ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಾನೂನು ಕ್ರೈಮ್ ನ್ಯೂಸ್ ಚರ್ಚೆಗಳು ಪ್ರಕಟಣೆ ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ಸಾಮಾನ್ಯ ಸ್ಥಳೀಯ
ನಗರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನಸಮಸ್ಯೆ ಜಲಸಿರಿ ಅಧಿಕಾರಿಗಳ ಸಭೆ ಕರೆದ ಶಾಸಕರು ಸಮಸ್ಯೆಗಳಿಗೆ ಸ್ಪಂದಿಸದಂತೆ ಅಧಿಕಾರಿಗಳ ತಡೆ: ಸಾರ್ವತ್ರಿಕ ಆಕ್ರೋಶ, ನೀತಿ ಸಂಹಿತೆ: ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವಲ್ಲಿ ಅಧಿಕಾರಿಗಳ ಅಡ್ಡಿ- ಎರಡು ದಿನದಲ್ಲಿ ಕುಡಿಯುವ ನೀರು ಸಮಸ್ಯೆ ಪರಿಹಾರ ಮಾಡದಿದ್ದಲ್ಲಿ ಕಚೇರಿಯಲ್ಲಿ ಧರಣಿ ಕೂರುವೆ: ಶಾಸಕ ಅಶೋಕ್ ರೈPublished
2 years agoon
By
Akkare News
ಬೆಂಗಳೂರು; ಕನ್ನಡದ ನಂಬರ್ ಒನ್ ಯೂಟ್ಯೂಬರ್ ಡಾ.ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್ ಪ್ರತಿ ಕನ್ನಡಿಗನೂ ಚಿರಪರಿಚಿತ. ಆದರೆ ಕಳೆದ ತಿಂಗಳಿಂದ ಗಗನ್ ತಮ್ಮ ಡಾ ಟ್ರೋ ಯೂಟ್ಯೂಬ್ ಚಾನೆಲ್ ನಲ್ಲಿ ಯಾವುದೇ ವೀಡಿಯೋ ಹಾಕಿಲ್ಲ.
ಚೀನಾ ಪ್ರವಾಸದ ವೀಡಿಯೋ ಕೊನೆಯ ವೀಡಿಯೋ. ಹಾಗಾಗಿ ಚೀನಾ ದಲ್ಲಿ ಭಾರತವನ್ನು ಹೊಗಳಿದ್ದಕ್ಕೆ ಗಗನ್ ಗೆ ಸಮಸ್ಯೆಯಾಗಿದೆ. ಅವರು ಚೀನಾ ಜೈಲಿನಲ್ಲಿದ್ದಾರೆ. ಡಿಪ್ರೆಷನ್ ಗೆ ಹೋಗಿದ್ದಾರೆ. ಚಾನೆಲ್ ಬ್ಲಾಕ್ ಆಗಿದೆ ಅಂತೆಲ್ಲಾ ಸುದ್ದಿಯಾಗಿತ್ತು. ಇದೀಗ ಈ ಬಗ್ಗೆ ಅವರ ಆಪ್ತ ಸ್ನೇಹಿತ ಗ್ಲೋಬಲ್ ಕನ್ನಡಿಗ ಯೂಟ್ಯೂಬ್ ಚಾನೆಲ್ ನ ಮಹಾಬಲ ರಾಮ್ ಅವರು ಸ್ಪಷ್ಟನೆ ನೀಡಿದ್ದಾರೆ.
ಡಾ. ಬೋ ಗೆ ಏನು ಆಗಿಲ್ಲ ಅವರು ಖುಷಿಯಾಗಿ ಆರಾಮಾಗಿದ್ದಾರೆ. ಸುಳ್ಳುಗಳಿಗೆ ಕಿವಿಯಾಗಬೇಡಿ. ಮೊನ್ನೆಯಷ್ಟೇ ನಾನು, ಡಾ.ದ್ರೋ, ಹಾಗೂ ಫೈಯಿಂಗ್ ಪಾಸ್ ಪೋರ್ಟ್ ನ ಆಶಾ ಹಾಗೂ ಕಿರಣ್ ಶೃಂಗೇರಿ, ಆಗುಂಬೆ ಕಡೆ ಪ್ರವಾಸ ಹೋಗಿದ್ವಿ. ಸಖತ್ ಎಂಜಾಯ್ ಮಾಡಿದ್ವಿ ಎಂದು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಅಲ್ಲದೇ ಗಗನ್ ಆದಷ್ಟು ಬೇಗ ನಿಮ್ಮ ಮುಂದೆ ಬರ್ತಾರೆ ಎಂದಿದ್ದಾರೆ.