ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಮಂಗಳೂರು

ಹೊಸ ವರ್ಷ ಆಚರಣೆ ದಕ್ಷಿಣ ಕನ್ನಡ ಜಿಲ್ಲೆಗೆ ಹೊಸ ಮಾರ್ಗ ಸೂಚಿ ಪ್ರಕಟ, ಏನಿದೆ ಇಲ್ಲಿ ನೋಡಿ

Published

on

ಮಂಗಳೂರು: ಹೊಸ ವರ್ಷದ ಮುನ್ನಾ ದಿನದ ಆಚರಣೆಗಳು ಡಿ.28 ರಂದು ಸಂಜೆ 5 ಗಂಟೆಯೊಳಗೆ ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ ಅಗತ್ಯ ಅನುಮತಿಯನ್ನು ಪಡೆಯಬೇಕು ಎಂದು ಪೊಲೀಸ್ ಕಮೀಷನರ್ ಅಗರ್‌ವಾಲ್ ಹೇಳಿದ್ದಾರೆ ಎಂದು ವರದಿಯಾಗಿದೆ. ಹಾಗೆನೇ ಡಿ.31 ರ ಮಧ್ಯರಾತ್ರಿಯೊಳಗೆ ಎಲ್ಲಾ ಕಾರ್ಯಕ್ರಮಗಳು ಮುಕ್ತಾಯ ಮಾಡಲು ಸೂಚಿಸಿದ್ದಾರೆ.
ಹೋಟೆಲ್, ರೆಸ್ಟೋರೆಂಟ್, ಕ್ಲಬ್, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕ ಹೊಸ ವರ್ಷಾಚರಣೆ ಮಾಡುವ ಸಂದರ್ಭ ಕೆಲವೊಂದು ನಿಯಮಗಳನ್ನು ಅನುಸರಿಸಬೇಕೆಂದು ಪೊಲೀಸ್ ಕಮೀಷನರ್ ಸೂಚನೆಗಳನ್ನು ಹೊರಡಿಸಿದ್ದಾರೆ.



ಕಡಲತೀರದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಆಚರಿಸುವವರಿಗೆ ಯೋಗ್ಯ ವಾತಾವರಣವನ್ನು ಕಾಪಾಡಿಕೊಳ್ಳುವುದು. ಅಶ್ಲೀಲ ನೃತ್ಯ ನಿಷೇಧ, ಯಾವುದೇ ಸಾರ್ವಜನಿಕರಿಗೆ ಅನಾನುಕೂಲತೆ ಉಂಟಾಗದಂತೆ ಖಾತ್ರಿ ಪಡಿಸುವ ಕುರಿತು ಪ್ರಾಮುಖ್ಯತೆಯನ್ನು ಹೇಳಿದ್ದಾರೆ. ಶಬ್ದಮಾಲಿನ್ಯ ನಿಯಮಾವಳಿಗಳನ್ನು ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಎಲ್ಲರೂ ಪಾಲಿಸಬೇಕು, ಡಿಜೆ ಸಂಗೀತಕ್ಕೆ ಅನುಮತಿ ಇಲ್ಲ ಎಂದು ಹೇಳಿದ್ದಾರೆ.ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಮೇಲೆ ನಿಗ ಇಡಲ ಟ್ರಾಫಿಕ್ ಪೊಲೀಸರು ಇರಲಿದ್ದಾರೆ. ವೀಲಿಂಗ್, ಡ್ರಾಗ್ ರೇಸಿಂಗ್, ಕಿರುಚಾಟ ಅಥವಾ ಅತಿವೇಗದ ಚಾಲನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version