Published
2 hours agoon
By
Akkare News
ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ಕ್ಷೇತ್ರ ಮೆಕ್ಕಾ ನಗರವನ್ನು ಗುರಿಯಾಗಿಸಿಕೊಂಡು ಯೆಮೆನ್ನ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಸಶಸ್ತ್ರ ಡ್ರೋನ್ ದಾಳಿಗೆ ಯತ್ನಿಸಿದ್ದು, ಸೌದಿ ಅರೇಬಿಯಾದ ಇತಿಹಾಸದಲ್ಲೇ ಮೊದಲ ಬಾರಿಗೆ ಮೆಕ್ಕಾದಲ್ಲಿ ವೈಮಾನಿಕ ಅಪಾಯದ ಜಾಗೃತಿ ಎಚ್ಚರಿಕೆಯ (Alert) ಸೈರನ್ ಮೊಳಗಿಸಲಾಗಿದೆ. ಪವಿತ್ರ ನಗರದ ನಿರ್ಬಂಧಿತ ವಾಯುಪ್ರದೇಶಕ್ಕೆ ಪ್ರವೇಶಿಸುವ ಮುನ್ನವೇ ದಕ್ಷಿಣ ಮೆಕ್ಕಾ ಭಾಗದಲ್ಲಿ ಹೌತಿಗಳ ಸಶಸ್ತ್ರ ಡ್ರೋನ್ ಅನ್ನು ಸೌದಿ ಅರೇಬಿಯಾದ ವಾಯು ರಕ್ಷಣಾ ಪಡೆ ಯಶಸ್ವಿಯಾಗಿ ಹೊಡೆದುರುಳಿಸಿದೆ. ಘಟನೆಯ ಬೆನ್ನಲ್ಲೇ ರಾಷ್ಟ್ರೀಯ ತುರ್ತು ಎಚ್ಚರಿಕೆ ವೇದಿಕೆಯ ಮೂಲಕ ಮೆಕ್ಕಾ, ಜೆಡ್ಡಾ ಮತ್ತು ತೈಫ್ ನಗರಗಳಲ್ಲಿ ವೈಮಾನಿಕ ದಾಳಿಯ ಭೀತಿಯ ಮುನ್ನೆಚ್ಚರಿಕೆ ನೀಡಲಾಗಿದ್ದು, ವಾಯುಪ್ರದೇಶ ಸುರಕ್ಷಿತವಾದ ನಂತರ ಎಚ್ಚರಿಕೆಯನ್ನು ಹಿಂಪಡೆಯಲಾಯಿತು.




