ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಟ್ರಕ್ ಮಾಲೀಕರ ಸಮಸ್ಯೆ ಪರಿಹಾರಕ್ಕೆ ಪ್ರಾಧಿಕಾರ ರಚನೆಗೆ ಟ್ರಕ್ ಮಾಲಕರ ಒತ್ತಾಯ.ಅನಿವಾರ್ಯವಾದರೇ ಬೀದಿ ಹೋರಾಟಕ್ಕೂ ಸಿದ್ದ

Published

on

ಪುತ್ತೂರು /ಮಂಗಳೂರು,, ಜು.4: ಟ್ರಕ್ ಟರ್ಮಿನಲ್, ಜಿಎಸ್ಟಿ, ಟೋಲ್, ಲೋಡಿಂಗ್ ಮತ್ತು ಅನ್ಲೋಡಿಂಗ್ ವೆಚ್ಚ, ಡೀಸೆಲ್ ಬೆಲೆ ಏರಿಕೆ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರವು ಪ್ರಾಧಿಕಾರ ರಚನೆ ಮಾಡಬೇಕು ಎಂದು ದ.ಕ. ಜಿಲ್ಲಾ ಟ್ರಕ್ ಓನರ್ಸ್ ಅಸೋಸಿಯೇಶನ್ ಒತ್ತಾಯಿಸಿದೆ.

ಈ ಬಗ್ಗೆ ಈಗಾಗಲೇ ಸಂಬಂಧಪಟ್ಟವರಿಗೆ ಹಲವಾರು ರೀತಿಯಲ್ಲಿ ಮನವಿ, ಹೋರಾಟ ಮಾಡಲಾಗಿದ್ದರೂ ಸ್ಪಂದನೆ ದೊರಕಿಲ್ಲ. ಮುಂದೆ ಬೀದಿ ಹೋರಾಟ ಮಾಡುವ ಅನಿವಾರ್ಯ ಎಂದು ಸುದ್ದಿಗೋಷ್ಟಿಯಲ್ಲಿ ಸಂಘದ ಅಧ್ಯಕ್ಷ ಸುಶಾಂತ್ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

 

ಜಿಎಸ್ಟಿ ಜಾರಿಯಾದ ಬಳಿಕ 2014ರಲ್ಲಿ 24 ಲಕ್ಷ ರೂ.ಗಳಿದ್ದ ಟ್ರಕ್ ವಾಹನಗಳ ಬೆಲೆ ಇದೀಗ 45 ಲಕ್ಷ ರೂ.ಗಳಿಗೆ ಏರಿಕೆಯಾಗಿದೆ. ಅನ್ಲೋಡಿಂಗ್ ಹಾಗೂ ಲೋಡಿಂಗ್ ವೆಚ್ಚವನ್ನು ಟ್ರಕ್ ಮಾಲಕರೇ ಭರಿಸಬೇಕಾಗಿದೆ. ಇದರ ಜತೆ ಟೋಲ್ ಗಳ ಬರೆಯೂ ಟ್ರಕ್ ಮಾಲಕರ ಮೇಲೆ ಬೀಳುತ್ತಿದೆ. ಇವೆಲ್ಲದರ ನಡುವೆ ಡೀಸೆಲ್ ಬೆಲೆ ಏರಿಕೆಯು ಮತ್ತಷ್ಟು ಹೊರೆಯನ್ನು ನೀಡುತ್ತಿದೆ ಎಂದು ಅವರು ಆರೋಪಿಸಿದರು.
ಈಗಾಗಲೇ ಎಲ್ಲಾ ವಾಹನಗಳಲ್ಲಿ ಜಿಪಿಎಸ್ ಹಾಗೂ ಪ್ಯಾನಿಕ್ ಬಟನ್ ವ್ಯವಸ್ಥೆ ಇದೆ. ಆದರೆ ಸರಕಾರ ಹೊಸತಾಗಿ ಜಿಪಿಎಸ್ ಅಳವಡಿಸಲು ಒತ್ತಾಯಿಸುತ್ತಿರುವ ಜತೆಗೆ ವಾಹನದ ಎಲ್‌ಇಡಿ ತೆಗೆಯಲು ಸೂಚನೆ ನೀಡಿದೆ. ಟ್ರಕ್ ಮಾಲಕರು ಎದುರಿಸುತ್ತಿರುವ ಇಂತಹ ಗಂಭೀರ ಸಮಸ್ಯೆಗಳಿಗೆ ಪ್ರಾಧಿಕಾರದ ಅಗತ್ಯವಿದೆ.

ಇದೇ ವೇಳೆ ನಗರದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕಾಗಿ ಬೇಡಿಕೆ ಇನ್ನೂ ಕಡತಗಳಲ್ಲಿಯೇ ಬಾಕಿಯಾಗಿದೆ. ಸೂಕ್ತ ಜಾಗವನ್ನು ನಿಗದಿಪಡಿಸಲಾಗಿದ್ದರೂ ಎರಡು ವರ್ಷಗಳಿಂದ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ ಎಂದು ಪ್ರಧಾನ ಕಾರ್ಯದರ್ಶಿ ಸುನಿಲ್ ಡಿಸೋಜಾ ಆರೋಪಿಸಿದರು.
ಬ್ಯಾಂಕ್, ಫೈನಾನ್ಸ್ ಗಳಿಂದ ಸಾಲ ಪಡೆದು ಟ್ರಕ್ ಖರೀದಿಸಿ ವ್ಯವಹಾರ ನಡೆಸುತ್ತಿರುವ ಟ್ರಕ್ ಮಾಲಕರು ಈ ಎಲ್ಲಾ ಹೊರೆಗಳಿಂದ ಆರ್ಥಿಕವಾಗಿ ಸಂಕಷ್ಟವನ್ನು ಎದುರಿಸುತ್ತಿದ್ದು, ಬ್ಯಾಂಕ್ಗಳ ಕಿರುಕುಳವನ್ನೂ ಅನುಭವಿಸುತ್ತಿದ್ದಾರೆ ಎಂದು ಗೌರವಾಧ್ಯಕ್ಷ ಸುಜಿತ್ ಆಳ್ವ ಹೇಳಿದರು.

 

ಸುದ್ದಿಗೋಷ್ಟಿಯಲ್ಲಿ ಗೌರವ ಸಲಹೆಗಾರ ಬಿ.ಎಸ್. ಚಂದ್ರು, ಜಂಟಿ ಕಾರ್ಯದರ್ಶಿ ನಯನ್ ಕುಮಾರ್ ಉಪಸ್ಥಿತರಿದ್ದರು.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version