Connect with us

ಇಂದಿನ ಕಾರ್ಯಕ್ರಮ

ಇಂದು ಸಂಜೆ ಮಂಗಳೂರು ನಲ್ಲಿ(ಜ.10) ಅಖಿಲ ಭಾರತ ಮಹಾಮುಷ್ಕರದ ಯಶಸ್ವಿಗೆ ಜಿಲ್ಲಾ ಮಟ್ಟದ ಸಿದ್ದತಾ ಸಭೆ

Published

on

ಮಂಗಳೂರು:ಕಾರ್ಮಿಕ ವರ್ಗಕ್ಕೆ ಮಾರಕವಾಗಿ ಪರಿಣಮಿಸಲಿರುವ ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಲು ಹೊರಟಿರುವ ಕೇಂದ್ರ ಸರಕಾರದ ವಿರುದ್ದ ಎಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳು,ರೈತ ಸಂಘಟನೆಗಳು,ಮಧ್ಯಮ ವರ್ಗದ ನೌಕರರ ಸಂಘಟನೆಗಳು ಹಾಗೂ ವಿವಿಧ ಜನವಿಭಾಗದ ಸಂಘಟನೆಗಳು ಒಟ್ಟು ಸೇರಿ ಫೆಬ್ರವರಿ 12 ರಂದು ಅಖಿಲ ಭಾರತ ಮಹಾಮುಷ್ಕರವನ್ನು ನಡೆಸಲಿದೆ.ಇದನ್ನು ದ.ಕ.ಜಿಲ್ಲೆಯಲ್ಲಿ ಅತ್ಯಂತ ಯಶಸ್ವಿಗೊಳಿಸಲು ದ.ಕ‌.ಜಿಲ್ಲಾ ಮಟ್ಟದ ರೈತ ಕಾರ್ಮಿಕ ವಿದ್ಯಾರ್ಥಿ ಯುವಜನ ಮಹಿಳಾ ದಲಿತ ಆದಿವಾಸಿ ಹಾಗೂ ಜನಪರ ಸಂಘಟನೆಗಳ ಜಂಟಿ ಸಭೆಯನ್ನು ಇಂದು(10-01-2026ರಂದು ಶನಿವಾರ) ಸಂಜೆ 5 ಗಂಟೆಗೆ ನಗರದ ಸ್ಟೇಟ್ ಬ್ಯಾಂಕ್ ಬಳಿಯಲ್ಲಿರುವ ವಿಕಾಸ ಕಚೇರಿಯಲ್ಲಿ ಕರೆಯಲಾಗಿದೆ.
ಪ್ರಕಟಣೆ:
ಸುನಿಲ್ ಕುಮಾರ್ ಬಜಾಲ್

 

Continue Reading
Click to comment

Leave a Reply

Your email address will not be published. Required fields are marked *

Advertisement