Connect with us

ಇಂದಿನ ಕಾರ್ಯಕ್ರಮ

ಕೊಂಬೆಟ್ಟು ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಭಾಷೆಯನ್ನು ರಕ್ಷಿಸಬೇಕಾದ ಸ್ಥಿತಿ ಬರುವುದು ಅಪೇಕ್ಷಣೀಯವಲ್ಲ :ನಾಗರಾಜ ಭಟ್

Published

on

“ಭಾಷೆ ಮತ್ತು ಬದುಕು ಬೇರೆ ಬೇರೆಯಲ್ಲ ಬದುಕಿನ ಒಳಗೆ ಭಾಷೆಯು ಬೆರೆತು ಜೀವನ ಸಾಗುವುದು ಒಂದು ಸಹಜ ಸ್ವಾಭಾವಿಕ ಪ್ರಕ್ರಿಯೆ. ಇಂತಹ ಸಂದರ್ಭದಲ್ಲಿ ನಮ್ಮ ಉಸಿರಿನಂತಿರುವ ಭಾಷೆಯನ್ನು ರಕ್ಷಿಸಬೇಕು ಎನ್ನುವಂತಹ ಸ್ಥಿತಿಗೆ ಬರುವುದು ಅಪೇಕ್ಷಣೀಯವಾದ ವಿಚಾರವಲ್ಲ” ಎಂದು ಕೊಂಬೆಟ್ಟು ಪ್ರೌಢಶಾಲೆಯ ಪ್ರಭಾರ ಉಪ ಪ್ರಾಂಶುಪಾಲರಾದ ನಾಗರಾಜ ಭಟ್ ಪಿ ನುಡಿದರು.

ಅವರು ದಿನಾಂಕ 01- 10 -2026ರಂದು ಕೊಂಬೆಟ್ಟು ಪ್ರೌಢಶಾಲೆಯ ಶಿವ ಸದನದಲ್ಲಿ ಜರುಗಿದ 71ನೇ ಕರ್ನಾಟಕ ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಭಾಸ್ಕರ ರಾವ್ “ಕನ್ನಡ ಸಾಹಿತ್ಯ ಪರಂಪರೆಯು ಅತ್ಯಂತ ಶ್ರೀಮಂತವಾದದ್ದು ಭಾರತದ ಎಲ್ಲಾ ಭಾಷೆಗಳನ್ನು ಗಮನಿಸಿದಾಗ ನಮಗೆ ಕನ್ನಡದ ತೂಕ ತುಸು ಹೆಚ್ಚೇ ಇರುವುದು ವೇದ್ಯವಾಗುತ್ತದೆ. ಕನ್ನಡ ಭಾಷೆಯ ಅಭಿಮಾನ ನಮ್ಮಲ್ಲಿ ನಿರಂತರವಾಗಿರಲಿ” ಎಂದು ನುಡಿದರು. ಪ್ರಧಾನ ಭಾಷಣ ಮಾಡಿದ ಕನ್ನಡ ಶಿಕ್ಷಕಿ ಭಾರತಿ ಕನ್ನಡ ಭಾಷೆ ಮತ್ತು ಇತಿಹಾಸದ ಕುರಿತಾಗಿ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.

ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಅನಿಲ್ ಪಾಯಸ್, ರಮೇಶ ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಕನ್ನಡ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ನಾಡಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಶಿಕ್ಷಕಿ ಕುಸುಮಾವತಿ ಕಾರ್ಯಕ್ರಮವನ್ನು ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಗೀತಾಂಜಲಿ ವಂದಿಸಿದರು. ಶಿಕ್ಷಕರಾದ ಗ್ರೆಗೊರಿ ರೋನಿ ಪಾಯಸ್ , ಶೋಭಾ, ಮಧುರಾ ವಿದ್ಯಾರ್ಥಿಗಳಿಗೆ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು.

ವಿದ್ಯಾರ್ಥಿಗಳಿಂದ ಕನ್ನಡ ಗೀತ ಗಾಯನ ಕಾರ್ಯಕ್ರಮ ಭಾಷಣಗಳು ನಡೆದವು.

 

Continue Reading
Click to comment

Leave a Reply

Your email address will not be published. Required fields are marked *

Advertisement