Published
6 months agoon
By
Akkare Newsವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ವಿಟ್ಲ.ಗ್ರಾಮ ಪಂಚಾಯತ್ ಮಾಣಿಲ.ಪ್ರಗತಿ ಬಂಧು ಸ್ವ ಸಹಾಯ ಒಕ್ಕೂಟ ಮಾಣಿಲ ಶೌರ್ಯ ವಿಪತ್ತು ಘಟಕ ಕೇಪು ವಲಯ
ಇವುಗಳ ಸಹಯೋಗದಲ್ಲಿ ಬಂಟ್ವಾಳ ತಾಲೂಕಿನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮುರುವ ಮಾಣಿಲ ದಲ್ಲಿ ಪರಿಸರ ಮಾಹಿತಿ ಮತ್ತು ಗಿಡಗಳ ನಾಟಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಾಣಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಧರ್ ಬಾಳೆಕಲ್ಲು ಮಾತನಾಡಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರೀಕನ ಜವಾಬ್ದಾರಿ ಎಂದರು.
ಯೋಜನೆಯ ವಿಟ್ಲ ತಾಲೂಕು ಯೋಜನಾಧಿಕಾರಿ ರಮೇಶ್ ಪೂಜ್ಯರ ವಿಶೇಷ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯಾದಂಥ ದಶಲಕ್ಷ ಗಿಡ ನಾಟಿ ಕಾರ್ಯಕ್ರಮ ನಡೆಯುತ್ತಿದ್ದು, ಇದ್ದಕ್ಕೆ ಪೂರಕವಾಗಿ ನಮ್ಮ ನಮ್ಮ ಪರಿಸರದಲ್ಲಿ ಗಿಡ ನಾಟಿ ಮಾಡಿ ಪರಿಸರ ಸಂರಕ್ಷಣೆ ಮಾಡೋಣ ಎಂದರು.
ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್ ಬಾಲೆಕಲ್ಲು ಮಾತನಾಡಿ ಯೋಜನೆಯ ಕಾರ್ಯಕ್ರಮ ಪರಿಸರ ಸಂರಕ್ಷಣೆ ಪೂರಕವಾದ ಕಾರ್ಯಕ್ರಮ ಎಂದು ತಿಳಿಸಿ, ಈ ಕಾರ್ಯಕ್ರಮಗಳಿಗೆ ನಾವೆಲ್ಲರೂ ಕೈ ಜೋಡಿಸೋಣ ಎಂದರು
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ವಿಷ್ಣು ಕುಮಾರ್, ಶೋಭಾ, ಶಾಲಾ ಮುಖ್ಯ ಶಿಕ್ಷಕ ದಯಾನಂದ, ಒಕ್ಕೂಟದ ಅಧ್ಯಕ್ಷರಾದ ಕೃಷ್ಣ ಮೂಲ್ಯ, ವಿಪತ್ತು ಶೌರ್ಯ ಘಟಕದ ಅಧ್ಯಕ್ಷರಾದ ಈಶ್ವರ್ ನಾಯ್ಕ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೇಪು ಶ್ರೀ ಉಳ್ಳಾಲ್ತಿ ಶೌರ್ಯ ಘಟಕದ ಸದಸ್ಯರು, ಜ್ಞಾನವಿಕಾಸ ಸದಸ್ಯರು, ಒಕ್ಕೂಟದ ಸದಸ್ಯರು, ಶಾಲಾ ಮಕ್ಕಳು ಭಾಗವಹಿಸಿದ್ದರು.
ಕೇಪು ವಲಯ ಮೇಲ್ವಿಚಾರಕರಾಕ ಜಗದೀಶ್ ಸ್ವಾಗತಿಸಿ, ಮಾಣಿಲ ಸೇವಾಪ್ರತಿನಿಧಿ ಗುಲಾಬಿ ವಂದಿಸಿದರು.ಕೃಷಿ ಮೇಲ್ವಿಚಾರಕರಾದ ಚಿದಾನಂದ್ ಕಾರ್ಯಕ್ರಮ ನಿರೂಪಿಸಿದರು .