Published
10 months agoon
By
Akkare Newsವಿಟ್ಲ : ಅಳಿಕೆಗೆ ತೆರಳುವ ರಸ್ತೆಯ ಪಡಿಬಾಗಿಲು ದ್ವಾರದ ಬಳಿ ಎರಡು ರಿಕ್ಷಾಗಳು ಮುಖಾಮುಖಿ ಡಿಕ್ಕಿಯಾಗಿ ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.ಮಡಿಯಾಲ ನಿವಾಸಿ ಅಮ್ಮು ಮೂಲ್ಯ (69) ಮೃತಪಟ್ಟವರು.
ರಿಕ್ಷಾ ಚಾಲಕರಾದ ಎರುಂಬು ನಿವಾಸಿ ಹಮೀದ್ (65), ಪಡಿಬಾಗಿಲು ನಿವಾಸಿ ರವಿಕುಮಾರ್ (45), ಪ್ರಯಾಣಿಕರಾದ ಪಡಿಬಾಗಿಲು ಅಸುಪಾಸಿನ ನಿವಾಸಿಗಳಾದ ವೀಣಾ (45), ರಮಾ (56), ಝೋರಾ(42) , ಸಾಯಿ ಕೃತಿ (26), ಝಮೀರ್ (13) ಗಾಯಗೊಂಡಿದ್ದಾರೆ.ಎರುಂಬು ನಿವಾಸಿ ಹಮೀದ್, ಪಡಿಬಾಗಿಲು ನಿವಾಸಿ ರವಿ ಅವರ ರಿಕ್ಷಾಗಳ ನಡುವೆ ಡಿಕ್ಕಿ ಸಂಭವಿಸಿದೆ.