ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಂತರರಾಷ್ಟ್ರೀಯ

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಮೊದಲು 500ರ ನೋಟಿನಲ್ಲಿ ಶ್ರಿರಾಮ ಹಾಗೂ ಅಯೋಧ್ಯೆಯ ರಾಮ ಮಂದಿರ ಫೋಟೋ ಇರುವ 500 ರೂಪಾಯಿ ನೋಟ್ ಮಾರುಕಟ್ಟೆಗೆ ಲಗ್ಗೆ.

Published

on

ಅಯೋಧ್ಯೆಯಲ್ಲಿ ರಾಮ ಮಂದಿರದೊಳಗೆ ಶ್ರೀರಾಮನ ಪ್ರಾಣ ಪ್ರತಿಷ್ಠೆಗೆ ದಿನಗಣನೆ ಶುರುವಾಗಿದ್ದು, ಇಡೀ ದೇಶ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಆದರೆ ಈ ಬೆನ್ನಲ್ಲೇ ಮಂದಿರ ಉದ್ಘಾಟನೆ ಮೊದಲು 500ರ ನೋಟಿನಲ್ಲಿ ಶ್ರಿರಾಮ ಹಾಗೂ ಅಯೋಧ್ಯೆಯ ರಾಮ ಮಂದಿರ ಫೋಟೋ ಇರುವ 500 ರೂಪಾಯಿ ನೋಟ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಹೌದು, ಅಯೋಧ್ಯಾ ರಾಮ ಮಂದಿರ ಉದ್ಘಾಟನೆಗೆ ದಿನ ಸಮೀಪಿಸುತ್ತಿದ್ದಂತೆ ಗಾಂಧಿ ಬದಲು ಶ್ರೀರಾಮನ ಫೋಟೋ ಇರುವ 500 ರೂ ಮುಖ ಬೆಲೆಯ ನೋಟುಗಳು ಎಲ್ಲೆಡೆ ವೈರಲ್​​ ಆಗಿವೆ. ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾ ಮಹೋತ್ಸವದ ಸಂದರ್ಭದಲ್ಲಿ ರೂ. 500 ನೋಟುಗಳಲ್ಲಿ ಗಾಂಧೀಜಿಯ ಬದಲು ಶ್ರೀರಾಮನ ಚಿತ್ರ ಮುದ್ರಿಸಲಾಗುವುದು ಎಂಬ ಪ್ರಚಾರ ಜೋರಾಗಿದೆ.




ಒಂದು ಬದಿಯಲ್ಲಿ ಶ್ರೀರಾಮನ ಭಾವಚಿತ್ರವನ್ನು ಅಚ್ಚು ಹಾಕಿದರೆ, ನೋಟಿನ ಇನ್ನೊಂದು ಬದಿಯಲ್ಲಿ ಕೆಂಪು ಕೋಟೆಯ ಬದಲಿಗೆ ಅಯೋಧ್ಯೆ ದೇವಾಲಯದ ಮಾದರಿಯನ್ನು ಮುದ್ರಿಸಲಾಗಿದೆ. ಗಾಂಧೀಜಿ ಅವರ ಕನ್ನಡಕ ಬದಲು ಶ್ರೀರಾಮನ ಬಾಣ ಮತ್ತು ಬಿಲ್ಲು ಇರುವಂತೆ ವಿನ್ಯಾಸಗೊಳಿಸಲಾಗಿದೆ. ಸದ್ಯ ಈ ನೋಟು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.

ಈ ನೋಟುಗಳ ಬದಲಾವಣೆಗೆ ಸಂಬಂಧಿಸಿದಂತೆ ಆರ್‌ಬಿಐ ಯಾವುದೇ ಮಾಹಿತಿ ಪ್ರಕಟಿಸಿಲ್ಲರುವುದರಿಂದ ಇದು ಫೇಕ್​​​ ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ. ಇದು ಎಡಿಟ್​​ ಮಾಡಲಾಗುರುವ ಫೋಟೋ ಎಂದು ಸೋಶಿಯಲ್​ ಮೀಡಿಯಾ ಬಳಕೆದಾರರು ಬರೆದುಕೊಂಡಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version