Published
1 year agoon
By
Akkare Newsಪುತ್ತೂರು: ಸುದ್ದಿ ಬಿಡುಗಡೆ ಪತ್ರಿಕೆಯ ಸಿಬ್ಬಂದಿ ಕುದ್ದುಪದವು ನಿವಾಸಿ ನವೀನ್ ಕಿಶೋರ್ ಎಂಬವರು ಜ.30 ರ ನಸುಕಿನ ಜಾವ ಹೃದಯಾಘಾತದಿಂದ ನಿಧನರಾದರು.
ಜ.29ರ ಸಂಜೆ ಮನೆಗೆ ಹೋದವರು ರಾತ್ರಿ ಹೃದಯಾಘಾತಕ್ಕೀಡಾಗಿದ್ದಾರೆ. ತಡ ರಾತ್ರಿ 2 ಗಂಟೆ ಸುಮಾರಿಗೆ ಅವರ ಸಹೋದರ ಎಚ್ಚರಗೊಂಡಾಗ ನವೀನ್ ಕಿಶೋರ್ ಅವರು ಕುಸಿದು ಬಿದ್ದಿರುವುದು ಬೆಳಕಿಗೆ ಬಂದಿದೆ. ತಕ್ಷಣ ಮನೆ ಮಂದಿ ಮತ್ತು ಸ್ಥಳೀಯರು ಸೇರಿ ವಿಟ್ಲ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ನವೀನ್ ಕಿಶೋರ್ ಆಗಲೇ ಮೃತಪಟ್ಟಿದ್ದರು.ಮೃತರು ತಾಯಿ ಪದ್ಮನಿ, ಸಹೋದರ ಮತ್ತು ಸಹೋದರಿಯರನ್ನು ಅಗಲಿದ್ದಾರೆ.