Published
2 hours agoon
By
Akkare News

ಆಡಳಿತ ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆ ತರುವ ಇಚ್ಛೆ ವ್ಯಕ್ತಪಡಿಸಿದ ಅವರು, “ಇದು ನನ್ನ ಒಬ್ಬನ ಸರ್ಕಾರವಲ್ಲ, ಇದು ಜನರ ಸರ್ಕಾರ. ಸರ್ಕಾರದ ಪ್ರತಿಯೊಂದು ನಿರ್ಧಾರವೂ ಜನರಿಗೆ ತಿಳಿಯುವಂತಿರಬೇಕು. ಅಧಿಕಾರ ಎಂಬುದು ಕೇವಲ ಗದ್ದಿಗೆಯಲ್ಲ, ಅದು ಸಾರ್ವಜನಿಕ ಸೇವೆಯ ಜವಾಬ್ದಾರಿ,” ಎಂದು ಮಾರ್ಮಿಕವಾಗಿ ನುಡಿದರು.
ಹೊಸ ಸರ್ಕಾರಕ್ಕೆ ವ್ಯವಸ್ಥೆಯನ್ನು ಸರಿಪಡಿಸಲು ಸ್ವಲ್ಪ ಕಾಲಾವಕಾಶ ನೀಡಬೇಕೆಂದು ಜನರಲ್ಲಿ ಮನವಿ ಮಾಡಿದ ಮುಖ್ಯಮಂತ್ರಿ ವಿಜಯ್, ರಾಜ್ಯದಲ್ಲಿ ಬೇರೂರಿರುವ ಭ್ರಷ್ಟಾಚಾರ ಮತ್ತು ಮಾದಕ ದ್ರವ್ಯಗಳ ಹಾವಳಿಯನ್ನು ಸಂಪೂರ್ಣವಾಗಿ ತೊಡೆದುಹಾಕುವುದೇ ತಮ್ಮ ಮೊದಲ ಗುರಿ ಎಂದು ಭರವಸೆ ನೀಡಿದರು.



