Published
18 hours agoon
By
Akkare News
ಪುತ್ತೂರು: -ಪುತ್ತೂರಿನ ಎವಿಜಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಅಕ್ಟೋಬರ್ ಎರಡರಂದು ಗಾಂಧೀಜಿ ಹಾಗೂ ಶಾಸ್ತ್ರೀಜಿ ಜಯಂತಿ ಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು. ರೋಟರಿ ಕ್ಲಬ್ ಪುತ್ತೂರು ಯುವ ದ ಅಧ್ಯಕ್ಷರಾದ ಶ್ರೀಮತಿ ವಚನ ಜಯರಾಮ ಅವರು ಮುಖ್ಯ ಅತಿಥಿಯಾಗಿದ್ದರು. ಅವರು ಮಾತನಾಡುತ್ತಾ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸತ್ಯ, ಸರಳತೆ ಮತ್ತು ಅಹಿಂಸೆಯು ಅವರನ್ನು ರಾಷ್ಟ್ರಪಿತ ಪಟ್ಟಕ್ಕೆ ಏರಿಸಿದೆ. ಅವರ ನಿರಂತರ ಹೋರಾಟದಿಂದ ಗಳಿಸಿದ ಸ್ವಾತಂತ್ರ್ಯವನ್ನು ನಾವು ಉಳಿಸಬೇಕಾಗಿದೆ ಮತ್ತು ಅವರು ಅಳವಡಿಸಿಕೊಂಡ ಸರಳತೆ ಮತ್ತು ಸ್ವಚ್ಛತೆ ಮುಂತಾದ ಆದರ್ಶ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ವೆಂಕಟರಮಣ ಗೌಡ ಕಳುವಾಜೆಯವರು ವಹಿಸಿದ್ದು, ಅವರು ಈ ಇಬ್ಬರು ನಾಯಕರ ಬದುಕಿನ ಬಗ್ಗೆ ಮಾತಾಡಿ ಅವರ ಆದರ್ಶಗಳನ್ನು ನಾವು ಅನುಸರಣೆ ಮಾಡುವುದೇ ಅವರಿಗೆ ಕೊಡುವ ಗೌರವ ಎಂದು ಹೇಳಿದರು.
ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಶ್ರೀ ಎ ವಿ ನಾರಾಯಣ,ನಿರ್ದೇಶಕರಲ್ಲಿ ಒಬ್ಬರಾದ ಶ್ರೀಮತಿ ಪುಷ್ಪಾವತಿ ಕಳುವಾಜೆ, ಪ್ರಧಾನ ಕಾರ್ಯದರ್ಶಿ ಮತ್ತು ಆಡಳಿತ ಅಧಿಕಾರಿಯಾದ ಶ್ರೀ ಗುಡ್ಡಪ್ಪ ಗೌಡ ಬಲ್ಯ, ಉಪಾಧ್ಯಕ್ಷರಾದ ಶ್ರೀ ಉಮೇಶ್ ಮಲುವೇಳು, ಮುಖ್ಯೋಪಾಧ್ಯಾರಾದ ಶ್ರೀ ಅಮರನಾಥ ಪಟ್ಟೆ ಉಪಸ್ಥಿತರಿದ್ದರು.




