Published
8 months agoon
By
Akkare Newsದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ಶುಕ್ರವಾರ ಸಂಜೆ ಉತ್ತಮ ಮಳೆಯಾಗಿದೆ. ಸುಳ್ಯದ ಕೆಲವು ಕಡೆಗಳಲ್ಲಿ ಭಾರೀ ಗಾಳಿ ಸಹಿತ ಗುಡುಗು-ಸಿಡಿಲು ಮಳೆಯಾಗಿದೆ. ಭಾರೀ ಗಾಳಿಯ ಕಾರಣದಿಂದ ಮರ ಉರುಳಿ ಗ್ರಾಮೀಣ ಭಾಗದಲ್ಲೂ ವಿದ್ಯುತ್ ಕಡಿತವಾಗಿದೆ.
ಸುಳ್ಯದ ಕನಕಮಜಲು ಬಳಿ ರಸ್ತೆಗೆ ಮರ ಉರುಳಿದೆ. ಮರ ಪ್ರಮುಖ ವಿದ್ಯುತ್ ಲೈನ್ ಮೇಲೆಯೂ ಮರ ಬಿದ್ದು ಸುಳ್ಯಕ್ಕೆ ವಿದ್ಯುತ್ ಕಡಿತವಾಗಿದೆ. ಮೆಸ್ಕಾಂ ಸಿಬಂದಿಗಳು ವಿದ್ಯುತ್ ವಿತರಣೆಗೆ ಪ್ರಯತ್ನ ನಡೆಸುತ್ತಿದ್ದಾರೆ.