Published
10 months agoon
By
Akkare Newsಪುತ್ತೂರು: ಉಪ್ಪಿನಂಗಡಿ ಹೈವೇ ಬಳಿ ಇರುವ ಮನೆ ಊಟದ ಮಾದರಿಯ ಕ್ಯಾಂಟೀನ್ ನಲ್ಲಿಮಧ್ಯಾಹ್ನದ ಊಟವನ್ನು ಮಾಡುವ ಮೂಲಕ ಶಾಸಕರು ಸರಳತೆಯನ್ನು ಮೆರೆದಿದ್ದಾರೆ.
ಸಾಧಾರಣವಾಗಿ ಟಿಫಿನ್ ಊಟವನ್ನೇ ಮಾಡುವ ಶಾಸಕರು ಬುಧವಾರಮಧ್ಯಾಹ್ನ ಹಿರೆಬಂಡಾಡಿಯಲ್ಲಿ ಗುದ್ದಲಿಪೂಜೆ ನೆರವೇರಿಸಿ ಕ್ಯಾಂಟೀನ್ ಊಟವನ್ನೂ ಸವಿದರು. ಶಾಸಕರು ತಮ್ಮ ಚಿಕ್ಕದಾದ ಕ್ಯಾಂಟೀನ್ ಗೆ ಆಗಮಿಸಿದ್ದನ್ನುಕಂಡು ಕ್ಯಾಂಟೀನ್ ಮಾಲಿಕರು ಸಂತೋಷ ವ್ಯಕ್ತಪಡಿಸಿದ್ದು ಮಾತ್ರವಲ್ಲದೆ ಶಾಸಕರ ಸರಳತೆಯ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಸಕರ ಜೊತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.