ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಸರಕಾರದ ಬೊಕ್ಕಸಕ್ಕೆ ಭರ್ಜರಿ “ಕಿಕ್” ಕೊಟ್ಟ ಮದ್ಯಾಪ್ರಿಯರು ಶೇ15 ರಷ್ಟು ಅಧಿಕ ಲಾಭ

Published

on

ಈ ವರ್ಷ ರಾಜ್ಯದ ಬೊಕ್ಕಸಕ್ಕೆ ಮದ್ಯಪ್ರಿಯರು ಭರ್ಜರಿ ಆದಾಯವನ್ನು ನೀಡಿದ್ದಾರೆ. ಪ್ರತಿ ವರ್ಷಕ್ಕಿಂತ ಈ ವರ್ಷ ರಾಜ್ಯದ ಮದ್ಯ ಮಾರಾಟ ದಾಖಲೆ ಬರೆದಿದೆ. ಸರ್ಕಾರ ಅಂದುಕೊಂಡಿದ್ದ ಟಾರ್ಗೆಟ್​​​ಗಿಂತ ಹೆಚ್ಚಿನ ಮದ್ಯ ಮಾರಾಟವಾಗಿದ್ದು ಅಬಕಾರಿ ಇಲಾಖೆಗೆ ಕೋಟಿ ಕೋಟಿ ಆದಾಯ ಬಂದಿದೆ. ರಾಜ್ಯದ ಪ್ರಮುಖ ಆದಾಯದ ಮೂಲ ಅಂದರೆ ಅದು ಅಬಕಾರಿ ಇಲಾಖೆ. ಅಬಕಾರಿ ಇಲಾಖೆಯಿಂದ ಈ ಬಾರಿ ಭರ್ಜರಿ ಲಾಭವನ್ನ ಸರ್ಕಾರ ಮಾಡಿದೆ. ಕಳೆದ ವರ್ಷಕ್ಕೆ ಹೊಲಿಸಿದರೆ ಈ ವರ್ಷ ಶೇ15 ರಷ್ಟು ಮದ್ಯ ವರಮಾನ ಹೆಚ್ಚಾಗಿದೆ. ಈ ವರ್ಷ ಚುನಾವಣಾ

ವರ್ಷವಾಗಿರುವುದರಿಂದ ರಾಜ್ಯದಲ್ಲಿ ಮದ್ಯ ಮಾರಾಟ ದಾಖಲೆ ಬರದಿದೆ.ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಕಿಕ್ ಕೊಟ್ಟ ಮದ್ಯಪ್ರಿಯರು. ರಾಜ್ಯದಲ್ಲಿ ಮೂರು ಬಾರಿ ದರ ಏರಿಕೆ ನಡುವೆಯೂ ಮದ್ಯ ಮಾರಾಟ ಬಾರಿ ಹೆಚ್ಚಳವಾಗಿದ್ದು 2023-24 ನೇ ಸಾಲಿನಲ್ಲಿ ಸಾವಿರಾರು ಕೋಟಿ ರೂಪಾಯಿ ಸರ್ಕಾರದ ಖಜಾನೆಗೆ ಬಂದಿದೆ. ಅಬಕಾರಿ ಇಲಾಖೆಗೆ ಸರ್ಕಾರ 34.500 ಕೋಟಿ ಟಾರ್ಗೆಟ್ ನೀಡಿತ್ತು. ಈ ಆರ್ಥಿಕ ವರ್ಷದಲ್ಲಿ ಬರೋಬ್ಬರಿ 34.628 ಕೋಟಿ ಆದಾಯ ಸಂಗ್ರಹ ಮಾಡುವ ಮೂಲಕ ಅಬಕಾರಿ ಇಲಾಖೆ ಟಾರ್ಗೆಟ್​​ಗಿಂತ 128 ಕೋಟಿ ಅಧಿಕ ಸಂಗ್ರಹ ಮಾಡಿದೆ.


ಕಳೆದ ವರ್ಷ ಅಬಕಾರಿ ಇಲಾಖೆಗೆ 32,000 ಕೋಟಿ ಟಾರ್ಗೆಟ್ ನೀಡಲಾಗಿತ್ತು, ಆ ಸಮಯದಲ್ಲಿ 29,920 ಕೋಟಿ ರೂಪಾಯಿಯನ್ನ ಅಬಕಾರಿ ಇಲಾಖೆ ಸಂಗ್ರಹ ಮಾಡಿತ್ತು. ಈ ವರ್ಷದಲ್ಲಿ ದರ ಏರಿಕೆಯ ನಡುವೆಯೂ ಮದ್ಯಮಾರಾಟ ಭರ್ಜರಿಯಾಗಿ ನಡೆದಿದ್ದು ಅತ್ಯಧಿಕ ಆದಾಯ ಸಂಗ್ರಹವಾಗಿದೆ. ಈ ವರ್ಷ ಚುನಾವಣಾ ವರ್ಷವಾಗಿರುವುದರಿಂದ ಈ ಸಲ‌ ಮದ್ಯ ಮಾರಾಟ ಕೂಡ ಹೆಚ್ಚಾಗಿದ್ದು ರಾಜಕೀಯ ಸಮಾವೇಶಗಳು, ಕಾರ್ಯಕರ್ತರ ಸಭೆಗಳ ನಡೆದಿರುವುದು ಸಹ ಟಾರ್ಗೆಟ್ ಮುಟ್ಟಲು ಆಗಲು ಕಾರಣವಾಗಿದೆ ಎನ್ನಲಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version