ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾದರೆ ಜಾರಿಯಾಗಲ್ವಾ ವೇತನ ಆಯೋಗದ ವರದಿ?

Published

on

ಬೆಂಗಳೂರು, ಮೇ.18:ಲೋಕಸಭಾ ಚುನಾವಣೆ ಮುಗಿದು ಫಲಿತಾಂಶ ಬೇಗ ಬರಲಿ ಎಂದು ಕಾಯುತ್ತಿರುವವರು ರಾಜಕೀಯ ಪಕ್ಷಗಳು ಮಾತ್ರವಲ್ಲ ಸರ್ಕಾರಿ ನೌಕರರು ಕೂಡ ಈ ಸಾಲಿನಲ್ಲಿದ್ದಾರೆ. ರಾಜ್ಯದಲ್ಲಿ ಏಳನೇ ವೇತನ ಆಯೋಗದ ವರದಿ ಅನುಷ್ಠಾನಕ್ಕಾಗಿ, ಕೇಂದ್ರದಲ್ಲಿ ಎಂಟನೇ ವೇತನ ಆಯೋಗಕ್ಕಾಗಿ ಸರ್ಕಾರಿ ನೌಕರರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಏಳು ಹಂತಗಳಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಐದು ಹಂತಗಳ ಮತದಾನಕ್ಕೆ ದೇಶ ಸಿದ್ಧವಾಗುತ್ತಿದೆ. ಮತದಾನ ಎಲ್ಲಾ ಮುಗಿದು ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ. ಇದಾದ ಬಳಿಕ ಚುನಾವಣಾ ಮಾದರಿ ನೀತಿ ಸಂಹಿತೆ ಕೂಡ ಸಡಿಲವಾಗಲಿದೆ. ಇದಕ್ಕಾಗಿ ಸರ್ಕಾರಿ ನೌಕರರು ಕಾಯುತ್ತಿದ್ದಾರೆ. ಇದರ ನಡುವೆ ನೌಕರರ ತಲೆಗೆ ಮತ್ತೊಂದು ಚಿಂತೆ ಅಂಟಿಕೊಂಡಿದೆ. ಅದೇ ಚುನಾವಣಾ ಫಲಿತಾಂಶ ವರದಿ ಅನುಷ್ಠಾನದ ಮೇಲೆ ಪರಿಣಾಮ ಬೀರಲಿದೆಯೇ ಎಂಬುದು.
ಕಾಂಗ್ರೆಸ್ ಗೆಲುವಿನ ಮೇಲೆ ವರದಿ ಅನುಷ್ಠಾನವೇ?
ಹೌದು… ರಾಜ್ಯದಲ್ಲಿ ಕಾಂಗ್ರೆಸ್ ಕಡಿಮೆ ಸ್ಥಾನಗಳನ್ನು ಗಳಿಸಿದರೆ ಅಥವಾ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟಕ್ಕೆ ಹಿನ್ನಡೆಯಾದರೆ ರಾಜ್ಯದಲ್ಲಿ ಏಳನೇ ವೇತನ ಆಯೋಗದ ವರದಿ ಅನುಷ್ಠಾನಕ್ಕೆ ತೊಂದರೆ ಆಗಲಿದೆಯೇ ಎಂಬ ಚಿಂತೆ ಸರ್ಕಾರಿ ನೌಕರರನ್ನು ಕಾಡುತ್ತಿದೆ. ಹೀಗಾಗಿಯೇ ಲೋಕಸಭಾ ಚುನಾವಣೆಯ ಫಲಿತಾಂಶದತ್ತ ಮುಖ ಮಾಡಿದ್ದಾರೆ.




7ಥ್ಯಾಂಕ್ಸ್ ಪೆ ಕಮಿಷನ್ : ನೀತಿ ಸಂಹಿತೆ, ಆರ್ಥಿಕ ಬಿಕ್ಕಟ್ಟು.7ನೇ ವೇತನ ಆಯೋಗದ ವರದಿ ಜಾರಿಗೆ ನಿಧಾನಗತಿ
ಈಗಾಗಲೇ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾಗುವ ಒಂದು ದಿನದ ಹಿಂದೆ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ ರಾವ್ ಅಧ್ಯಕ್ಷತೆಯ 7ನೇ ವೇತನ ಆಯೋಗದ ವರದಿ ಸರ್ಕಾರದ ಕೈ ಸೇರಿದೆ. ಬೇಕು ಬೇಕು ಎಂದೇ ನೀತಿ ಸಂಹಿತೆ ಜಾರಿಯಾಗುವ ಒಂದು ದಿನದ ಮೊದಲು ವರದಿ ಸ್ವೀಕರಿಸಲಾಗಿದೆ ಎಂಬ ಆರೋಪ ಕೂಡ ಸರ್ಕಾರದ ಮೇಲಿದೆ. ಹೀಗಿರುವಾಗ ಸರ್ಕಾರದ ಬಗ್ಗೆ ನೌಕರರು ಆತಂಕ ಹೊಂದಿರುವುದರಲ್ಲಿ ಎರಡು ಮಾತಿಲ್ಲ.

ಕಾಂಗ್ರೆಸ್‌ಗೆ ಹಿನ್ನಡೆ ಆದರೆ ಬದಲಾಗುತ್ತಾ ಸರ್ಕಾರದ ನಿರ್ಧಾರ?
ಇನ್ನು, ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಕಾಂಗ್ರೆಸ್ ಮೈತ್ರಿಕೂಟಕ್ಕೆ ಹಿನ್ನಡೆಯಾದರೆ ರಾಜ್ಯದಲ್ಲಿಯೂ ವರದಿ ಅನುಷ್ಠಾನಕ್ಕೆ ಅಡ್ಡಿಯಾಗುತ್ತೆ ಎನ್ನುತ್ತಾರೆ ಕೆಲವು ಸರ್ಕಾರಿ ನೌಕರರು. ಚುನಾವಣಾ ಫಲಿತಾಂಶ ಕಾಂಗ್ರೆಸ್‌ಗೆ ಉಲ್ಟಾ ಹೊಡೆದರೆ ಆರ್ಥಿಕ ಬಿಕ್ಕಟ್ಟಿನ ನೆಪದಲ್ಲಿ ವರದಿ ಜಾರಿ ಮಾಡದೆ ಇರಬಹುದು ಎಂಬ ಊಹಾಪೋಹಗಳು ಕೂಡ ರಾಜ್ಯ ಸರ್ಕಾರಿ ನೌಕರರರ ಒಳಗಡೆ ಓಡಾಡುತ್ತಿದೆ.
ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ ರಾವ್ ಅಧ್ಯಕ್ಷತೆಯ 7ನೇ ವೇತನ ಆಯೋಗವು ಸರ್ಕಾರಿ ನೌಕರರಿಗೆ ಮೂಲ ವೇತನದಲ್ಲಿ 27.50% ಹೆಚ್ಚಳ ಹಾಗೂ ಅಸ್ತಿತ್ವದಲ್ಲಿರುವ ಮೂಲ ವೇತನವನ್ನು 17 ಸಾವಿರ ರೂಪಾಯಿಗಳಿಂದ 27 ಸಾವಿರ ರೂಪಾಯಿಗಳಿಗೆ ಏರಿಸಬೇಕು ಎಂಬ ಶಿಫಾರಸು ಮಾಡಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಬರೋಬ್ಬರಿ ಮಾಸಿಕ 1.4 ಸಾವಿರ ಕೋಟಿ, ವರ್ಷಕ್ಕೆ ಸರಾಸರಿ 17 ಸಾವಿರ ಕೋಟಿ ರೂಪಾಯಿ ಹೊರೆ ಬೀಳಲಿದೆ. ಹೀಗಾಗಿ ಆರ್ಥಿಕ ಬಿಕ್ಕಟ್ಟಿನ ನೆಪ ಹೂಡಬಹುದು ಎನ್ನಲಾಗುತ್ತಿದೆ.
ಗ್ಯಾರಂಟಿ ಯೋಜನೆಗಳಿಗಾಗಿ ವರದಿ ಅನುಷ್ಠಾನಕ್ಕೆ ಹಿಂದೇಟು!?
ಕೆ. ಸುಧಾಕರ ರಾವ್ ವರದಿ ಅನುಷ್ಠಾನ ಮಾಡಿದರೆ ಸರ್ಕಾರದ ಬೊಕ್ಕಸದ ಮೇಲೆ ವರ್ಷಕ್ಕೆ ಸರಾಸರಿ 17 ಸಾವಿರ ಕೋಟಿ ರೂಪಾಯಿ ಹೊರೆ ಬೀಳಲಿದೆ. ಈಗಾಗಲೇ ಕಾಂಗ್ರೆಸ್ ತನ್ನ ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ಬಜೆಟ್‌ನಿಂದ ಹಣ ತೆಗೆದಿರಿಸಿದೆ. ಯೋಜನೆಗಳಿಗೆ ಕೋಟ್ಯಾಂತರ ರೂಪಾಯಿ ಬೇಕಾದ ಕಾರಣ ಈ ಹೊಸ ಹೊರೆಗೆ ಇಷ್ಟೊಂದು ಹಣ ಹಾಕುವುದು ಅಷ್ಟು ಸಲೀಸಲ್ಲ ಎನ್ನಲಾಗುತ್ತಿದೆ.

ಸರ್ಕಾರವೆನೋ ಬಜೆಟ್‌ನಲ್ಲಿ ವೇತನ ಆಯೋಗದ ವರದಿ ಜಾರಿಗಾಗಿ ಹಣವನ್ನು ತೆಗೆದಿರಿಸುವ ಘೋಷಣೆ ಮಾಡಿದೆ. ಲೋಕಸಭಾ ಚುನಾವಣಾ ನೀತಿ ಸಂಹಿತೆ ಸಡಿವಾದ ಬಳಿಕ ವರದಿ ಅನುಷ್ಠಾನ ಮಾಡುವ ಭರವಸೆ ಕೂಡ ನೀಡಿದೆ. ಆದರೆ, ರಾಜಕೀಯ ಬೆಳವಣಿಗೆಗಳ ನಡುವೆ ಸರ್ಕಾರಿ ನೌಕರರ ಆತಂಕ ಮಾತ್ರ ಇನ್ನು ಕಡಿಮೆಯಾಗಿಲ್ಲ. ವರದಿ ಜಾರಿಯಾಗುವ ತನಕ ಅವರ ಆತಂಕ ಕಡಿಮೆಯಾಗುವ ಯಾವ ಲಕ್ಷಣಗಳು ಇಲ್ಲ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version