ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಂತರರಾಷ್ಟ್ರೀಯ

ಪಾಸ್ ಪೋರ್ಟ್ ಇದ್ದರೆ ಸಾಕು 62 ದೇಶ ಸುತ್ತಾಡಬಹುದು ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್ ..!?

Published

on

ನೀವೇನಾದರೂ ವಿದೇಶಕ್ಕೆ ಹಾರುವ ಯೋಜನೆ ಹಾಕಿದ್ದರೆ, ನಿಮಗೆ ಗುಡ್ ನ್ಯೂಸ್ (Good News)ಇಲ್ಲಿದೆ ನೋಡಿ!!ಭಾರತೀಯ ಪಾಸ್‌ ಪೋರ್ಟ್ (Passport)ಹೊಂದಿದ್ದರೆ ಬೇರೆ ದೇಶಗಳಿಗೆ ಹೋಗಿ ಬರಲು ಹೆಚ್ಚು ಕಷ್ಟವಾಗದು. ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಭಾರತ (India)ತನ್ನ ಸ್ಥಾನಮಾನವನ್ನು ಹೆಚ್ಚಿಸಿಕೊಂಡಿದೆ. ಹೀಗಾಗಿ, ಹಲವು ದೇಶಗಳು ಇದೀಗ ವೀಸಾವಿಲ್ಲದೆ(Visa)ತಮ್ಮ ದೇಶಕ್ಕೆ ಭಾರತೀಯರ ಪ್ರವೇಶಕ್ಕೆ ಅನುಮತಿ ನೀಡುತ್ತಿದೆ. ಸದ್ಯ ಭಾರತೀಯರು ಈಗ 62 ದೇಶಗಳಿಗೆ ವೀಸಾ(Passport Index) ಅರ್ಜಿ ಪ್ರಕ್ರಿಯೆಯೇ ಇಲ್ಲದೆ ವಿಮಾನದಲ್ಲಿ ಹಾರಬಹುದು.

ಮಂಗಳವಾರ ಬಿಡುಗಡೆಯಾದ ಇತ್ತೀಚಿನ ಹೆನ್ಲಿ ಪಾಸ್‌ ಪೋರ್ಟ್ ಸೂಚ್ಯಂಕದ ಅನುಸಾರ, ಭಾರತದ ಪಾಸ್‌ ಪೋರ್ಟ್ ಜಾಗತಿಕವಾಗಿ 80 ನೇ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ. ಇದು ಭಾರತೀಯರು 62 ದೇಶಗಳಿಗೆ ವೀಸಾ ಮುಕ್ತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸುತ್ತದೆ.


ಭಾರತೀಯರು ವೀಸಾ ಇಲ್ಲದೆ ಭೇಟಿ ನೀಡಬಹುದಾದ ದೇಶಗಳು ಹೀಗಿವೆ;
ಅಂಗೋಲಾ, ಬಾರ್ಬಡೋಸ್, ಭೂತಾನ್, ಬೊಲಿವಿಯಾ, ಬ್ರಿಟಿಷ್ ವರ್ಜಿನ್ ದ್ವೀಪಗಳು, ಬುರುಂಡಿ, ಕಾಂಬೋಡಿಯಾ, ಕೇಪ್ ವರ್ಡೆ ದ್ವೀಪಗಳು, ಕೊಮೊರೊ ದ್ವೀಪಗಳು, ಕುಕ್ ದ್ವೀಪಗಳು, ಜಿಬೌಟಿ, ಡೊಮಿನಿಕಾ, ಎಲ್ ಸಾಲ್ವಡಾರ್ ಇಥಿಯೋಪಿಯಾ, ಫಿಜಿ, ಗ್ಯಾಬೊನ್, ಗ್ರೆನಡಾ, ಗಿನಿ-ಬಿಸ್ಸೌ, ಹೈಟಿ, ಇಂಡೋನೇಷ್ಯಾ ಇರಾನ್, ಜಮೈಕಾ, ಜೋರ್ಡಾನ್, ಕಝಾಕಿಸ್ತಾನ್, ಕೀನ್ಯಾ, ಕಿರಿಬಾಟಿ, ಲಾವೋಸ್, ಮಕಾವೊ, ಮಡಗಾಸ್ಕರ್, ಮಲೇಷ್ಯಾ, ಮಾಲ್ಡೀವ್ಸ್, ಮಾರ್ಷಲ್ ದ್ವೀಪಗಳು, ಮಾರಿಟಾನಿಯ, ಮಾರಿಷಸ್, ಮೈಕ್ರೋನೇಶಿಯಾ, ಮಾಂಟ್ಸೆರಾಟ್, ಮೊಜಾಂಬಿಕ್, ಮ್ಯಾನ್ಮಾರ್, ನೇಪಾಳ, ನಿಯು, ಓಮನ್, ಪಲಾವ್ ದ್ವೀಪಗಳು, ಕತಾರ್, ರುವಾಂಡಾ, ಸಮೋವಾ ಸೆನೆಗಲ್, ಸೀಶೆಲ್ಸ್, ಸಿಯೆರಾ ಲಿಯೋನ್, ಸೊಮಾಲಿಯಾ, ಶ್ರೀಲಂಕಾ, ಸೇಂಟ್ ಕಿಟ್ಸ್ ಮತ್ತು ನೆವಿಸ್ ಸೇಂಟ್ ಲೂಸಿಯಾ, ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್, ಟಾಂಜಾನಿಯಾ, ಥೈಲ್ಯಾಂಡ್, ಟಿಮೋರ್-ಲೆಸ್ಟೆ, ಟೊಗೊ, ಟ್ರಿನಿಡಾಡ್ ಮತ್ತು ಟೊಬಾಗೊ, ಟುನೀಶಿಯಾ, ಟುವಾಲು, ವನವಾಟು, ಜಿಂಬಾಬ್ವೆ.

ಈ ಪಟ್ಟಿಯು ಜನವರಿ 11 ರಂದು ವೀಸಾ ನಿಯಮಗಳನ್ನು ಆಧರಿಸಿದೆ. ಈ 62 ದೇಶಗಳಿಗೆ ಭಾರತೀಯರು ಯಾವುದೇ ವೀಸಾವಿಲ್ಲದೆ ಪ್ರಯಾಣ ಮಾಡಬಹುದು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version