ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಮಂಗಳೂರು

ಮುರುವ ಸರಕಾರಿ ಪ್ರೌಢ ಶಾಲೆ ರಸ್ತೆಗೆ ಶಿಲಾನ್ಯಾಸ ಹಲವು ವರ್ಷದ ಬೇಡಿಕೆ ಈಡೇರಿದೆ; ಶ್ರೀಧರ್ ಬಾಳೆಕಲ್ಲು.

Published

on

ಪುತ್ತೂರು:ಮಾಣಿಲ ಗ್ರಾಮದ ಮುರುವ ಸರಕಾರಿ ಪ್ರೌಢ ಶಾಲೆಗೆ ತೆರಳುವ ರಸ್ತೆಗೆ ಕಾಂಕ್ರಿಟೀಕರಣಕ್ಕೆ ಶಾಸಕರಾದ ಅಶೋಕ್ ರೈ ಗುದ್ದಲಿಪೂಜೆ ನಡೆಸಿದರು. ಈ ವೇಳೆ ಮಾತನಾಡಿದ ಮಾಣಿಲ ಗ್ರಾಪಂ ಅಧ್ಯಕ್ಷರಾದ ಶ್ರೀಧರ್ ಬಾಳೆಕಲ್ಲು ಮಾತನಾಡಿ ಹಲವು ವರ್ಷಗಳ ಬೇಡಿಕೆ ಈ ಬಾರಿ ಈಡೇರಿದೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಅನುಕೂಲಕ್ಕೆ ಈ ರಸ್ತೆ ಬಳಕೆಯಾಗಲಿದೆ ಎಂದು ಹೇಳಿದರು. ಶಾಸಕ ಅಶೋಕ್ ರೈ ಮಾತನಾಡಿ .ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದರು.


ಈ ವೇಳೆ ಶಾಲೆಯ ಸ್ಥಳ ದಾನಿ ಮುರುವ ಮಹಾಬಲೇಶ್ವರ ಭಟ್ ,ಶಾಲಾ ಎಸ್. ಡಿ .ಎಂ.ಸಿ .ಅಧ್ಯಕ್ಷ ಶಿವಪ್ರಸಾದ್ ಸರಂಪಳ್ಳ.ಜಗನ್ನಾಥ ಶೆಟ್ಟಿ,ಗ್ರಾಪಂ ಸದಸ್ಯ ವಿಷ್ಣು ಕೊಮ್ಮಂಜೆ , ಮಾಣಿಲ ಮಾಜಿ ಗ್ರಾಪಂ ಅಧ್ಯಕ್ಷೆ ವನಿತಾ, ಗ್ರಾಪಂ ಸದಸ್ಯೆಮಾಲತಿ ಗ್,ಶಾಲಾ ಮುಖ್ಯ ಶಿಕ್ಷಕಿ‌ಲತಾ, ಜಯರಾಂ ಬಳ್ಳಾಲ್, ಶಿಕ್ಷಕರು ಕವಿತಾ, ಉಮನಾಥ. ರೈ, ಮಮತಾ ,ಸುದೇಶ್, ಸೀತಾ ಲಕ್ಷ್ಮಿ, ಮೊಯಿದ್ದೀನ್ ಕುಟ್ಟಿ,ಮೊದಲಾದವರು ಉಪಸ್ಥಿತರಿದ್ದರು.



Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version