Published
3 months agoon
By
Akkare News
ಬಂಟ್ವಾಳ : ಸ್ವಸ್ತಿ। ಶ್ರೀ ವಿಶ್ವಾವಸು ನಾಮ ಸಂವತ್ಸರದ ವೃಶ್ಚಿಕ ಮಾಸ ದಿನ ೧೦ ಸಲುವ ದಿನಾಂಕ 26-11-2025ನೇ ಬುಧವಾರ ಸಂಜೆ ಗಂಟೆ 5.45ಕ್ಕೆ ಸರಿಯಾಗಿಬರಿಮಾರು ಪಂಜುರ್ಲಿಗುಡ್ಡೆ ‘ಭ್ರಾಮರಿ ನಿವಾಸ’ದ ಎದುರುಗಡೆ ಹಾಕಿರುವ ಪುಷ್ಪಾಲಂಕೃತವಾದ ಭವ್ಯ ರಂಗಮಂಟಪದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ, ಕಟೀಲು ಮೇಳ ದವರಿಂದ “ಶ್ರೀ ದೇವಿ ಮಹಾತ್ಮೆ”
ಎಂಬ ಪುಣ್ಯ ಕಥಾಭಾಗವನ್ನು ನಮ್ಮ ಸೇವಾ ಬಯಲಾಟವಾಗಿ ಆಡಿತೋರಿಸಲಿರುವರು.


ಆ ಪ್ರಯುಕ್ತ ತಾವೆಲ್ಲರೂ ಆಗಮಿಸಿ, ಶ್ರೀ ದೇವಿಯ ಪ್ರಸಾದ ಸ್ವೀಕರಿಸಿ, ಈ ಬಯಲಾಟವನ್ನು ಚಂದಗಾಣಿಸಿಕೊಡಬೇಕಾಗಿ ಅಪೇಕ್ಷಿಸುವ ತಮ್ಮ ಆಗಮನಾಭಿಲಾಷಿಗಳು,
ಶ್ರೀಮತಿ ಚಂದ್ರಾವತಿ ಮತ್ತು ಶ್ರೀ ಶೀನಪ್ಪ ಪೂಜಾರಿ ಶ್ರೀಮತಿ ಪವಿತ್ರ ಮತ್ತು ಶ್ರೀ ಹರಿಕೃಷ್ಣ ಬಿ.ಎಸ್. ಮಾ| ಮೋಧಕ್ ಬಂಗೇರ ಬಲ್ಯ ಬರಿಮಾರು
ಸಂಜೆ ಗಂಟೆ 5.30ಕ್ಕೆ ಮೇಳದ ದೇವರ ಚೌಕಿ ಪೂಜೆ ರಾತ್ರಿ ಗಂಟೆ 8.30ಕ್ಕೆ ಅನ್ನಸಂತರ್ಪಣೆ ಜರಗಲಿರುವುದು.
ಈ ಕಾರ್ಯಕ್ರಮದ ನೇರ ಪ್ರಸಾರ ನ್ಯೂಸ್ ಅಕ್ಕರೆ ನಡೆಸಲಿದೆ.








