Published
4 hours agoon
By
Akkare News
ಪುತ್ತೂರು: ಭಾನುವಾರ ಕುಡಿಪ್ಪಾಡಿ ಗ್ರಾಮದಲ್ಲಿ ಕುತೂಹಲಕಾರಿ ಘಟನೆಯೊಂದು ಗ್ರಾಮಸ್ಥರ ಮುಂದೆ ಸಾಕ್ಷಿಯಾಗಿದೆ. ಕುಡಿಪ್ಪಾಡಿ ಗ್ರಾಮಕ್ಕೆ ಶಾಸಕರು ಅನುದಾನ ನೀಡಿಲ್ಲ, ಇಲ್ಲಿನ ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿದೆ ಎಂದು ಶಾಸಕರ ವಿರುದ್ದ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ ರಿಕ್ಷಾ ಚಾಲಕನೋರ್ವನ ಕೈಯಿಂದಲೇ ಶಾಸಕ ಅಶೋಕ್ ರೈ ಅವರು ಕುಡಿಪ್ಪಾಡಿ ಗ್ರಾಮದ ನೂತನ ರಸ್ತೆಯನ್ನು ಉದ್ಘಾಟಿಸಿದ ಘಟನೆ ನಡೆದಿದೆ.
ಕುಡಿಪ್ಪಾಡಿ ಗ್ರಾಮದ ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿದೆ, ಶಾಸಕರು ಅನುದಾನ ನೀಡುತ್ತಿಲ್ಲ ಎಂದು ಕುಡಿಪ್ಪಾಡಿಯ ಚಂದ್ರಶೇಖರ ಎಂಬವರು ಪುತ್ತೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಶಾಸಕ ಅಶೋಕ್ ರೈ ವಿರುದ್ದ ವಾಗ್ದಾಳಿ ನಡೆಸಿದ್ದರು. ಈ ಸುದ್ದಿಗೋಷ್ಠಿಯಲ್ಲಿ ಕುಡಿಪ್ಪಾಡಿಯ ರಿಕ್ಷಾ ಚಾಲಕ ಹರೀಶ್ ನಾಯಕ್ ಎಂಬವರು ಭಾಗವಹಿಸಿದ್ದರು. ಶಾಸಕರ ವಿರುದ್ದ ಆರೋಪಗಳಿಗೆ ಇವರು ಸಹಮತವನ್ನೂ ವ್ಯಕ್ತಪಡಿಸಿದ್ದರು. 
೨.೮೪ ಲಕ್ಷ ಅನುದಾನ ನೀಡಿದ್ದೇನೆ ಈ ವೇಳೆ ಮಾತನಾಡಿದ ಶಾಸಕರು ಕುಡಿಪ್ಪಾಡಿ ಗ್ರಾಮಕ್ಕೆ ಎರಡು ವರ್ಷದಲ್ಲಿ ೨.೮೪ ಕೋಟಿ ಅನುದಾನ ನೀಡಿದ್ದೇನೆ. ಸಣ್ಣ ಗ್ರಾಮವಾದರೂ ದೊಡ್ಡ ಮೊತ್ತದ ಅನುದಾನವನ್ನು ನೀಡಿದ್ದೇನೆ. ಎಲ್ಲಿಯೂ ತಾರತಮ್ಯ ಮಾಡಿಲ್ಲ. ಅಭಿವೃದ್ದಿಯಾಗಿಲ್ಲ ಎಂದು ಸುದ್ದಿಗೋಷ್ಠಿ ನಡೆಸಿದವರು ರಾಜಕೀಯ ಪ್ರೇರಿತ ಸುದ್ದಿಗೋಷ್ಠಿಯಗಿತ್ತು. ಇಲ್ಲಿ ಆಗಿರುವ ಕೆಲಸವನ್ನು ಒಮ್ಮೆ ಪರಿಶೀಲನೆ ಮಾಡಲಿ. ಇವತ್ತು ೭೮ ಲಕ್ಷ ರೂ ಅನುದಾನದಲ್ಲಿ ವಿವಿಧ ಶಿಲಾನ್ಯಾಸ ಮಾಡಿದ್ದೇನೆ. ಮುಂದೆಯೂ ಈ ಗ್ರಾಮಕ್ಕೆ ಅನುದಾನ ನೀಡುತ್ತೇನೆ. ನಮಗೆ ಗ್ರಾಮದ ಅಭಿವೃದ್ದಿ ಮುಖ್ಯ ರಾಜಕೀಯ ಮಾಡುವವರು ಅದನ್ನೇ ಮಾಡುತ್ತಿರಲಿ. ಕಬಕದಿಂದ ಕುಂಡಡ್ಕ ರಸ್ತೆಗೆ ೪ ಕೋಟಿ ಅನುದಾನ ಮಂಜೂರಾಗಿದೆ. ಕೆಲವು ಕಡೆಗಳಲ್ಲಿ ಡಾಮಾರು ರಸ್ತೆಗಳು ಹೊಂಡ ಬಿದ್ದಿದೆ ಇದಕ್ಕೂ ೨೫ ಲಕ್ಷ ಅನುದಾನ ಮಂಜೂರಾಗಿದೆ. ಮಳೆಗಾಲದಲ್ಲಿ ಕಾಮಗಾರಿ ನಡೆಸಲು ಕಷ್ಟವಾದರೆ ಹೊಂಡಗಳನ್ನು ಮುಚ್ಚುವ ಕಾಮಗಾರಿ ನಡೆಯಲಿದೆ ಎಂದು ಹೇಳಿದರು. 




