ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಮಂಗಳೂರು

ಅಡಿಕೆ ಧಾರಣೆ ಏಕೆ ಕುಸಿತವಾಗುತ್ತಿದೆ..? | ಬೆಳೆಗಾರರು ಏನು ಮಾಡಬಹುದು ಈಗ ?

Published

on

ಇದುವರೆಗೂ ಅಡಿಕೆ ಧಾರಣೆ 500 ಆಗುತ್ತದೆ, 550 ಆದರೂ ಅಚ್ಚರಿ ಇಲ್ಲ..! ಹೀಗೆನ್ನುತ್ತಾ ಇರುವಾಗ, ಅಡಿಕೆ ಮಾರುಕಟ್ಟೆ ಸ್ಥಿರತೆ ಇಲ್ಲ, ಧಾರಣೆ ಇಳಿಕೆಯಾಗಬಹುದು, ಮಾರುಕಟ್ಟೆ ಎಚ್ಚರ ಇರಲಿ, ವಿಪರೀತ ಹುಚ್ಚು ಮಾರುಕಟ್ಟೆ ಒಳ್ಳೆಯದಲ್ಲ… ಹೀಗೆಲ್ಲಾ ಹೇಳುತ್ತಿದ್ದಾಗ, ಇದೆಲ್ಲಾ ಧಾರಣೆ ಇಳಿಕೆಯ ಆಟ ಎನ್ನುತ್ತಿದ್ದರು ಹಲವಾರು ಮಂದಿ. ಈಗ ಅಡಿಕೆಯ ಅಸಲಿ ಲೆಕ್ಕ ಸಿಕ್ಕಿದೆ. ಅಡಿಕೆ ಮಾರುಕಟ್ಟೆಯಲ್ಲಿ ಇಳಿಕೆ ಕಂಡಿದೆ.

ಅಡಿಕೆ ಧಾರಣೆ ಇಳಿಕೆಗೆ ಕಾರಣ, ಸದ್ದಿಲ್ಲದೆ ವಿದೇಶ ಅಡಿಕೆ ಒಳನುಸುಳುತ್ತಿದೆ. ಭಾರೀ ಎಚ್ಚರಿಕೆಯಲ್ಲಿದ್ದ ಗಡಿ ಭಾಗಗಳೆಲ್ಲವೂ ಮೌನವಾಗಿದೆ.ಈಗ ಅಡಿಕೆ ಮಾರುಕಟ್ಟೆ ಉಳಿಸಿಕೊಳ್ಳಲು ಇನ್ನೂ ಕುಸಿತವಾಗದಂತೆ ಎಚ್ಚರವಹಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಕ್ಯಾಂಪ್ಕೋ ಸಹಿತ ವಿವಿಧ ಸಂಸ್ಥೆಗಳು ಈಗಾಗಲೇ ಇಲಾಖೆಗಳಿಗೆ, ಸರ್ಕಾರವನ್ನು ಎಚ್ಚರಿಸಿದೆ. ಕ್ಯಾಂಪ್ಕೋ ಈ ಬಗ್ಗೆ ಸರ್ಕಾರದ ಗಮನ ಸೆಳೆದಿದೆ. ಅಡಿಕೆ ಬೆಳೆಗಾರರಿಗೆ ಆಗುವ ಸಂಕಷ್ಟದ ಬಗ್ಗೆ ವಿವರವಾಗಿ ಪ್ರಧಾನಿಗಳಿಗೂ ತಿಳಿಸಿದೆ. ಈಗ ಅಡಿಕೆ ಬೆಳೆಯುವ ಪ್ರದೇಶದ ಸಂಸದರೂ , ಶಾಸಕರುಗಳೂ ಧ್ವನಿಗೂಡಿಸಿ ಸರ್ಕಾರದ ಗಮನ ಸೆಳೆಯಬೇಕಿದೆ. ಅಡಿಕೆ ಅಕ್ರಮವಾಗಿ ಆಮದು ತಡೆಗೆ ಕ್ರಮಕ್ಕೆ ಒತ್ತಾಯಿಸಬೇಕಿದೆ.

ಅಡಿಕೆ ಕಳೆದ ವಾರ ಹಳೆ ಚಾಲಿ ಅಡಿಕೆಗೆ 430-435 ರೂಪಾಯಿ ಇದ್ದರೆ ಹೊಸ ಚಾಲಿ ಅಡಿಕೆಗೆ 350-370 ರೂಪಾಯಿವರೆಗೂ ಇತ್ತು. ಇದೀಗ ಹೊಸ ಚಾಲಿ ಅಡಿಕೆ ದರ 350-370 ಆಸುಪಾಸಿನಲ್ಲೇ ಇದ್ದರೆ ಹಳೆ ಚಾಲಿ ಅಡಿಕೆ 405 ರಿಂದ 415 ರೂಪಾಯಿವರೆಗೆ ಇಳಿಕೆಯಾಗಿದೆ. ಖಾಸಗಿ ಮಾರುಕಟ್ಟೆಯಲ್ಲಿ 405-407 ರೂಪಾಯಿಗೆ ಖರೀದಿ ನಡೆದಿದೆ. ಈಗ ಇನ್ನಷ್ಟು ಧಾರಣೆ ಕುಸಿತವಾಗುತ್ತದೆ ಎನ್ನುವ ಭಯದ ವಾತಾವರಣ ಮಾರುಕಟ್ಟೆಯಲ್ಲಿದೆ. ಆದರೆ ಅಂತಹ ಬೇಡಿಕೆ ಕುಸಿತವಾಗಿಲ್ಲ. ಆಮದು ಅಡಿಕೆ ಒಳಬರುತ್ತಿರುವ ಸುದ್ದಿ ಹಾಗೂ ಯಾವುದೇ ತಡೆ ಇಲ್ಲದೇ ಇರುವುದು ಭಯದ ವಾತಾವರಣಕ್ಕೆ ಕಾರಣವಾಗಿದೆ. ಇದಕ್ಕಾಗಿ ಈಗ ತಕ್ಷಣಕ್ಕೆ ಅಡಿಕೆ ಅಕ್ರಮವಾಗಿ ಆಮದಾಗುವುದಕ್ಕೆ ತಡೆ ಆಗಬೇಕಿದೆ. ಇದೇ ವೇಳೆ ವಿವಿದಡೆ ಅಡಿಕೆ ದರ ಕ್ವಿಂಟಾಲ್‌ಗೆ ಹೀಗಿದೆ, ಬೆಟ್ಟೆ?



ಅಡಿಕೆ ಬೆಳೆಗಾರರು ಕೂಡಾ ಈಗ ಧಾರಣೆ ಕುಸಿತದ ಭೀತಿಯ ಸಂದೇಶದ ಬೆನ್ನಲ್ಲೇ ಸಿಕ್ಕ ಸಿಕ್ಕಲ್ಲಿ ಅಡಿಕೆಯನ್ನು ಮಾರುಕಟ್ಟೆಗೆ ತಳ್ಳಿದರೆ ನಿಶ್ಚಿತವಾಗಿಯೂ ಧಾರಣೆ ಇನ್ನಷ್ಟು ಕುಸಿತವಾಗಬಹುದು. ಸದ್ಯ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ, ಅಡಿಕೆ ಧಾರಣೆಯೂ ಏರಿಕೆ ಸಾಧ್ಯತೆ ಇದೆ. ಚಾಲಿ ಅಡಿಕೆಗೆ 425-430 ರೂಪಾಯಿ ಉಳಿಸಿಕೊಳ್ಳಬಹುದಾಗಿದೆ. ಹೊಸ ಚಾಲಿ ಅಡಿಕೆಗೆ 400+ ಏರಿಕೆ ಆಗಬಹುದಾಗಿದೆ.ಅಡಿಕೆ ಕಳ್ಳಸಾಗಾಣಿಕೆ ನಿರಾತಂಕವಾಗಿ ಸಾಗಲು ಅಡಿಕೆ ಕಳ್ಳಸಾಗಾಣಿಕೆದಾರರು ಈಚೆಗೆ ತ್ರಿಪುರಾದ ಅಡಿಕೆ ಬೆಳೆಗಾರರನ್ನೂ ಬಳಸಿಕೊಂಡಿದ್ದರು. ತ್ರಿಪುರಾದ ಉತ್ತರ ಜಿಲ್ಲೆಯ ಜಂಪುಯಿ ಹಿಲ್ಸ್‌ನ ಅಡಿಕೆ ಬೆಳೆಗಾರರು ತಮ್ಮ ಅಡಿಕೆ ಬೆಳೆ ಸಾಗಾಣಿಕೆಗೆ ಸೂಕ್ತವಾದ ಅವಕಾಶ ನೀಡಬೇಕು ಎಂದು ಇಲಾಖೆಗಳಿಗೆ ಪತ್ರ ಬರೆದಿದ್ದರು. ಕಳೆದ ಕೆಲವು ಸಮಯಗಳ ಹಿಂದೆಯೂ ಈ ಮಾದರಿಯ ಪ್ರಯತ್ನ ಕಳ್ಳಸಾಗಾಣಿಕೆ ತಂಡದ ಮಾಡಿತ್ತು, ಅದು ವಿಫಲವಾಗಿತ್ತು. ಮೂರು ಲಾರಿಗಳೂ ಈ ಘಟನೆಯನ್ನು ಸುಡಲಾಗಿತ್ತು.ಈಗ ತ್ರಿಪುರಾದಲ್ಲಿ ಸರಿಯಾದ ಅಡಿಕೆ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಲು ಒತ್ತಾಯಿಸಲಾಗಿದೆ. ದೊಡ್ಡ ಪ್ರಮಾಣದ ಅಕ್ರಮ ಬರ್ಮಾ ಅಡಿಕೆ ಆಮದು ಮತ್ತು ಕೆಲವು ಕಿಡಿಗೇಡಿಗಳು ಅಸ್ಸಾಂನಲ್ಲಿ ಸುಲಿಗೆ ಮಾಡುವುದನ್ನು ತಪ್ಪಿಸುವ ಕಾರಣ ಮುಂದಿಡಲಾಗಿದೆ. ಇದೆಲ್ಲಾ ಸೂಕ್ತ ರೀತಿಯಲ್ಲಿ ಜಾರಿಯಾದರೆ ಅಡಿಕೆ ಅಕ್ರಮ ಆಮದು ತಡೆಗೆ ಸಾಧ್ಯವಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version