ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ತಪ್ಪು ಯಾರು ಮಾಡಿದರು ಅವರಿಗೆ ಶಿಕ್ಷೆ ಆಗಲೇಬೇಕು ನನ್ನ ಜೊತೆ ಇದ್ದಾರೆ ಎನ್ನುವ ಭಯ ಬೇಡ ಕಾನೂನು ಕ್ರಮ ಕೈಗೊಳ್ಳಲಿ : ಶಾಸಕ ಅಶೋಕ್ ಕುಮಾರ್ ರೈ

Published

on

ಪುತ್ತೂರು: ಶಾಸಕನಾಗಿ ಒಂದು ವರ್ಷದ ಪೂರೈಸಿದ
ಹಿನ್ನಲೆ ‘ಮತದಾರರೆಡೆಗೆ ಶಾಸಕರ ನಡೆ’ ಮಾಡಿದ್ದೆ ಆದರೆ
ಮಾಜಿ ಶಾಸಕರು ಈಗಲೇ ಚಲಾವಣೆಯಲ್ಲಿ ಇಲ್ಲದ
ನಾಣ್ಯದಂತಾಗಿದ್ದಾರೆ.ಚಲಾವಣೆಯಲ್ಲಿ ಇರಬೇಕೆಂದು
ಘರ್‌ವಾಸ್ಸಿ ಎಂದು ಹೇಳುತ್ತಾರೆ. ಎಲ್ಲದಕ್ಕೂ ರಾಜಕೀಯ
ಬಣ್ಣ ನೀಡುತ್ತಿರುವುದು ತಪ್ಪು.ನಾನು ಉದ್ಯಮ, ಟ್ಯಾಕ್ಸ್
ಕೊಡುವವರು, ಸಮಾಜದಲ್ಲಿ ಉತ್ತಮ ಕೆಲಸ
ಮಾಡುವವರ ಅಭಿಪ್ರಾಯ ಸಂಗ್ರಹಕ್ಕೆ ಹೋಗಿದ್ದೆ ವಿನಃ
ಯಾವುದೇ ರಾಜಕೀಯ ಉದ್ದೇಶವನ್ನ ಇಟ್ಟುಕೊಂಡು
ಹೋಗಿಲ್ಲ. ಅವರಲ್ಲಿಗೆ ಹೋಗಲು ಅವರ ಅನುಮತಿ ಬೇಕೆ
ಹೊರತು ಬೇರೆ ಯಾರ ಅನುಮತಿಯೂ ಬೇಕಾಗಿಲ್ಲ
ಇದೆಲ್ಲ ಸುಮ್ಮೆ ಯಾಕೆ ಬೇಕು ಪುತ್ತೂರು
ಅಭಿವೃದ್ಧಿಯಾಗಬೇಕು ಅದರ ಬಗ್ಗೆ ಚಿಂತನೆಯಾಗಬೇಕು
ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.
ಮತದಾರರೆಡೆಗೆ ಶಾಸಕರ ನಡೆ’ ನಂತರದಲ್ಲಿ ನಡೆದ ಪ್ರಸಂಗಗಳಿಗೆ ಸಂಬಂಧಿಸಿ ಅವರು ಸುದ್ದಿ ಮಾಧ್ಯಮ ಜೊತೆಗೆ ಮಾತನಾಡಿದರು. ಸಾಮಾಜಿಕ ಜಾಲತಾಣದಲ್ಲಿ ಯಾರೋ ಬರೆದಿದ್ದಾರೆ, ನನ್ನ ಬಗ್ಗೆ ಬೇಕಾದಷ್ಟು ಜನ ಬರೆದಿದ್ದಾರೆ.ಬಿಜೆಪಿ ಪಕ್ಷದವರು ನನ್ನ ಬಗ್ಗೆ ಬರೆದಿದ್ದಾರೆ ಆಗ ಇವರಿಗೆ ಗೊತ್ತಾಗಲಿಲ್ಲ. ನನ್ನ ಪಕ್ಕದವರು, ಜೊತೆಯಲ್ಲಿದ್ದವರು ಯಾರೇ ತಪ್ಪು ಮಾಡಿದ್ರೂ ಗಣನೆಗೆ ತೆಗೆದುಕೊಂಡು ಕ್ರಮ ಕೈಗೊಳ್ಳಿ. ಸಂಜೀವ ಮಠಂದೂರು ಬಗ್ಗೆ ಸೆಲ್ಸಿ ಕೇಸ್ ಹಾಕಿ ಇಡೀ ಮಾಧ್ಯಮದಲ್ಲಿ ಹಾಕಿದ್ರಲ್ಲ ಅವರ ಬಗ್ಗೆ ಹೋರಾಟ ಮಾಡಿ ಹರಿಕೃಷ್ಣ ಬಂಟ್ವಾಳರೇ ಅಲ್ಲಿ ನಿಮ್ಮ ಸೀಟು ಖಾಲಿ ಆಗಿದೆ ಇಲ್ಲಿ ಬರಬೇಡಿ ಎಲ್ಲರೂ ಸಂಜೀವ ಮಠಂದೂರು ತರ ಆಗಬೇಕು ಅಂತೀರಾ ಪುತ್ತೂರಿನವರು ಒಳ್ಳೆಯವರಿದ್ದಾರೆ. ಹಾಗೆ ಹೇಳಬೇಡಿ ಎಂದು ಮಾಧ್ಯಮದ ಮುಂದೆ ಶಾಸಕ ಅಶೋಕ್‌ ಕುಮಾ‌ರ್ ರೈ ಸ್ಪಷ್ಟನೆ ನೀಡಿದ್ದಾರೆ.




Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version