Published
7 months agoon
By
Akkare Newsಮಂಗಳೂರು: ಮನೆಯಿಂದ ಹೊರಗೆ ತೆರಳಿದ್ದ ತಾಯಿ ಮತ್ತು ಮಗು ನಾಪತ್ತೆಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ನಾಪತ್ತೆಯಾಗಿರುವ ಕುರಿತು ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೈಕಂಪಾಡಿ ಮೀನಕಳಿಯ ನಿವಾಸಿಗಳಾಗಿರುವ ಶ್ವೇತಾ(31) ಮತ್ತು ಇಶಿಕಾ(6) ನಾಪತ್ತೆಯಾದ ತಾಯಿ ಹಾಗೂ ಮಗಳು ಎಂದು ತಿಳಿದು ಬಂದಿದೆ.
ಮೇ 29 ರಂದು ಮಧ್ಯಾಹ್ನ 3 ಗಂಟೆ ಹೊತ್ತಿಗೆ ತಾಯಿ ಮನೆಯಿಂದ ಗಂಡನ ಮನೆ ಇರುವ ಕೂಳೂರಿಗೆ ಹೋಗಿ ಬರುತ್ತೇನೆ ಎಂದು ಪುತ್ರಿ ಇಶಿಕಾ ಜೊತೆ ತೆರಳಿದ್ದ ಇಶಿಕಾ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ತಾಯಿ ಮತ್ತು ಮಗಳ ಬಗ್ಗೆ ಮಾಹಿತಿ ಸಿಕ್ಕಿದರೆ ಕೂಡಲೇ ಪಣಂಬೂರು ಪೊಲೀಸರನ್ನು ಸಂಪರ್ಕಿಸುವಂತೆ ಕೋರಲಾಗಿದೆ. ಮಾಹಿತಿ ಸಿಕ್ಕಿದಲ್ಲಿ 9480805331 ಮತ್ತು 0824-222053 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.