Connect with us

ಇಂದಿನ ಕಾರ್ಯಕ್ರಮ

ನುಡಿದಂತೆ ನಡೆಯುವ ಜನನಾಯಕ ಶಾಸಕ ಅಶೋಕ್ ಕುಮಾರ್ ರೈ ಅವರಿಂದ ಪುತ್ತೂರು ಮುಂಡೂರು ಭಾಗಕ್ಕೆ ಅಭಿವೃದ್ಧಿಯ ಮಹಾಕೊಡುಗೆ ಮುಕ್ರಂಪಾಡಿಯಿಂದ ಮುಂಡೂರು ರಸ್ತೆ ಅಗಲೀಕರಣಕ್ಕೆ ಭರ್ಜರಿ 4 ಕೋಟಿ ಅನುದಾನ ಮಂಜೂರು!

Published

on

ಪುತ್ತೂರು ಕ್ಷೇತ್ರದ ಪ್ರತಿ ಮಣ್ಣಿನ ಕಣ ಕಣದಲ್ಲೂ ಅಭಿವೃದ್ಧಿಯ ಹರಿಕಾರರಾಗಿ, ಜನರ ಕಷ್ಟ-ಸುಖಗಳಿಗೆ ಸದಾ ಸ್ಪಂದಿಸುತ್ತಿರುವ ಜನಪ್ರಿಯ ಶಾಸಕ ಶ್ರೀ ಅಶೋಕ್ ಕುಮಾರ್ ರೈ ಅವರು ಮುಂಡೂರು ಭಾಗದ ಜನತೆಗೆ ಮತ್ತೊಂದು ಬೃಹತ್ ವಾಗ್ದಾನವನ್ನು ಈಡೇರಿಸಲು ಮುಂದಾಗಿದ್ದಾರೆ. ಮುಂಡೂರಿನ ಕೆಮ್ಮಿಂಜೆ ಕಲ್ಲಗುಡ್ಡೆಯಲ್ಲಿ ಈಗಾಗಲೇ ಅಂದಾಜು 9.73 ಲಕ್ಷ ರೂ. ವೆಚ್ಚದ ತಾಲೂಕು ಕ್ರೀಡಾಂಗಣಕ್ಕೆ ಶಿಲಾನ್ಯಾಸ ನೆರವೇರಿಸಿರುವ ಅವರು, ಇದೀಗ ಮುಂಡೂರಿನ ಸಮಗ್ರ ಪ್ರಗತಿಗಾಗಿ ಬಂಗಾರದಂಥ ಯೋಜನೆಗಳನ್ನು ಸಾಕಾರಗೊಳಿಸುತ್ತಿದ್ದಾರೆ. ಮುಂಡೂರಿನಲ್ಲಿ ಕೆಲವೇ ದಿನಗಳಲ್ಲಿ ಬರಲಿರುವ ಅಂದಾಜು 10 ಕೋಟಿ ರೂ. ವೆಚ್ಚದ ಹೈಟೆಕ್ ಡಿಜಿಟಲ್ RTO ಟ್ರ್ಯಾಕ್, ಪರಿಸರಸ್ನೇಹಿ ಎಲೆಕ್ಟ್ರಿಕ್ ಬಸ್ ಚಾರ್ಚಿಂಗ್ ಪಾಯಿಂಟ್ ಹಾಗೂ ಕ್ರೀಡಾಂಗಣಕ್ಕೆ ಬರುವ ಜನರಿಗೆ ಹಾಗೂ ಸ್ಥಳೀಯ ಸಾರ್ವಜನಿಕರಿಗೆ ಮುಂದಿನ ದಿನಗಳಲ್ಲಿ ಯಾವುದೇ ಸಂಚಾರ ದಟ್ಟಣೆಯ ಸಮಸ್ಯೆ ಕಾಡಬಾರದು ಎಂಬ ದೂರದೃಷ್ಟಿಯಿಂದ, ಶಾಸಕರು ಮುಕ್ರಂಪಾಡಿಯಿಂದ_ಮುಂಡೂರು ವರೆಗಿನ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿಗೆ ಬರೋಬ್ಬರಿ 4 ಕೋಟಿ ರೂಪಾಯಿ ವಿಶೇಷ ಅನುದಾನವನ್ನು ಘೋಷಿಸಿದ್ದಾರೆ. ಕೇವಲ ಭಾಷಣಗಳಲ್ಲದೆ, ಪ್ರತಿಯೊಂದು ಮಾತನ್ನೂ ಕೃತಿಯಲ್ಲಿ ತೋರಿಸುತ್ತಾ ಪುತ್ತೂರು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಢಿಸುತ್ತಿರುವ ಶಾಸಕ ಅಶೋಕ್ ಕುಮಾರ್ ರೈ ಅವರ ಈ ಜನಪರ ಕಾಳಜಿ ಹಾಗೂ ಅಭಿವೃದ್ಧಿ ಪರ ಹೋರಾಟಕ್ಕೆ ಮುಂಡೂರು ಭಾಗದ ಜನತೆ ಹರ್ಷೋದ್ಘಾರ ವ್ಯಕ್ತಪಡಿಸಿದ್ದು, ಕ್ಷೇತ್ರದ ಪ್ರತಿಯೊಬ್ಬರ ಹೃದಯದಲ್ಲೂ ಅಶೋಕ್ ಕುಮಾರ್ ರೈ ಅವರ ನಾಯಕತ್ವ ಮತ್ತಷ್ಟು ಗಟ್ಟಿಯಾಗಿದೆ!

 
 

Continue Reading
Click to comment

Leave a Reply

Your email address will not be published. Required fields are marked *

Advertisement