Published
2 months agoon
By
Akkare News
ಖಾಸಗಿ ಬಸ್ (Private Bus) ಸುಮಾರು 500 ಅಡಿ ಆಳದ ಕಂದಕಕ್ಕೆ ಬಿದ್ದು ಭೀಕರ ಅಪಘಾತ (Deadly Accident) ಸಂಭವಿಸಿದೆ. ಹಿಮಾಚಲ ಪ್ರದೇಶದ (Himachal Pradesh) ಸಿರ್ಮೌರ್ ಜಿಲ್ಲೆಯಲ್ಲಿ ನಿನ್ನೆ ಶುಕ್ರವಾರ ಈ ಭೀಕರ ಬಸ್ ಅಪಘಾತವಾಗಿದೆ. ಈ ಅಪಘಾತದಲ್ಲಿ ಸುಮಾರು 14 ಜನರು ಸಾವನ್ನಪ್ಪಿದ್ದಾರೆ. 30ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶಿಮ್ಲಾದಿಂದ ರಾಜ್‌ಗಢ ಮೂಲಕ ಕುಪ್ವಿಗೆ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ ಇದಾಗಿದೆ.
ನಹಾನ್‌ನಿಂದ ಸುಮಾರು 95 ಕಿ.ಮೀ ದೂರದಲ್ಲಿರುವ ಹರಿಪುರ್ಧರ್ ಗ್ರಾಮದ ಬಳಿ ಬಸ್ ನಿಯಂತ್ರಣ ತಪ್ಪಿ 500 ಅಡಿ ಆಳದ ಕಂದಕಕ್ಕೆ ಉರುಳಿಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಅಪಘಾತದಿಂದ ಸುಮಾರು 14 ಜನರು ಬಲಿಯಾಗಿದ್ದಾರೆ.