Published
11 months agoon
By
Akkare Newsಮಂಗಳೂರು(ಬೆಳ್ತಂಗಡಿ): ಬೆಳ್ತಂಗಡಿ ತಾಲೂಕಿನ ಉಜಿರೆಯ ಎರ್ನೋಡಿ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಲಾರಿ ಚಾಲಕನ ಅಜಾಗರೂಕತೆ ನಿರ್ಲಕ್ಷದ ಚಾಲನೆಯಿಂದಾಗಿ ಅಂಗಡಿ ಮುಂಗಟ್ಟು ಮುಂದೆ ನಿಂತಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಐದಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಅಪಘಾತದ ಭೀಕರತೆಗೆ ಸಾಕ್ಷಿಯಾಗಿದೆ. ಪ್ರಕರಣದ ತೀವ್ರತೆಗೆ ಬೆಚ್ಚಿ ಬಿದ್ದ ಸ್ಥಳೀಯರು ಲಾರಿ ಚಾಲಕನ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತಪಟ್ಟ ಓರ್ವ ಪುರುಷ ಮತ್ತೋರ್ವ ಮಹಿಳೆ ಬಸ್ಸಿಗಾಗಿ ರಸ್ತೆ ಬದಿ ನಿಂತಿದ್ದ ವೇಳೆ ಅತೀ ವೇಗವಾಗಿ ಬಂದ ಲಾರಿ ಇಬ್ಬರಿಗೆ ಡಿಕ್ಕಿಹೊಡೆದು ಪಕ್ಕದ ಕಟ್ಟಡಕ್ಕೂ ಹಾನಿಯುಂಟುಮಾಡಿದೆ. ಮೃತಪಟ್ಟ ಪುರುಷ ವ್ಯಕ್ತಿಯನ್ನು ಉಜಿರೆ ನಿವಾಸಿ ಕಿಟ್ಟು ಎನ್ನಲಾಗಿದೆ. ಉಳಿದಂತೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಾಗಿದೆ.