Published
7 months agoon
By
Akkare Newsಬೆಳ್ತಂಗಡಿ, ಮೇ 20 ಚಾರ್ಮಾಡಿ ರಸ್ತೆಯ ತಿರುವಿನಲ್ಲಿ ಮುಂದೆ ಸಾಗಲಾಗದೇ 32 ಚಕ್ರದ ಬೃಹತ್ ಕಂಟೈನರ್ ಲಾರಿಯೊಂದು ಸಿಲುಕಿ ಸುಮಾರು 2 ಗಂಟೆಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತವಾದ ಘಟನೆ ಭಾನುವಾರ ನಡೆದಿದೆ.
ಲಾರಿಯ ಮುಂಭಾಗ ಮಣ್ಣಿನಲ್ಲಿ ಹೂತು ಹೋದ ಪರಿಣಾಮ ರಸ್ತೆಯ ತಿರುವಿನಲ್ಲಿ ಸಿಲುಕಿಕೊಂಡಿದೆ. ಲಾರಿಯ ಬದಿ ಇದ್ದ ಸ್ವಲ್ಪ ಜಾಗದಲ್ಲಿ ಬೇರೆ ವಾಹನಗಳು ಸಂಚಾರ ಮಾಡುತ್ತಿದ್ದವು. ಬಳಿಕ ಈ ಜಾಗದಲ್ಲಿ ಕೆಎಸ್ಆರ್ ಟಿಸಿ ಬಸ್ ಹೂತು ಹೋಗಿ ರಸ್ತೆ ಬಂದ್ ಆಗಿದೆ. ಪರಿಣಾಮ ಸುಮಾರು 3 ಕಿ. ಮೀ ನಷ್ಟು ದೂರ ವಾಹನಗಳು ನಿಂತಿದ್ದವು.
ಇನ್ನು ಭಾನುವಾರ ರಾತ್ರಿ ಚಾರ್ಮಾಡಿ ಘಾಟಿಯ 6ನೇ ತಿರುವಿನಲ್ಲಿ ಕೆಎಸ್ಆರ್ ಟಿಸಿ ಬಸ್ ರಸ್ತೆ ಮಧ್ಯೆ ಕೆಟ್ಟು ನಿಂತಿದೆ. ಪರಿಣಾಮ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಯಿತು.