Published
6 months agoon
By
Akkare Newsಬೆಳ್ತಂಗಡಿ : ಬೆಳ್ಳಂಬೆಳಗ್ಗೆ ಉಜಿರೆಯಲ್ಲಿ ಭೀಕರ ಅಪಘಾ*ತ ಸಂಭವಿಸಿದೆ. ಡಿವೈಡರ್ ಗೆ ಕಾರು ಡಿ*ಕ್ಕಿ ಹೊಡೆದು ಚಾಲಕ ಮೃ*ತಪಟ್ಟಿರುವ ಘಟನೆ ಉಜಿರೆ ಮುಖ್ಯದ್ವಾರದಿಂದ ಕಾಲೇಜು ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಸಂಭವಿಸಿದೆ. ಈ ಭೀಕರ ಅಪಘಾ*ತದಲ್ಲಿ ಬೆಳ್ತಂಗಡಿ ಪ್ರಜ್ವಲ್ ಕಾಂಪ್ಲೆಕ್ಸ್ ಮಾಲೀಕರ ಪುತ್ರ ಪ್ರಜ್ವಲ್ ನಾಯಕ್ (35) ಮೃ*ತಪಟ್ಟಿದ್ದಾರೆ.
ಇಂದು(ಜೂ.29) ಮುಂಜಾನೆ 4 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಕಾಲೇಜು ರಸ್ತೆಯಿಂದ ಬೆಳ್ತಂಗಡಿ ಸಾಗುವ ಮಧ್ಯೆ ಡಿವೈಡರ್ ನ ಬೀದಿ ದೀಪದ ಕಂಬಗಳಿಗೆ ಕಾರು ಡಿ*ಕ್ಕಿ ಹೊಡೆದಿದೆ. ಡಿ*ಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ನಜ್ಜು ಗುಜ್ಜಾದರೆ, ಒಂದು ವಿದ್ಯುತ್ ಕಂಬ ಬುಡ ಸಮೇತ ಕಿತ್ತು ಬಿದ್ದಿದೆ. ಅಪಘಾ*ತದ ರಭಸಕ್ಕೆ ಚಾಲಕ ಪ್ರಜ್ವಲ್ ತಲೆಗೆ ಗಂಭೀ*ರ ಗಾಯವಾಗಿದ್ದು, ಆತನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃ*ತಪಟ್ಟಿದ್ದಾರೆ.
ಅಪಘಾತ*ದಲ್ಲಿ ನಿಧ*ನ ಹೊಂದಿದ ಪ್ರಜ್ವಲ್ ನಾಯಕ್ ಅವರು ಬೆಳ್ತಂಗಡಿ ಸಂತೆಕಟ್ಟೆ ನಿವಾಸಿ ಹೆಸರಾಂತ ಉದ್ಯಮಿ, ಸಂಘ ಸಂಸ್ಥೆಯಲ್ಲಿ ಸಕ್ರಿಯರಾಗಿದ್ದ, ಪ್ರಜ್ವಲ್ ಕಾಂಪ್ಲೆಕ್ಸ್ ಮಾಲೀಕ ಪ್ರಮೋದ್ ಆರ್. ನಾಯಕ್ ಅವರ ಪುತ್ರ.
ಪ್ರಜ್ವಲ್ ಉಜಿರೆಯ ಡಿ.ಎಂ. ಗೌಡ ಕಾಂಪ್ಲೆಕ್ಸ್ ನಲ್ಲಿ ಗೇಮಿಂಗ್ ಶಾಪ್ ಮಾಲೀಕ ಹಾಗೂ ಉದ್ಯಮಿಯಾಗಿದ್ದರು.