Published
6 months agoon
By
Akkare Newsಪೊಲೀಸರು ಸ್ಥಳ ಭೇಟಿ ಮಾಡಿ ಪರಿಶೀಲನೆ ಮಾಡಿದಾಗ ಮ್ಯಾನೇಜರ್ ಶ್ರೀಧರ್ ಫಾರ್ಮ್ ಹೌಸ್ ಪಕ್ಕದಲ್ಲಿ ರಕ್ತಕಾರಿ ಮೃತಪಟ್ಟಿದ್ದನು. ಒಂದು ವರ್ಷಗಳ ಕಾಲ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದ ಶ್ರೀಧರ್, ಫಾರ್ಮ್‌ಹೌಸ್ ಪಕ್ಕದ ಕಲ್ಲು ಬಂಡೆ ಮೇಲೆ ಅನಾಥ ಶವವಾಗಿ ಪತ್ತೆಯಾಗಿದ್ದಾರೆ. ಸುಮಾರು 2 ಎಕರೆ 36ಗುಂಟೆ ಪ್ರದೇಶದಲ್ಲಿರುವ ಫಾರ್ಮ್ ಹೌಸ್ ನಿರ್ಮಾಣವಾಗುತ್ತಿದೆ. ನನ್ನ ಸಾವಿಗೆ ನಾನೇ ಕಾರಣ, ಒಂಟಿತನ ಕಾಡುತ್ತಿದೆ ಎಂದು ಡೆತ್ ಬರೆದಿಟ್ಟು ಸ್ಯೂಸೈಡ್ ಮಾಡಿಕೊಂಡಿದ್ದಾರೆ.
ಈ ಘಟನೆಯ ಬೆನ್ನಲ್ಲಿ ಆನೇಕಲ್ ಪೊಲೀಸ್ ಠಾಣೆಯಲ್ಲಿ UDR ದಾಖಲು ಮಾಡಿಕೊಂಡಿದ್ದಾರೆ. ದರ್ಶನ್ ಫಾರ್ಮ್‌ಹೌಸ್ ಮ್ಯಾನೇಜರ್ ಸಾವಿಗೂ ಮುನ್ನ ಬರೆದಿಟ್ಟಿರುವ ಡೆತ್‌ನೋಟ್ ಅನುಮಾನ ಹುಟ್ಟು ಹಾಕುತ್ತಿದೆ. ಡೆತ್ ನೋಟ್ ಅನ್ನು ಸ್ವತಃ ತಾನೇ ಬರೆದಿಟ್ಟಿರುವ ಮ್ಯಾನೇಜರ್ ಶ್ರೀಧರ್ ಡೆತ್ ನೋಟ್ ಮೇಲೆ ಸಹಿ ಹಾಕುವುದು ಬಿಟ್ಟು ಹೆಬ್ಬೆಟ್ಟು ಒತ್ತಿದ್ದಾನೆ. ಇದು ಅನುಮಾನಕ್ಕೆ ಕಾರಣವಾಗಿದೆ. ಜೊತೆಗೆ, ಸಾಯುವ ಮುನ್ನ ಸೆಲ್ಫಿ ವಿಡಿಯೋವೊಂದನ್ನು ಕೂಡ ಮಾಡಿದ್ದಾನೆ. ಅದರಲ್ಲಿ ಯಾವುದೋ ಕಾರಣದಿಂದ ನನ್ನ ಪರ್ಸನಲ್ ಒಂಟಿತನ ಕಾಡುತ್ತಿದೆ. ಬದುಕುವ ಆಸೆಯಿಲ್ಲ, ನನ್ನ ಸಾವಿಗೆ ನಾನೇ ಕಾರಣ. ನನ್ನ ಸಾವಿನ ಕಾರಣ ಹಾಗೂ ಹಿನ್ನೆಲೆಯನ್ನು ಇಟ್ಟುಕೊಂಡು ಸ್ನೇಹಿತರು, ಕುಟುಂಬ ಸದಸ್ಯರು ಸೇರಿದಂತೆ ಯಾರೊಬ್ಬರಿಗೂ ತೊಂದರೆ ಕೊಡಬೇಡಿ. ನಾನು ಯಾರಿಗೆ ಫೋನ್ ಮಾಡಿದ್ದೆ, ಅದು ಇದು ಎಂದು ಯಾರಿಗೂ ಪೊಲೀಸರು ತೊಂದರೆ ಕೊಡಬೇಡಿ. ನಮ್ಮ ಮನೆಯಲ್ಲಿ ಅಪ್ಪ, ಅಮ್ಮ, ಸಹೋದರಿಯರು ಸೇರಿ ಎಲ್ಲರಿಗೂ ಹೇಳುತ್ತಿದ್ದೇನೆ, ನನ್ನ ಸಾವಿಗೆ ನಾನೇ ಕಾರಣ ಎಂದು ಹೇಳಿದ್ದಾರೆ.
ಒಟ್ಟಾರೆ, ಮ್ಯಾನೇಜರ್ ಶ್ರೀಧರ್ ಸಾಯುವ ಮುನ್ನ ಮಾಡಿದ 1 ನಿಮಿಷದ ವಿಡಿಯೋದಲ್ಲಿ ನನ್ನ ಸಾವಿಗೆ ನಾನೇ ಕಾರಣ ಎನ್ನುವುದನ್ನು 10ಕ್ಕೂ ಹೆಚ್ಚು ಬಾರಿ ಹೇಳಿಕೊಂಡಿದ್ದಾನೆ. ಇದರಿಂದ ಆತನ ಸಾವಿನ ಸುತ್ತ ಅನುಮಾನದ ಹುತ್ತ ಕಾಣುತ್ತಿದೆ.