ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇಂದಿನ ಕಾರ್ಯಕ್ರಮ

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಭವಾಗಿದೆ. ಇಂದು (ಏಪ್ರಿಲ್ 26) ರಾಜ್ಯದ 14 ಲೋಕಸಭಾ ಕ್ಷೇತ್ರದಲ್ಲಿ ಮೊದಲ ಹಂತದ ಮತದಾನ

Published

on

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಭವಾಗಿದೆ. ಇಂದು (ಏಪ್ರಿಲ್ 26) ರಾಜ್ಯದ 14 ಲೋಕಸಭಾ ಕ್ಷೇತ್ರದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಬಹು ನಿರೀಕ್ಷಿತ ಹಾಗೂ ಕುತೂಹಲ ಹೆಚ್ಚಿಸಿರುವ ಈ ಚುನಾವಣೆಯ ಫಲಿತಾಂಶದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿವೆ.
ಕಾಂಗ್ರೆಸ್‌ ಏಕಾಂಗಿಯಾಗಿ ಎಲ್ಲ ಕ್ಷೇತ್ರಗಳಲ್ಲಿ ಕಣಕ್ಕೆ ಇಳಿದಿದೆ. ಒಟ್ಟು 2.9 ಕೋಟಿ ಮತದಾರರು ಶುಕ್ರವಾರ ನಡೆಯಲಿರುವ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ. ಒಟ್ಟು 247 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಅಭ್ಯರ್ಥಿಗಳ ಭವಿಷ್ಯವನ್ನು ಮತದಾರನ ನಿರ್ಧರಿಸಲಿದ್ದಾನೆ.

ಮತಗಟ್ಟೆಗಳು ಎಷ್ಟು?
ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಚಾಮಾರಾಜನಗರ, ಮೈಸೂರು-ಕೊಡಗು, ಹಾಸನ, ದಕ್ಷಿಣ ಕರ್ನಾಟಕದ ಉಡುಪಿ – ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಲೋಕಸಭಾ ಕ್ಷೇತ್ರಗಳಲ್ಲಿ ಶುಕ್ರವಾರ ಮತದಾನ ನಡೆಯಲಿದೆ.

ಒಟ್ಟು 30602 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಕಳೆದ ಚುನಾವಣೆಯಲ್ಲಿ 68.8 ಶೇಕಡಾವಾರು ಮತದಾನ ನಡೆದಿದ್ದು, ಈ ಬಾರಿ ಈ ಅಂಕಿ ಅಂಶ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ಇದೇ ಮೊದಲ ಬಾರಿಗೆ ಮತಚಲಾಯಿಸುವ ಮತದಾರರ ಸಂಖ್ಯೆ 5.99 ಲಕ್ಷ ಆಗಿದೆ. ಬೆಂಗಳೂರು ಉತ್ತರದಲ್ಲಿ 2911 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಪ್ರಮುಖ ಅಭ್ಯರ್ಥಿಗಳು
ಕೋಲಾರದಲ್ಲಿ ಎನ್‌ಡಿಎ ಅಭ್ಯಾರ್ಥಿಯಾಗಿ ಎಂ ಮಲ್ಲೇಶ್ ಬಾಬು ಸ್ಪರ್ಧಿಸುತ್ತಿದ್ದು, ಇವರ ವಿರುದ್ಧ ಕಾಂಗ್ರೆಸ್‌ ಕೆವಿ ಗೌತಮ್‌ ಅವರನ್ನು ಕಣಕ್ಕೆ ಇಳಿಸಿದೆ. ಈ ಕ್ಷೇತ್ರದಲ್ಲಿ ಮಹಿಳೆಯರ ಮತಗಳ ನಿರ್ಣಾಯಕ ಪಾತ್ರವನ್ನು ವಹಿಸಲಿವೆ. ಇನ್ನು ಚಿಕ್ಕಬಳ್ಳಾಪುರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಡಾ.ಸುಧಾಕರ್‌ ಎನ್‌ಡಿಎ ಅಭ್ಯರ್ಥಿಯಾಗಿ ಕಾಣಿಸಿಕೊಂಡರೆ, ಕಾಂಗ್ರೆಸ್ ರಕ್ಷಾ ರಾಮಯ್ಯ ಅವರಿಗೆ ಟಿಕೆಟ್ ನೀಡಿದೆ.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಹಾಲಿ ಸಂಸದ ತೇಜಸ್ವಿ ಸೂರ್ಯ ಜಯದ ಕನಸು ಕಾಣುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಸೌಮ್ಯಾ ರೆಡ್ಡಿ ಅವರಿಗೆ ಟಿಕೆಟ್ ನೀಡಿದೆ. ಇಬ್ಬರು ಯುವಕರ ನಡುವಿನ ಹೋರಾಟದಲ್ಲಿ ಗೆಲ್ಲುವುದು ಯಾರು ಎಂಬ ಕುತೂಹಲ ಮೂಡಿಸಿದೆ. ಕೇಂದ್ರದಲ್ಲಿ ಪಿಸಿ ಮೋಹನ್‌ ಅವರ ಅಜೇಯ ಓಟಕ್ಕೆ ಬ್ರೇಕ್ ಹಾಲು ಕಾಂಗ್ರೆಸ್‌ ಮನ್ಸೂರ್‌ ಅಲಿ ಖಾನ್‌ ಅವರಿಗೆ ಅವಕಾಶ ನೀಡಿದೆ. ಉತ್ತರ ಭಾಗದಲ್ಲೂ ಎರಡೂ ಪಕ್ಷಗಳಿಮದ ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಬಿಜೆಪಿಯಿಂದ ಶೋಭಾ ಕರಂದ್ಲಾಜೆ, ಕಾಂಗ್ರೆಸ್‌ನಿಂದ ಪ್ರೊ ರಾಜೀವ್ ಗೌಡ ಕಣದಲ್ಲಿದ್ದಾರೆ.








ಏಪ್ರಿಲ್‌ 26 ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು ಕ್ಷೇತ್ರಗಳು NDA ಅಭ್ಯರ್ಥಿ ಭಾರತ NDA ಅಭ್ಯರ್ಥಿ
ಉಡುಪಿ ಚಿಕ್ಕಮಗಳೂರು: ಕೋಟ ಶ್ರೀನಿವಾಸ ಪೂಜಾರಿ,ಜಯಪ್ರಕಾಶ್ ಹೆಗ್ಡೆ
ಹಾಸನ:ಪ್ರಜ್ವಲ್ ರೇವಣ್ಣ,ಎಂ.ಶ್ರೇಯಸ್ ಪಟೇಲ್
ದಕ್ಷಿಣ ಕನ್ನಡ:ಕ್ಯಾಪ್ಟನ್ ಬ್ರಿಜೇಶ್ ಚೌಟ,ಪದ್ಮರಾಜ್.ಆರ್
ಚಿತ್ರದುರ್ಗ: ಗೋವಿಂದ ಕಾರಜೋಳ ಬಿ.ಎನ್. ಚಂದ್ರಪ್ಪ
ತುಮಕೂರು:ವಿ ಸೋಮಣ್ಣ,ಎಸ್ ಪಿ ಮುದ್ದಹನುಮೇಗೌಡ
ಮಂಡ್ಯ:ಎಚ್‌ಡಿ ಕುಮಾರಸ್ವಾಮಿ,ವೆಂಕಟರಾಮೇಗೌಡ (ಸ್ಟಾರ್ ಚಂದ್ರು)
ಮೈಸೂರು: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ,ಎಂ.ಲಕ್ಷ್ಮಣ್
ಚಾಮರಾಜನಗರ:ಎಸ್ ಬಾಲರಾಜ್, ಸುನಿಲ್ ಬೋಸ್
ಬೆಂಗಳೂರು ಗ್ರಾಮಾಂತರ:ಡಾ.ಸಿ.ಎನ್.ಮಂಜುನಾಥ್,ಡಿ.ಕೆ.ಸುರೇಶ್
ಬೆಂಗಳೂರು ಉತ್ತರ:ಕುಮಾರಿ ಶೋಭಾ ಕರಂದ್ಲಾಜೆ,ಪ್ರೊ.ಎಂ.ವಿ. ರಾಜೀವ್ ಗೌಡ
ಬೆಂಗಳೂರು ಸೆಂಟ್ರಲ್: ಪಿ.ಸಿ. ಮೋಹನ್,ಮನ್ಸೂರ್ ಅಲಿ ಖಾನ್
ಬೆಂಗಳೂರು ದಕ್ಷಿಣ:ತೇಜಸ್ವಿ ಸೂರ್ಯ,ಶ್ರೀಮತಿ ಸೌಮ್ಯ ರೆಡ್ಡಿ
ಚಿಕ್ಕಬಳ್ಳಾಪುರ:ಡಾ.ಕೆ ಸುಧಾಕರ,ರಕ್ಷಾ ರಾಮಯ್ಯ
ಕೋಲಾರ: ಮಲ್ಲೇಶ್ ಬಾಬು,ಮುನಿಸ್ವಾಮಿ ಕೆ ವಿ ಗೌತಮ್

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version