Published
11 months agoon
By
Akkare Newsನವ ವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ನಾಲೂರು ಕೊಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸನಕೊಡಿಗೆ ಗ್ರಾಮದಲ್ಲಿ ನಡೆದಿದೆ. ಎಂಟು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಶಮಿತಾ ಬಿ.ಯು (24) ಮೃತ ದುರ್ದೈವಿ.
ಮೃತರ ಪತಿ ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.
ಕಳೆದ ಮಾರ್ಚ್ ನಲ್ಲಿ ಶಮಿತಾ ಹಾಗೂ ವಿದ್ಯಾರ್ಧ್ ಪ್ರೀತಿಸಿ ಮದುವೆಯಾಗಿದ್ದರು. ಮಂಗಳವಾರ ರಾತ್ರಿ ಅತ್ತೆ ಮಾವನಿಗೆ ತಿಳಿಸಿ ಶಮಿತಾ ರಾತ್ರಿ ಊಟ ಮಾಡಿ ಮಲಗಲು ಮನೆ ಉಪ್ಪರಿಗೆ ಮೇಲೆ ತೆರಳಿದ್ದರು.
ಆದರೆ ಬುಧವಾರ ಬೆಳಗ್ಗೆ ಬಾಗಿಲು ತೆರೆಯದಿದ್ದ ಹಿನ್ನಲೆ ಕುಟುಂಬದವರು, ಕೆಲಸದವರು ಕಿಟಕಿಯಿಂದ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.