೆಯುಸಿರೆಳೆದರು.